Home ಟಾಪ್ ಸುದ್ದಿಗಳು ಶಾಲಾ ಮಕ್ಕಳಿಗೆ ಸ್ವೆಟರ್ ನೀಡದೆ ವಂಚನೆ | ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ

ಶಾಲಾ ಮಕ್ಕಳಿಗೆ ಸ್ವೆಟರ್ ನೀಡದೆ ವಂಚನೆ | ದಲಿತ ಸಂಘರ್ಷ ಸಮಿತಿಯಿಂದ ತಮಟೆ ಚಳುವಳಿ

ಬೆಂಗಳೂರು; ಶಾಲಾ ಮಕ್ಕಳಿಗೆ ಸ್ವೆಟರ್ ಗಳನ್ನು ನೀಡದೇ ವಂಚನೆ ಮಾಡಿರುವ ಭ್ರಷ್ಟ ಬಿ.ಬಿ.ಎಂ.ಪಿ.ಅಧಿಕಾರಿಗಳ ವಿರುದ್ಧ ಬಿಬಿಎಂಪಿ ಕೇಂದ್ರ ಕಚೇರಿ ಮುಂದೆ ಕರ್ನಾಟಕ ದಲಿತ ಸಂಘರ್ಷ ಸಮಿತಿ(ರಿ)ಯಿಂದ ತಮಟೆ ಚಳವಳಿ ನಡೆಯಿತು. ಬಿಬಿಎಂಪಿ ಧೋರಣೆ ವಿರುದ್ಧ ಸ್ವೆಟರ್ ಗಳನ್ನು ಮಾರಾಟ ಮಾಡಿ ಬಂದ ಹಣವನ್ನು ಮುಖ್ಯಮಂತ್ರಿಗಳ ಪರಿಹಾರ ನಿಧಿ ಸಮರ್ಪಣೆ ಮಾಡಿ ವಿನೂತನವಾಗಿ ಪ್ರತಿಭಟನೆ ನಡೆಸಿತು.


ಸಂಘದ ಸಂಸ್ಥಾಪಕ ಅಧ್ಯಕ್ಷ ಡಾ.ಸಿ.ಎಸ್.ರಘು ಮತ್ತು ಸಂಘದ ಪದಾಧಿಕಾರಿಗಳು, ಭ್ರಷ್ಟ ಬಿಬಿಎಂಪಿ ಅಧಿಕಾರಿಗಳು, ಬಿಜೆಪಿ ಸರ್ಕಾರದ ವಿರುದ್ಧ ಘೋಷಣೆ ಕೂಗಿದರು.


ಪ್ರತಿಭಟನಕಾರರನ್ನು ಉದ್ದೇಶಿಸಿ ಮಾತನಾಡಿದ ಡಾ.ಸಿ.ಎಸ್.ರಘು, ಬಿ.ಬಿ.ಎಂ.ಪಿ.ಶಾಲಾ, ಕಾಲೇಜುಗಳಲ್ಲಿ ದಲಿತ, ಹಿಂದುಳಿದ ಮತ್ತು ಕಡು ಬಡ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಶಿಕ್ಷಣ ಪಡೆಯುತ್ತಿದ್ದಾರೆ. 2020-21ಸಾಲಿನಲ್ಲಿ ಬಿ.ಬಿ.ಎಂ.ಪಿ.ಮಕ್ಕಳಿಗೆ ಸ್ವೆಟರ್ ಗಳನ್ನು ನೀಡಲು ಅನುದಾನ ಮೀಸಲಿಡಲಾಗಿದೆ. ಬಿ.ಬಿ.ಎಂ.ಪಿ.ಕೆಲವು ಭ್ರಷ್ಟ ಅಧಿಕಾರಿಗಳು ಟೆಂಡರ್ ಕರೆಯದೇ 4ಜಿ ವಿನಾಯಿತಿ ಪಡೆದು ಕರ್ನಾಟಕ ಕೈಮಗ್ಗ ನಿಗಮಕ್ಕೆ ಸ್ವೆಟರ್ ಗಳನ್ನು ಸರಬರಾಜು ಮಾಡಲು ಆದೇಶ ನೀಡಿದ್ದಾರೆ ಎಂದು ಆರೋಪಿಸಿದರು.


ಒಂದೂವರೆ ವರ್ಷದಿಂದ ಕೊರೋನ ಸಾಂಕ್ರಮಿಕದಿಂದ ಶಾಲಾ, ಕಾಲೇಜುಗಳನ್ನು ಮುಚ್ಚಲಾಗಿದೆ. ಸ್ವೆಟರ್ ಗಳಿಗಾಗಿ 1ಒಂದು ಕೋಟಿ 76ಲಕ್ಷ ಹಣ ಪಾವತಿ ಮಾಡಲಾಗಿದೆ. ಅಂದಾಜು 16ಸಾವಿರಕ್ಕೂ ಹೆಚ್ಚು ಮಕ್ಕಳಿಗೆ ಸೈಟರ್ ಗಳನ್ನು ವಿತರಣೆ ಮಾಡದೇ ವಂಚನೆ ಎಸಗಿದೆ ಎಂದರು.

ಶ್ರೀಮಂತರ ಮಕ್ಕಳಂತೆ ನಮ್ಮ ಬಿ.ಬಿ.ಎಂ.ಪಿ.ಶಾಲಾ, ಕಾಲೇಜು ವಿದ್ಯಾರ್ಥಿಗಳು ಮಳೆ, ಚಳಿಯಿಂದ ರಕ್ಷಣೆ ಇಲ್ಲದೇ ತೊಂದರೆ ಎದುರಿಸುತ್ತಿದ್ದಾರೆ. ಸ್ವೆಟರ್ ವಿತರಣಾ ಯೋಜನೆ ಹಳ್ಳ ಹಿಡಿದಿದ್ದು. ಕೂಡಲೇ ವಿದ್ಯಾರ್ಥಿಗಳಿಗೆ ಸ್ವೆಟ್ಟರ್ ವಿತರಣೆ ಮಾಡಬೇಕು. ಭ್ರಷ್ಟ ಅಧಿಕಾರಿಗಳನ್ನು ಅಮಾನತು ಮಾಡಬೇಕು ಜತೆಗೆ ಖರೀದಿ ಹಗರಣದ ಬಗ್ಗೆ ಸೂಕ್ತ ತನಿಖೆ ನಡೆಸಬೇಕು ಎಂದು ಬಿಬಿಎಂಪಿ ಆಯುಕ್ತರಿಗೆ ಮನವಿ ಮಾಡಿದರು.

Join Whatsapp
Exit mobile version