ಡ್ರಗ್ಸ್ ಪ್ರಕರಣದ ಆರೋಪಿ​ ಕುಬ್ಬಾವಾಲಾ ಮುಸ್ತಫಾ ಯುಎಇಯಿಂದ ಭಾರತಕ್ಕೆ ಹಸ್ತಾಂತರ; ಸಿಬಿಐ

- Advertisement -

ನವದೆಹಲಿ: ಮಾದಕವಸ್ತು ತಯಾರಿಕಾ ಪ್ರಕರಣದಲ್ಲಿ ಪ್ರಮುಖ ಆರೋಪ ಹೊತ್ತಿದ್ದ ಆರೋಪಿ ಹಾಗೂ ಇಂಟರ್​ಪೋಲ್​ ರೆಡ್​ ನೋಟಿಸ್​ ಹೊಂದಿದ್ದ ಕುಬ್ಬಾವಾಲಾ ಮುಸ್ತಫಾನನ್ನು ಸಿಬಿಐ ಯುಎಇಯಿಂದ ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

- Advertisement -

ಇಂಟರ್‌ಪೋಲ್ ರೆಡ್​ ನೋಟಿಸ್​ ಎದುರಿಸುತ್ತಿರುವ ಮುಸ್ತಾಫಾ ಸಿಂಥೆಟಿಕ್ ಮಾದಕವಸ್ತು ತಯಾರಿಕೆ ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿದ್ದ. ಈತನ್ನು ಮುಂಬೈನ ಛತ್ರಪತಿ ಶಿವಾಜಿ ಮಹಾರಾಜ್​ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಂಡ ಕರೆ ತಂದಿದೆ.

ಸಿಬಿಐನ ಅಂತಾರಾಷ್ಟ್ರೀಯ ಪೊಲೀಸ್ ಸಹಕಾರ ಘಟಕ (ಐಪಿಸಿಯು) ಎನ್‌ಸಿಬಿಯು ಅಬುಧಾಬಿ ಸಹಯೋಗದೊಂದಿಗೆ ಯಶಸ್ವಿಯಾಗಿ ಹಸ್ತಾಂತರ ಪ್ರಕ್ರಿಯೆ ನಡೆಸಿದ್ದು, ಭಾರತಕ್ಕೆ ಕರೆತರುವಲ್ಲಿ ಯಶಸ್ವಿಯಾಗಿದೆ.

- Advertisement -

ಡ್ರಗ್ಸ್​ ಪ್ರಕರಣದಲ್ಲಿ ಮುಂಬೈ ಪೊಲೀಸರಿಗೆ ಬೇಕಾದ ಅಪರಾಧಿ ಈತ. ಮಹಾರಾಷ್ಟ್ರ ಸಾಂಗ್ಲಿಯಲ್ಲಿ ಸಿಂಥೆಟಿಕ್ ಡ್ರಗ್ಸ್ ತಯಾರಿಕಾ ಘಟಕವನ್ನು ಮುಂಬೈ ಪೊಲೀಸರು ಭೇದಿಸಿದ್ದರು. ಈ ವೇಳೆ, 126.141 ಕೆಜಿ ಮೆಫೆಡ್ರೋನ್ ಡ್ರಗ್ಸ್​ ವಶಕ್ಕೆ ಪಡೆದಿದ್ದರು. ಈ ತಯಾರಿಕಾ ಘಟಕವನ್ನು ವಿದೇಶದಿಂದಲೇ ಮುಸ್ತಫಾ ನಡೆಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದರು.

ಮುಸ್ತಫಾ ವಿರುದ್ಧ ಮುಂಬೈನಲ್ಲಿ ಆರೋಪಪಟ್ಟಿ ಸಲ್ಲಿಸಲಾಗಿದ್ದು, ವಿಶೇಷ ನ್ಯಾಯಾಲಯವು ಅವರ ವಿರುದ್ಧ ಬಂಧನ ವಾರಂಟ್ ಹೊರಡಿಸಿತ್ತು.

- Advertisement -


Must Read

Related Articles