Home ಕರಾವಳಿ ಉಳ್ಳಾಲ ನಗರ ಸಭಾ ವ್ಯಾಪ್ತಿಯ 12 ನೇ ವಾರ್ಡ್ ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆಯಿಂದ ರಸ್ತೆ...

ಉಳ್ಳಾಲ ನಗರ ಸಭಾ ವ್ಯಾಪ್ತಿಯ 12 ನೇ ವಾರ್ಡ್ ನಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷೆಯಿಂದ ರಸ್ತೆ ಕಾಮಗಾರಿಗೆ ಚಾಲನೆ

ತೊಕ್ಕೊಟ್ಟು: ಉಳ್ಳಾಲ ನಗರಸಭಾ ವ್ಯಾಪ್ತಿಯ ವಾರ್ಡ್ ಸಂಖ್ಯೆ 12 ರಲ್ಲಿ 2021 – 2022 ನೇ ಸಾಲಿನ ಪಂಚಾಯತ್ ನಿಧಿಯಿಂದ ಮಂಚಿಲ ಮುಖ್ಯ ರಸ್ತೆಯಲ್ಲಿ ರಸ್ತೆ ಕಾಮಗಾರಿಗೆ ನಗರ ಸಭೆ ಸ್ಥಾಯಿ ಸಮಿತಿ ಅಧ್ಯಕ್ಷೆ, ಸ್ಥಳೀಯ ಕೌನ್ಸಿಲರ್ ಝರೀನ ರವೂಫ್ ಚಾಲನೆ ನೀಡಿದರು.

ಪ್ರಸಕ್ತ ಕಾಮಗಾರಿಯು 12 ನೇ ವಾರ್ಡ್ ನ ಮಂಚಿಲ ಮುಖ್ಯ ರಸ್ತೆಯ ಎಡ ಬದಿಯಿಂದ ಪ್ರಾರಂಭವಾಗಿ ಅಬ್ದುಲ್ ಖಾದರ್ ಅವರ ಮನೆಯ ಮುಂಭಾಗದ ರಸ್ತೆಯ ವರೆಗೆ ಕಾಂಕ್ರೀಟ್ ರಸ್ತೆಯನ್ನು ನಿರ್ಮಿಸಲು ಯೋಜನೆ ಹಮ್ಮಿಕೊಂಡಿದೆ.

ಈ ಕಾರ್ಯಕ್ರಮದಲ್ಲಿ ಉಳ್ಳಾಲ ನಗರಸಭೆ ಅಧ್ಯಕ್ಷೆ ಚಿತ್ರಕಲಾ, ಉಪಾಧ್ಯಕ್ಷ ಅಯ್ಯೂಬ್ ಮಂಚಿಲ, ಎಸ್.ಡಿ.ಪಿ.ಐ ಬೂತ್ ಸಮಿತಿ ಸದಸ್ಯರಾದ ಫಾರೂಕ್, ಅನ್ಸಾರ್ ಸೇರಿದಂತೆ ಹಲವಾರು ಗಣ್ಯರು ಉಪಸ್ಥಿತರಿದ್ದರು.

Join Whatsapp
Exit mobile version