Home ಕರಾವಳಿ ಯೂರೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾಗಿ ಡಾ. ಬಿ.ಎಮ್. ಝೀಶಾನ್ ಹಮೀದ್ ನೇಮಕ

ಯೂರೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ ಅಧ್ಯಕ್ಷರಾಗಿ ಡಾ. ಬಿ.ಎಮ್. ಝೀಶಾನ್ ಹಮೀದ್ ನೇಮಕ

ಉಡುಪಿ: ಡಾ. ಬಿ.ಎಮ್. ಝೀಶಾನ್ ಹಮೀದ್ ಅವರು ಯೂರೋಲಾಜಿಕಲ್ ಸೊಸೈಟಿ ಆಫ್ ಇಂಡಿಯಾ (YOU-USI) 2022– 2024 ನೇ ಸಾಲಿನ ಅಧ್ಯಕ್ಷರಾಗಿ ನೇಮಕಗೊಂಡಿದ್ದಾರೆ.

ಡಾ. ಬಿ.ಎಮ್.ಝೀಶಾನ್ ಅವರು ಮಣಿಪಾಲದ ಕಸ್ತೂರ್ಬಾ ಆಸ್ಪತ್ರೆಯಲ್ಲಿ ಮೂತ್ರಶಾಸ್ತ್ರದ ಪ್ರಮುಖ ವೈದ್ಯರಲ್ಲಿ ಒಬ್ಬರು. ಪ್ರಸಕ್ತ ಅವರು ಮಂಗಳೂರಿನ ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿದ್ದಾರೆ. ಅವರು ಮಣಿಪಾಲ್ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಶನ್ ಅಡಿಯಲ್ಲಿರುವ ಪ್ರತಿಷ್ಠಿತ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನಲ್ಲಿ ತಮ್ಮ M.B.B.S, M.S. (ಜನರಲ್ ಸರ್ಜರಿ) ಮತ್ತು MCH (ಮೂತ್ರಶಾಸ್ತ್ರ) ಅಧ್ಯಯನ ಮಾಡಿದ್ದಾರೆ.

ಮಣಿಪಾಲದ ಕೆ.ಎಮ್.ಸಿ ಮೂತ್ರಶಾಸ್ತ್ರ ವಿಭಾಗದಲ್ಲಿ 9 ವರ್ಷಗಳಿಂದ ಸಂಪರ್ಕ ಹೊಂದಿದ್ದು, ಮೂತ್ರ ಸಮಸ್ಯೆ ರೋಗಿಗಳಿಗೆ ಚಿಕಿತ್ಸೆ ನೀಡುವಲ್ಲಿ ಅಪಾರ ಅನುಭವವನ್ನು ಹೊಂದಿದ್ದಾರೆ. ಅವರು ವಿವಿಧ ಪಬ್ಲಿಕೇಶನ್ ಅನ್ನು ನಿರ್ವಹಿಸಿದ್ದಾರೆ ಮತ್ತು ಮೂತ್ರಶಾಸ್ತ್ರಕ್ಕೆ ಸಂಬಂಧಿಸಿದಂತೆ ವಿವಿಧ ಸೆಮಿನಾರ್ ನಲ್ಲಿ ಸಕ್ರಿಯವಾಗಿ ಭಾಗವಹಿಸಿದ್ದಾರೆ. ಡಾ. ಝೀಶಾನ್ ವೈದ್ಯಕೀಯ ರಂಗದಲ್ಲಿ ಹೊಸ ಅವಿಷ್ಕಾರಗಳಲ್ಲಿ ತೀವ್ರ ಆಸಕ್ತಿಯನ್ನು ಹೊಂದಿದ್ದಾರೆ. ಮೂತ್ರಕೋಶದ ಕ್ಯಾನ್ಸರ್ ಚಿಕಿತ್ಸೆಗಾಗಿ ಹೊಸ ಉಪಕರಣವನ್ನು ಅಭಿವೃದ್ಧಿಪಡಿಸಲು ಅವರು 50 ಲಕ್ಷಗಳ ಸರ್ಕಾರದ ಅನುದಾನವನ್ನು ಸ್ವೀಕರಿಸಿದ್ದಾರೆ.

ಡಾ. ಝೀಶಾನ್ ಅವರು ಕಂಕನಾಡಿಯ ಫಾದರ್ ಮುಲ್ಲರ್ ಆಸ್ಪತ್ರೆ ಮತ್ತು ಮಂಗಳೂರಿನ ಇಂಡಿಯಾನ ಆಸ್ಪತ್ರೆಯಲ್ಲಿಯೂ ಸಮಾಲೋಚಕರಾಗಿ ಕೆಲಸ ನಿರ್ವಹಿಸುತ್ತಿದ್ದಾರೆ.

Join Whatsapp
Exit mobile version