Home ಟಾಪ್ ಸುದ್ದಿಗಳು ಭದ್ರಾವತಿ: ಹಿಜಾಬ್ ವಿಚಾರ ನೆಪವಾಗಿಸಿ ಗಲಭೆ ಸೃಷ್ಟಿಸಲು ಹುನ್ನಾರ ?

ಭದ್ರಾವತಿ: ಹಿಜಾಬ್ ವಿಚಾರ ನೆಪವಾಗಿಸಿ ಗಲಭೆ ಸೃಷ್ಟಿಸಲು ಹುನ್ನಾರ ?

ಭದ್ರಾವತಿ; ಹಿಜಾಬ್ ವಿಚಾರವನ್ನು ನೆಪವಾಗಿರಿಸಿಕೊಂಡು‌ ರಾಜ್ಯದ ಕೆಲ ಕಾಲೇಜುಗಳಲ್ಲಿ ನಡೆಯುತ್ತಿರುವ ದಿಢೀರ್ ಬೆಳವಣಿಗೆಗಳು ಶಾಂತಿಯುತ ಸಮಾಜದಲ್ಲಿ ಗಲಭೆ ಸೃಷ್ಟಿಸಲು ಕಾಣದ ಕೈಗಳು ಹುನ್ನಾರ ನಡೆಸುತ್ತಿರುವ ಸಂಶಯ ವ್ಯಕ್ತವಾಗಿದೆ.
ಶಿವಮೊಗ್ಗ ಜಿಲ್ಲೆಯ ಭದ್ರಾವತಿ ಪಟ್ಟಣದಲ್ಲಿರುವ ಪ್ರತಿಷ್ಠಿತ ಸರ್ ಎಂ.ವಿ. ಕಾಲೇಜಿನಲ್ಲಿ ಹಿಜಾಬ್ ಧರಿಸಿದ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲರು ತರಗತಿಗೆ ಪ್ರವೇಶ ನಿರಾಕರಿಸಿದ್ದಾರೆ. ಇದನ್ನು‌ ಪ್ರಶ್ನಿಸಿ 20ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಕಾಲೇಜಿನ ಮುಖ್ಯ ದ್ವಾರದ ಎದುರು ಕುಳಿತು ಪ್ರತಿಭಟನೆ ನಡೆಸುತ್ತಿದ್ದಾರೆ.


ಆದರೆ ಈ‌ ನಡುವೆ ಕಾಲೇಜಿನ ಕ್ಯಾಂಟೀನ್’ನ ಹಿಂಭಾಗದಲ್ಲಿ ನೂರಾರು ಮದ್ಯದ ಬಾಟಲಿಗಳು ಜೋಡಿಸಿಟ್ಟ ಸ್ಥಿತಿಯಲ್ಲಿ ಪತ್ತೆಯಾಗಿವೆ. ಕಾಲೇಜಿನ ಆಸು ಪಾಸಿನಲ್ಲಿ ಯಾವುದೇ ಮದ್ಯದಂಗಡಿಗಳು ಕಾರ್ಯಾಚರಿಸುತ್ತಿಲ್ಲ. ಇದಲ್ಲದೇ ಕುಡುಕರು ಎಸೆದು ಹೋಗಿರುವ ರೀತಿಯಲ್ಲಿರದೆ ಜೋಡಿಸಿಟ್ಟ ರೀತಿಯಲ್ಲಿ ಬಾಟಲಿಗಳು ಪತ್ತೆಯಾಗಿದೆ.
ಹೀಗಾಗಿ ಸಮಾಜ ಘಾತುಕ ಶಕ್ತಿಗಳು‌ ಹಿಜಾಬ್ ಪ್ರತಿಭಟನೆಯನ್ನು ನೆಪವಾಗಿರಿಕೊಂಡು ಗಲಭೆ ಸೃಷ್ಟಿಸಲು ಸಂಚು ರೂಪಿಸಿದ್ದಾರೆ ಎಂದು ಸಾದಿಖ್ ಭದ್ರಾವತಿ ಎಂಬುವವರು ಟ್ವಿಟರ್’ನಲ್ಲಿ ಫೋಟೋ ಸಹಿತವಾಗಿ ಗಂಭೀರ ಆರೋಪ ಮಾಡಿದ್ದಾರೆ

Join Whatsapp
Exit mobile version