►ಜೋಡಿ ಕೊಲೆಯಿಂದ ಬೆಚ್ಚಿಬಿದ್ದ ಸಾಂಸ್ಕೃತಿಕ ನಗರಿ!
ಮೈಸೂರು: ಹಾಡು ಹಗಲೇ ಮನೆಗೆ ನುಗ್ಗಿ ಯುವಕನೊಬ್ಬ ತನ್ನ ತಂದೆ ಮತ್ತು ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಹತ್ಯೆಗೈದ ಘಟನೆ ಮೈಸೂರಿನ ಶ್ರೀನಗರದಲ್ಲಿ ನಡೆದಿದೆ.
ಮನೆಯೊಂದಕ್ಕೆ ನುಗ್ಗಿದ ಆರೋಪಿ ಸಾಗರ್ ತನ್ನ ತಂದೆ ಹಾಗೂ ಜೊತೆಗಿದ್ದ ಮಹಿಳೆಯನ್ನು ಬರ್ಬರವಾಗಿ ಮಚ್ಚಿನಿಂದ ಕೊಚ್ಚಿ ಹತ್ಯೆಗೈದಿದ್ದಾನೆ ಎಂದು ವರದಿಯಾಗಿದೆ. ಬೆಳ್ಳಂಬೆಳಿಗ್ಗೆ ನಡೆದ ಈ ಡಬ್ಬಲ್ ಮರ್ಡನ್ ನಿಂದಾಗಿ ಸಾಂಸ್ಕೃತಿಕ ನಗರಿ ಬೆಚ್ಚಿ ಬಿದ್ದಿದೆ.
ಕೊಲೆಗೀಡಾದವರನ್ನು ಶಿವಪ್ರಕಾಶ್ ಮತ್ತು ಲತಾ ಎಂದು ಗುರುತಿಸಲಾಗಿದೆ.
ಶಿವಪ್ರಕಾಶ್ ಪುತ್ರ ಸಾಗರ್ ಮನೆಯೊಂದಕ್ಕೆ ನುಗ್ಗಿ, ಮನೆಯಲ್ಲಿದ್ದ ತಂದೆ ಶಿವಪ್ರಕಾಶ್ ಹಾಗೂ ಅವರೊಂದಿಗಿದ್ದಂತ ಲತಾ ಎಂಬುವರನ್ನು ಮಚ್ಚಿನಿಂದ ಕೊಚ್ಚಿ ಬರ್ಬರವಾಗಿ ಹತ್ಯೆಗೈದಿದ್ದಾನೆ.
ದಕ್ಷಿಣ ಪೊಲೀಸ್ ಠಾಣಾ ಪೊಲೀಸರು ಸ್ಥಳಕ್ಕೆ ಆಗಮಿಸಿ, ಪ್ರಕರಣ ದಾಖಲಿಸಿದ್ದಾರೆ.