Home ಕರಾವಳಿ ಮಂಗಳೂರು ಲಾಡ್ಜ್ ನಲ್ಲಿದ್ದ ಜೋಡಿಯನ್ನು ಬೆದರಿಸಿ ಪೊಲೀಸರಿಗೊಪ್ಪಿಸಿದ ಬಜರಂಗದಳದ ಕಾರ್ಯಕರ್ತರು

ಮಂಗಳೂರು ಲಾಡ್ಜ್ ನಲ್ಲಿದ್ದ ಜೋಡಿಯನ್ನು ಬೆದರಿಸಿ ಪೊಲೀಸರಿಗೊಪ್ಪಿಸಿದ ಬಜರಂಗದಳದ ಕಾರ್ಯಕರ್ತರು

ಮಂಗಳೂರು: ಮಂಗಳೂರಿಗೆ ಬಂದು ಲಾಡ್ಜ್ ನಲ್ಲಿ ತಂಗಿದ್ದ ಜೋಡಿಯನ್ನು ಬೆದರಿಸಿದ ಬಜರಂಗ ದಳದ ಕಾರ್ಯಕರ್ತರು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.


ಹಾವೇರಿಯ ಅಶ್ಪಾಕ್ ಹಾಗೂ ಬಿಜಾಪುರ ಮೂಲದ ಯುವತಿ ಕಾರ್ಯನಿಮಿತ್ತ ಮಂಗಳೂರಿಗೆ ಬಂದಿದ್ದರು ಎನ್ನಲಾಗಿದೆ. ಬಳಿಕ ಅವರು ಇಲ್ಲಿನ ಲಾಡ್ಜ್ ಒಂದರಲ್ಲಿ ತಂಗಿದ್ದಾರೆ. ಅವರು ಭಿನ್ನ ಕೋಮಿಗೆ ಸೇರಿದವರು ಎನ್ನಲಾಗಿದೆ.


ಈ ಬಗ್ಗೆ ಮಾಹಿತಿ ಪಡೆದ ಬಜರಂಗದಳದ ಕಾರ್ಯಕರ್ತರು ಲಾಡ್ಜ್ ಗೆ ದಾಳಿ ಮಾಡಿ ಅವರನ್ನು ತರಾಟೆಗೆ ತೆಗೆದುಕೊಂಡು ಪೊಲೀಸರಿಗೆ ಒಪ್ಪಿಸಿದ್ದಾರೆ. ಅವರನ್ನು ವಿಚಾರಣೆ ನಡೆಸಿದಾಗ ಅವರಿಬ್ಬರೂ ವಯಸ್ಕರಾಗಿರುವುದು ತಿಳಿದ ಬಳಿಕ ಪೊಲೀಸರು ಅವರನ್ನು ಬಿಟ್ಟು ಕಳುಹಿಸಿದ್ದಾರೆ. ಯಾವುದೇ ಪ್ರಕರಣ ದಾಖಲಾಗಿಲ್ಲ.

Join Whatsapp
Exit mobile version