Home ಟಾಪ್ ಸುದ್ದಿಗಳು ಶಾಲಾ-ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಬೇಡಿ: RSS ಸೂಚನೆ

ಶಾಲಾ-ಕಾಲೇಜಿನಲ್ಲಿ ಕೇಸರಿ ಶಾಲು ಧರಿಸಬೇಡಿ: RSS ಸೂಚನೆ

ನವದೆಹಲಿ: ಶಾಲಾ-ಕಾಲೇಜಿನಲ್ಲಿ ಕೇಸರಿ ಶಾಲು ಧರಿಸುವುದು ಬೇಡ ಎಂದು ಆರ್.ಎಸ್.ಎಸ್ ಸೂಚನೆ ನೀಡಿದೆ ಎಂದು ವರದಿಯಾಗಿದೆ.

ಹಿಂದುಗಳ ವಿರುದ್ಧ ಹಲ್ಲೆಯಾದರೆ ದೂರು ದಾಖಲಿಸಿ. ದಲಿತ ಸಂಘಟನೆ ಹೆಸರಿನಲ್ಲಿ ಲಾಭ ಪಡೆಯಲು ಯತ್ನಿಸಬಹುದು ಎಂದು ಆರ್ ಎಸ್ ಎಸ್ ಹೇಳಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.

ಅಲ್ಲದೆ ಯಾವುದೇ ಕಾರಣಕ್ಕೂ ಕೇಸರಿ ಶಾಲು ಧರಿಸಿ ಹೋಗುವುದು ಬೇಡ. ಕಾನೂನು ಸುವ್ಯವಸ್ಥೆ ಕಾಪಾಡಬೇಕು. ಹಿಜಾಬ್ ವ್ಯವಸ್ಥೆ ಪ್ರತಿಷ್ಠೆಯ ವಿಷಯ ಮಾಡಬೇಡಿ ಎಂದು ಹೇಳಿದೆ ಎನ್ನಲಾಗಿದೆ.

ಇತ್ತೀಚಿನ ದಿನಗಳಲ್ಲಿ ಶ್ರೀರಾಮನ ಹೆಸರಿನಲ್ಲಿ ಗುಂಪು ಹಲ್ಲೆ, ಹತ್ಯೆಗಳು ದೇಶದ ಹಲವೆಡೆ ವರದಿಯಾಗಿದ್ದವು. ಇವೆಲ್ಲವನ್ನೂ ಗಮನದಲ್ಲಿಟ್ಟುಕೊಂಡು ಆರ್ ಎಸ್ ಎಸ್ ಈ ಸೂಚನೆ ನೀಡಿದೆ ಎನ್ನಲಾಗಿದೆ.  

Join Whatsapp
Exit mobile version