Home ರಾಜ್ಯ ಮೈಲಾರ್ಡ್ ಬೇಡ, ಮೇಡಂ ಎನ್ನಿ ಎಂದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ

ಮೈಲಾರ್ಡ್ ಬೇಡ, ಮೇಡಂ ಎನ್ನಿ ಎಂದ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ

ಬೆಂಗಳೂರು; ಹೈಕೋರ್ಟ್​ನ ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ಅವರು ತಮ್ಮನ್ನು ಮೈಲಾರ್ಡ್ ಎನ್ನುವುದನ್ನು ಬಿಟ್ಟು ಮೇಡಂ ಎಂದಷ್ಟೇ ಕರೆಯಿರಿ ಎಂದು ವಕೀಲರಿಗೆ ಮನವಿ ಮಾಡಿದ್ದಾರೆ.
ನ್ಯಾಯಮೂರ್ತಿ ಜ್ಯೋತಿ ಮೂಲಿಮನಿ ನೇತೃತ್ವದ ಪೀಠವು ಗುರುವಾರ ವಿಚಾರಣೆ ನಡೆಸಲಿರುವ ಪ್ರಕರಣಗಳ ಪಟ್ಟಿಯಲ್ಲಿಯೂ ಈ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಈ ಮೂಲಕ ರಾಜ್ಯ ಹೈಕೋರ್ಟ್​ನಲ್ಲಿ ಮೈಲಾರ್ಡ್ ಪದ ಬೇಡ ಎಂಬ ನಿಲುವಿಗೆ ಬಂದ ಎರಡನೇ‌ ನ್ಯಾಯಮೂರ್ತಿ ಎನ್ನುವ ಖ್ಯಾತಿಗೆ ಜ್ಯೋತಿ ಮೂಲಿಮನಿ ಪಾತ್ರರಾಗಿದ್ದಾರೆ.


ಈ ಮೊದಲು ನ್ಯಾಯಮೂರ್ತಿ ಪಂಜಿಗದ್ದೆ ಕೃಷ್ಣ ಭಟ್ ಮೈಲಾರ್ಡ್ ಬೇಡ ಎಂದಿದ್ದರು. ಕಳೆದ ಏಪ್ರಿಲ್ 17ರಂದು ಈ ವಿಚಾರ ಪ್ರಸ್ತಾಪಿಸಿದ್ದ ನ್ಯಾಯಮೂರ್ತಿಗಳು ಸದ್ಯದ ಭಾರತೀಯ ಸನ್ನಿವೇಶದಲ್ಲಿ ಮೈಲಾರ್ಡ್ ಅಥವಾ ಯುವರ್ ಲಾರ್ಡ್ ಶಿಪ್ ಎಂದು ಬಳಕೆ ಮಾಡುವುದು ಸೂಕ್ತವಲ್ಲ. ‘ಸರ್’ ಎಂದು ಕರೆಯುವುದು ಘನತೆ ಮತ್ತು ಗೌರವದಿಂದ ಕೂಡಿದೆ.
ಅದೇ ಪದ ಬಳಕೆ ಸೂಕ್ತ ಎನಿಸುತ್ತದೆ ಎಂದು ವಕೀಲರಿಗೆ ಸಲಹೆ ನೀಡಿದ್ದರು. ನ್ಯಾಯಾಲಯದ ಕಾಸ್ ಲಿಸ್ಟ್​ನಲ್ಲಿಯೂ ಈ ವಿಚಾರ ಪ್ರಸ್ತಾಪಿಸಿದ್ದರು.

Join Whatsapp
Exit mobile version