Home ಟಾಪ್ ಸುದ್ದಿಗಳು ಯುದ್ಧಪೀಡಿತ ಗಾಝಾದ ಉತ್ತರ ಭಾಗಕ್ಕೆ ವಾಪಸ್ ಬರಬೇಡಿ: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

ಯುದ್ಧಪೀಡಿತ ಗಾಝಾದ ಉತ್ತರ ಭಾಗಕ್ಕೆ ವಾಪಸ್ ಬರಬೇಡಿ: ಪ್ಯಾಲೆಸ್ತೀನಿಯರಿಗೆ ಇಸ್ರೇಲ್ ಎಚ್ಚರಿಕೆ

TOPSHOT - Palestinians assess the damage caused by Israeli air strikes, in Beit Hanun in the northern Gaza Strip, on May 14, 2021. - Israel pounded Gaza and deployed extra troops to the border as Palestinians fired barrages of rockets back, with the death toll in the enclave on the fourth day of conflict climbing to over 100. (Photo by MAHMUD HAMS / AFP) (Photo by MAHMUD HAMS/AFP via Getty Images)

ಗಾಝಾ: ಪ್ಯಾಲೆಸ್ತೀನ್ ಪ್ರಜೆಗಳಿಗೆ ಇಸ್ರೇಲ್ ಎಚ್ಚರಿಕೆ ನೀಡಿದ್ದು, ಯಾವುದೇ ಕಾರಣಕ್ಕೂ ಯುದ್ಧಪೀಡಿತ ಗಾಝಾದ ಉತ್ತರ ಭಾಗಕ್ಕೆ ವಾಪಸ್ ಬರಬಾರದು ಎಂದು ಹೇಳಿದೆ.

ದಾಳಿಗೆ ತುತ್ತಾದ ಉತ್ತರ ಗಾಝಾದಿಂದ ಇತರ ಕಡೆ ಸ್ಥಳಾಂತರಗೊಂಡವರಲ್ಲಿ ಕೆಲವರು ವಾಪಸ್ ಮನೆಗೆ ಬರಲು ಯತ್ನಿಸುತ್ತಿದ್ದಾಗ ಐವರು ಹತ್ಯೆಗೀಡಾಗಿದ್ದಾರೆ ಎಂದು ಗಾಝಾ ಆಸ್ಪತ್ರೆ ಅಧಿಕಾರಿಗಳು ಹೇಳಿಕೆ ನೀಡಿದ್ದರು. ಅದರ ಮಾರನೇ ದಿನವೇ ಇಸ್ರೇಲ್‌ ಸೇನೆಯ ಈ ಎಚ್ಚರಿಕೆ ಹೊರಬಿದ್ದಿದೆ.

ಇಸ್ರೇಲ್, ಉತ್ತರ ಗಾಜಾವನ್ನು ಗುರಿಯಾಗಿಸಿಕೊಂಡಿದ್ದು, ಬಹುತೇಕ ಭಾಗದಲ್ಲಿದ್ದ ಮನೆಗಳನ್ನು ನೆಲಸಮಗೊಳಿಸಿದೆ. ಇದರಿಂದಾಗಿ ಇಲ್ಲಿ ನೆಲೆ ಕಂಡುಕೊಂಡಿದ್ದ ಹಲವರು ದಕ್ಷಿಣ ಭಾಗಕ್ಕೆ ಸ್ಥಳಾಂತರಗೊಂಡಿದ್ದಾರೆ. ಉತ್ತರ ಗಾಜಾದಲ್ಲಿ ಮುಂದಿನ ಆರು ತಿಂಗಳು ಯುದ್ಧ ಮುಂದುವರಿಯುವ ಕಾರಣ, ಅಲ್ಲಿಯವರೆಗೆ ಯಾರೂ ಈ ಭಾಗಕ್ಕೆ ಬರದಂತೆ ಇಸ್ರೇಲ್ ತಡೆಹಿಡಿದಿದೆ.

Join Whatsapp
Exit mobile version