ಮಂಗಳೂರು: ಹೆತ್ತ ತಾಯಿಯನ್ನ ಬಿಟ್ಟು ಕೊಡಕ್ಕೆ ಆಗುತ್ತಾ ಈ ಹಿಂದೆಯೂ ಅವರ ಜೊತೆಗೆ ನಿಂತಿದ್ದೆ. ಯಾವಾಗಲೂ ನಮ್ಮ ಅಮ್ಮನ ಜೊತೆ ಇರುತ್ತೇನೆ. ನಿಮ್ಮ ಮನೆಯಲ್ಲಿ ನಿಮ್ಮ ತಾಯಿನ ಬಿಟ್ಟು ಬಿಡ್ತೀರಾ? ಅಮ್ಮ ಅಮ್ಮನೇ ಅಲ್ವಾ ಎಂದು ನಟ ದರ್ಶನ್ ಸಂಸದೆ ಸುಮಲತಾ ಅಂಬರೀಷ್ ಪರ ಪ್ರಚಾರಕ್ಕೆ ಮತ್ತೆ ಸಿದ್ಧ ಎಂದು ತಿಳಿಸಿದ್ದಾರೆ.
ಕತ್ತಾರಿನ ಕೊರಗಜ್ಜನ ಕ್ಷೇತ್ರಕ್ಕೆ ನಟ ದರ್ಶನ್ ಭೇಟಿ ಕೊಟ್ಟಿದ್ದು, ಈ ಸಂದರ್ಭ ಸಮಲತಾ ಅಂಬರೀಶ್ ಪರ ಚುನಾವಣೆ ಪ್ರಚಾರ ಮಾಡುವುದರ ಕುರಿತು ಸುದ್ದಿಗಾರರು ಕೇಳಿದ ಪ್ರಶ್ನೆಗೆ ಹೀಗೆ ಉತ್ತರಿಸಿದ್ದಾರೆ.
ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ಮಂಡ್ಯ ಕ್ಷೇತ್ರದಲ್ಲಿ ತೀವ್ರ ಕುತೂಹಲ ಕೆರಳಿಸಿದೆ. ಏಕೆಂದರೆ ಒಂದು ಕಡೆ ಸುಮಲತಾ ಅಂಬರೀಷ್ ಟಿಕೇಟ್ ನಂಗೆ ಸಿಗುವ ವಿಶ್ವಾಸವಿದೆ ಎಂದಿದ್ದಾರೆ. ಇನ್ನೊಂದು ಕಡೆ ಈ ಬಾರಿ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿ ಆಗಿರುವ ಹಿನ್ನೆಲೆಯಲ್ಲಿ ಯಾರಿಗೆ ಟಿಕೆಟ್ ಕೊಡಬೇಕು ಎನ್ನುವುದರ ಕುರಿತು ಬಿಜೆಪಿಯನ್ನು ಗೊಂದಲದಲ್ಲಿದೆ.ಏಕೆಂದರೆ ಕಳೆದ ಬಾರಿ ಪಕ್ಷೇತರ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಅವರು ಗೆದ್ದಿದ್ದರು. ಹೀಗಾಗಿ ಈ ಬಾರಿ ಕೂಡ ಅವರಿಗೆ ಟಿಕೆಟ್ ಸಿಗುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ.