Home ಟಾಪ್ ಸುದ್ದಿಗಳು ಇರಾನ್ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ನಡೆಸಲಿ: ಡೊನಾಲ್ಡ್ ಟ್ರಂಪ್

ಇರಾನ್ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ನಡೆಸಲಿ: ಡೊನಾಲ್ಡ್ ಟ್ರಂಪ್

ವಾಷಿಂಗ್ಟನ್: ಇರಾನ್ ನ ಅಣ್ವಸ್ತ್ರ ಕೇಂದ್ರದ ಮೇಲೆ ಇಸ್ರೇಲ್ ಮೊದಲು ದಾಳಿ ಮಾಡಬೇಕು ಎಂದು ಅಮೆರಿಕದ ಅಧ್ಯಕ್ಷೀಯ ಚುನಾವಣೆಯ ರಿಪಬ್ಲಿಕನ್ ಪಕ್ಷದ ಅಭ್ಯರ್ಥಿ ಡೊನಾಲ್ಡ್ ಟ್ರಂಪ್ ಹೇಳಿದ್ದಾರೆ.


ತಮ್ಮ ಚುನಾವಣಾ ಪ್ರಚಾರದ ಸಂದರ್ಭದಲ್ಲಿ ಇಸ್ರೇಲ್ ಮೇಲಿನ ಇರಾನ್ ನ ಕ್ಷಿಪಣಿ ದಾಳಿಗೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ಅವರು, ‘ಇರಾನ್ನ ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ನಡೆಸದ ಹೊರತು ಎಲ್ಲವೂ ಸರಿಹೋಗದು. ಅದುವೇ ಇಸ್ರೇಲ್ಗಿರುವ ಸರಿಯಾದ ಮಾರ್ಗ’ ಎಂದಿದ್ದಾರೆ.


ಇರಾನ್ ನ ಅಣ್ವಸ್ತ್ರ ಕೇಂದ್ರದ ಮೇಲೆ ದಾಳಿ ನಡೆಸುವುದನ್ನು ನೀವು ಬೆಂಬಲಿಸುತ್ತೀರಾ ಎಂಬ ಪತ್ರಕರ್ತರ ಪ್ರಶ್ನೆಗೆ ಅಮೆರಿಕ ಅಧ್ಯಕ್ಷ ಜೋ ಬೈಡನ್ ಅವರು ಬುಧವಾರ ಪ್ರತಿಕ್ರಿಯಿಸಿ, ‘ನನ್ನ ಉತ್ತರ ‘ಇಲ್ಲ’’ ಎಂದಿದ್ದರು. ಆದರೆ ಇಸ್ರೇಲ್ ಮೇಲೆ 200 ಕ್ಷಿಪಣಿಗಳನ್ನು ಉಡ್ಡಾಯಿಸಿದ ಇರಾನ್ನ ಕ್ರಮವನ್ನು ತೀವ್ರವಾಗಿ ಖಂಡಿಸಿದ್ದರು.


ಬೈಡನ್ ಹೇಳಿಕೆಗೆ ಪ್ರತಿಕ್ರಿಯಿಸಿರುವ ಟ್ರಂಪ್, ‘ನಮಗಿರುವ ದೊಡ್ಡ ಅಪಾಯವೇ ಅಣ್ವಸ್ತ್ರ. ಹೀಗಾಗಿ ಅದನ್ನೇ ಮೊದಲು ನಾಶಪಡಿಸಬೇಕು ಎಂಬುದು ಸರಿಯಲ್ಲವೇ?. ಮೊದಲು ಅದನ್ನು ನಾಶಪಡಿಸಿ, ಉಳಿದದ್ದನ್ನು ನಂತರ ನೋಡಿಕೊಂಡರಾಯಿತು’ ಎಂದಿದ್ದಾರೆ.

Join Whatsapp
Exit mobile version