Home ಟಾಪ್ ಸುದ್ದಿಗಳು ಹೆಣ್ಣು ಸಿಗುತ್ತಿಲ್ಲ, ನಮಗೆ ಮದುವೆ ಮಾಡಿಸಿ: ಜಿಲ್ಲಾಧಿಕಾರಿಗೆ ಪತ್ರ ಬರೆದ 7 ಯುವಕರು

ಹೆಣ್ಣು ಸಿಗುತ್ತಿಲ್ಲ, ನಮಗೆ ಮದುವೆ ಮಾಡಿಸಿ: ಜಿಲ್ಲಾಧಿಕಾರಿಗೆ ಪತ್ರ ಬರೆದ 7 ಯುವಕರು

ತುಮಕೂರು: ರೈತ ಎಂಬ ಕಾರಣಕ್ಕೆ ಮದುವೆ ಮಾಡಿಕೊಳ್ಳಲು ಯಾರು ಮುಂದೆ ಬರುತ್ತಿಲ್ಲ. ಹಾಗಾಗಿ ನಮಗೆ ಮದುವೆ ಮಾಡಿಸಿ ಎಂದು 7 ಮಂದಿ ಯುವ ರೈತರು ಜಿಲ್ಲಾಧಿಕಾರಿಗೆ ಪತ್ರ ಬರೆದಿದ್ದಾರೆ. 

ತುಮಕೂರು ಜಿಲ್ಲೆಯ ತಿಪಟೂರು ತಾಲೂಕಿನ ತಿಮ್ಲಾಪುರ ಗ್ರಾಮದ ರೈತ ಯುವಕರು ಪತ್ರ ಬರೆದು ನಾವು ರೈತರಾಗಿರುವುದರಿಂದ ನಮಗೆ ಎಲ್ಲೂ ವಧು ಸಿಗುತ್ತಿಲ್ಲ. ಆದ್ದರಿಂದ ನಮ್ಮ  ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ ಮದುವೆ ಮಾಡಿಸಬೇಕು ಎಂದು ಪತ್ರದ ಮೂಲಕ ತಿಳಿಸಿದ್ದಾರೆ. 

7 ಮಂದಿ ಯುವ ರೈತರ ಮದುವೆ ವಿಚಾರ ಇದೀಗ ಸಾಮಾಜಿಕ ಜಾಲತಾಣದಲ್ಲಿ ಸಾಕಷ್ಟು ವೈರಲ್ ಆಗಿದೆ.

Join Whatsapp
Exit mobile version