Home ಟಾಪ್ ಸುದ್ದಿಗಳು ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ನಿಧನ

ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಇವಾನಾ ನಿಧನ

ನ್ಯೂಯಾರ್ಕ್: ಡೊನಾಲ್ಡ್ ಟ್ರಂಪ್ ಮೊದಲ ಪತ್ನಿ ಮತ್ತು ಟ್ರಂಪ್ ರ ಮೂವರು ಹಿರಿಯ ಮಕ್ಕಳ ತಾಯಿ ಇವಾನಾ ಟ್ರಂಪ್ ಅವರು ತಮ್ಮ 73 ನೇ ವಯಸ್ಸಿನಲ್ಲಿ ನಿಧನರಾಗಿದ್ದಾರೆ

ಇವಾನಾ ಟ್ರಂಪ್ ಅವರು ನ್ಯೂಯಾರ್ಕ್ ನಗರದ ತಮ್ಮ ನಿವಾಸದಲ್ಲಿ ನಿಧನರಾದರು ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಮಾಧ್ಯಮ ವೇದಿಕೆ ಯಲ್ಲಿ ಹಂಚಿಕೊಂಡಿದ್ದಾರೆ.

ಅವಳು ಅದ್ಭುತ ಮತ್ತು ಸುಂದರ ಮಹಿಳೆ, ಅವಳು ಶ್ರೇಷ್ಠ ಮತ್ತು ಸ್ಪೂರ್ತಿದಾಯಕ ಜೀವನವನ್ನು ನಡೆಸಿದಳು ಎಂದು 76 ವರ್ಷದ ಡೊನಾಲ್ಡ್ ಟ್ರಂಪ್ ಇವಾನ ಬಗ್ಗೆ ಹೇಳಿದ್ದು ರೆಸ್ಟ್ ಇನ್ ಪೀಸ್, ಇವಾನಾ! ಎಂದು ಅವರು ಪೋಸ್ಟ್ನಲ್ಲಿ ಸೇರಿಸಿದ್ದಾರೆ.

Join Whatsapp
Exit mobile version