ವಾಷಿಂಗ್ಟನ್: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅಮೆರಿಕಕ್ಕೆ ಆಮದು ಮಾಡಿಕೊಳ್ಳುವ ಭಾರತ ಸೇರಿ ವಿವಿಧ ದೇಶಗಳ ಉತ್ಪನ್ನಗಳ ಮೇಲೆ ಸುಂಕ ವಿಧಿಸಿದ್ದಾರೆ.
ಇದು ಭಾರತ ಸೇರಿದಂತೆ ವಿವಿಧ ದೇಶಗಳ ನಡುವಿನ ಸಂಬಂಧದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಭಾರತದ ಮೇಲೆ ಅಮೆರಿಕವು ಶೇ.26ರಷ್ಟು ಪ್ರತಿ ಸುಂಕ ವಿಧಿಸಿದೆ. ಕಾಂಬೋಡಿಯಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.49 ರಷ್ಟು ಸುಂಕ ಮತ್ತು ಚೀನಾದಿಂದ ಆಮದು ಮಾಡಿಕೊಳ್ಳುವ ಸರಕುಗಳ ಮೇಲೆ ಶೇ.34 ರಷ್ಟು ಸುಂಕ ವಿಧಿಸಲಾಗುವುದು ಎಂದು ಘೋಷಿಸಲಾಗಿದೆ.
ನಮ್ಮ ದೇಶವನ್ನು ಇತರ ದೇಶಗಳು ಲೂಟಿ ಮಾಡಿವೆ ಎಂದು ಹೇಳಿದರು. ಅಮೆರಿಕದ ತೆರಿಗೆದಾರರು 50 ವರ್ಷಗಳಿಗೂ ಹೆಚ್ಚು ಕಾಲ ವಂಚನೆಗೊಳಗಾಗಿದ್ದಾರೆ. ಆದರೆ ಇದು ಇನ್ನು ಮುಂದೆ ಹಾಗಾಗುವುದಿಲ್ಲ ಎಂದರು.
ವಿಯೆಟ್ನಾಂನಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಮೇಲೆ ಶೇ. 46 , ಸ್ವಿಟ್ಜರ್ಲೆಂಡ್ ಮೇಲೆ ಶೇ.31 , ತೈವಾನ್ ಮೇಲೆ ಶೇ. 32 , ಜಪಾನ್ ಮೇಲೆ ಶೇ. 24 , ಬ್ರಿಟನ್ ಮೇಲೆ 10 ಪ್ರತಿಶತ, ಬ್ರೆಜಿಲ್ ಮೇಲೆ ಶೇ. 10 , ಇಂಡೋನೇಷ್ಯಾ ಮೇಲೆ ಶೇ. 32 , ಸಿಂಗಾಪುರದ ಮೇಲೆ 10 ಪ್ರತಿಶತ, ದಕ್ಷಿಣ ಆಫ್ರಿಕಾದ ಮೇಲೆ ಶೇ.30 . ವಿದೇಶಗಳಿಂದ ಆಮದು ಮಾಡಿಕೊಳ್ಳುವ ವಾಹನಗಳ ಮೇಲೆ ಅವರು ಶೇಕಡಾ 25 ರಷ್ಟು ಸುಂಕವನ್ನು ವಿಧಿಸಿದ್ದಾರೆ.