Home ಟಾಪ್ ಸುದ್ದಿಗಳು ಡಾಲರ್ ಮತ್ತಷ್ಟು ಬಲ: ಐತಿಹಾಸಿಕವಾಗಿ ಪಾತಾಳಕ್ಕಿಳಿದ ರೂಪಾಯಿ

ಡಾಲರ್ ಮತ್ತಷ್ಟು ಬಲ: ಐತಿಹಾಸಿಕವಾಗಿ ಪಾತಾಳಕ್ಕಿಳಿದ ರೂಪಾಯಿ

ನವದೆಹಲಿ: ನಿರಂತರ ವಿದೇಶಿ ಬಂಡವಾಳದ ವಹಿವಾಟಿನಲ್ಲಿ ಹೆಚ್ಚಳ ಮತ್ತು ಸಾಗರೋತ್ತರ ಮಾರುಕಟ್ಟೆಯಲ್ಲಿ ಅಮೇರಿಕಾ ಡಾಲರ್ ಬಲಗೊಂಡ ಹಿನ್ನೆಲೆಯಲ್ಲಿ ಅಂತಾರಾಷ್ಟ್ರೀಯ ಮಟ್ಟದ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು ಐತಿಹಾಸಿಕವಾಗಿ ಕುಸಿತಕ್ಕೊಳಗಾಗಿ ದಾಖಲೆ ನಿರ್ಮಿಸಿದೆ.

ಗುರುವಾರ ಬೆಳಗ್ಗೆ ಆರಂಭಿಕ ವಹಿವಾಟಿನಲ್ಲಿ ಭಾರತೀಯ ರೂಪಾಯಿ ಮೌಲ್ಯವು 6 ಪೈಸೆ ಕುಸಿದು ಪ್ರತಿ ಡಾಲರ್’ಗೆ ಸಾರ್ವಕಾಲಿಕ ಕನಿಷ್ಠ 83.08 ರೂಪಾಯಿ ತಲುಪಿದೆ.

ಬುಧವಾರ ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ಬೆಲೆಯೇರಿಕೆಯಿಂದಾಗಿ ಮತ್ತು ಹಣದುಬ್ಬರದ ಹೆಚ್ಚಳದಿಂದಾಗಿ ಕೇಂದ್ರೀಯ ಬ್ಯಾಂಕಿಂಗ್ ದರವು ಪ್ರತಿ ಡಾಲರ್’ಗೆ ದಾಖಲೆಯ 83.02 ರೂಪಾಯಿಗೆ ಕುಸಿದಿತ್ತು ಎಂದು ಸುದ್ದಿಸಂಸ್ಥೆಗಳು ವರದಿ ಮಾಡಿವೆ.

ಬುಧವಾರ ದಿನದ ಅಂತ್ಯಕ್ಕೆ ಸುಮಾರು 60 ಪೈಸೆ ಕುಸಿದು ಪ್ರತಿ ಡಾಲರ್’ಗೆ ಜೀವಮಾನದ ಕನಿಷ್ಠ ದರ 83.02 ತಲುಪಿತ್ತು.

ರೂಪಾಯಿ ಮೌಲ್ಯ ಕುಸಿಯುತ್ತಿರುವ ಕುರಿತು ಪ್ರತಿಕ್ರಿಯಿಸಿದ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್, “ಜಾಗತಿಕವಾಗಿ ರೂಪಾಯಿ ಮೌಲ್ಯವು ಕುಸಿಯುತ್ತಿಲ್ಲ, ಬದಲಾಗಿ ಡಾಲರ್ ಬಲಗೊಳ್ಳುತ್ತಿದೆ” ಎಂಬ ಹೊಣೆಗೇಡಿತನದ ಹೇಳಿಕೆಯನ್ನು ಈ ಹಿಂದೆ ನೀಡಿದ್ದರು. ಇದಕ್ಕೆ ನೆಟ್ಟಿಗರು ತೀವ್ರ ಆಕ್ರೋಶ ವ್ಯಕ್ತಪಡಿಸಿ, ಕೇಂದ್ರ ಸಚಿವರನ್ನು ಮತ್ತು ಮೋದಿ ಸರ್ಕಾರವನ್ನು ಕಾಲೆಳೆದಿದ್ದರು.

Join Whatsapp
Exit mobile version