Home ಟಾಪ್ ಸುದ್ದಿಗಳು ದೋಹಾ: ಗಾಝಾ ಕದನ ವಿರಾಮ ಮಾತುಕತೆ ಆರಂಭ: ಇಸ್ರೇಲ್, ಅಮೆರಿಕ, ಈಜಿಪ್ಟ್ ಭಾಗಿ

ದೋಹಾ: ಗಾಝಾ ಕದನ ವಿರಾಮ ಮಾತುಕತೆ ಆರಂಭ: ಇಸ್ರೇಲ್, ಅಮೆರಿಕ, ಈಜಿಪ್ಟ್ ಭಾಗಿ

An Israeli army vehicle rolls in an area near Israel's southern border with the Gaza Strip on July 9, 2024, amid the ongoing conflict between Israel and the Palestinian militant group Hamas. (Photo by JACK GUEZ / AFP)

ಗಾಝಾ: ಇಲ್ಲಿ ಕದನ ವಿರಾಮ ಒಪ್ಪಂದದ ಕುರಿತ ಹೊಸ ಸುತ್ತಿನ ಮಾತುಕತೆ ಗುರುವಾರ ಮಧ್ಯಾಹ್ನ ಖತರ್ ರಾಜಧಾನಿ ದೋಹದಲ್ಲಿ ಪ್ರಾರಂಭವಾಗಿದೆ. ಮಾತುಕತೆಯಲ್ಲಿ ಖತರ್, ಇಸ್ರೇಲ್, ಅಮೆರಿಕ, ಈಜಿಪ್ಟ್ ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ ಎಂದು ಮಾಧ್ಯಮ ವರದಿಯಾಗಿದೆ.

ಅಮೆರಿಕದ ಸಿಐಎ ನಿರ್ದೇಶಕ ಬಿಲ್ ಬನ್ರ್ಸ್, ಮಧ್ಯಪ್ರಾಚ್ಯಕ್ಕೆ ಅಮೆರಿಕದ ಪ್ರತಿನಿಧಿ ಬ್ರೆಟ್ ಮೆಗರ್ಕ್, ಇಸ್ರೇಲ್ ಗುಪ್ತಚರ ಮುಖ್ಯಸ್ಥ ಡೇವಿಡ್ ಬಾರ್ನಿಯಾ, ಖತರ್ ಪ್ರಧಾನಿ ಶೇಖ್ ಮುಹಮ್ಮದ್ ಬಿನ್ ಅಬ್ದುರ್ರಹ್ಮಾನ್ ಅಲ್ ಥಾನಿ, ಈಜಿಪ್ಟ್ ಗುಪ್ತಚರ ಮುಖ್ಯಸ್ಥ ಅಬ್ಬಾಸ್ ಕಮೆಲ್, ಮುಂತಾದವರು ಮಾತುಕತೆಯಲ್ಲಿ ಪಾಲ್ಗೊಂಡಿದ್ದಾರೆ. ಮಾತುಕತೆಯಲ್ಲಿ ಹಮಾಸ್‍ನ ಪ್ರತಿನಿಧಿ ಪಾಲ್ಗೊಂಡಿರಲಿಲ್ಲ ಎಂದು ವರದಿ ತಿಳಿಸಿದೆ.

ಮಾತುಕತೆ ಮುಗಿದ ಬಳಿಕ ಮಧ್ಯಸ್ಥಿಕೆದಾರರು ಹಮಾಸ್ ನಿಯೋಗದ ಜತೆ ಪ್ರತ್ಯೇಕ ಸಭೆ ನಡೆಸಲಿದ್ದಾರೆಂದೂ ವರದಿ ತಿಳಿಸಿದೆ.

Join Whatsapp
Exit mobile version