Home ಟಾಪ್ ಸುದ್ದಿಗಳು ಹೆರಿಗೆ ಮಾಡುವಾಗ ಮಗುವಿನ ಮರ್ಮಾಂಗವನ್ನೇ ಕೊಯ್ದ ವೈದ್ಯ: ಮಗು ಸಾವು

ಹೆರಿಗೆ ಮಾಡುವಾಗ ಮಗುವಿನ ಮರ್ಮಾಂಗವನ್ನೇ ಕೊಯ್ದ ವೈದ್ಯ: ಮಗು ಸಾವು

ದಾವಣಗೆರೆ: ಇಲ್ಲಿಯ ಜಿಲ್ಲಾ ಚಿಗಟೇರಿ ಆಸ್ಪತ್ರೆಯಲ್ಲಿ ವೈದ್ಯನ ಭಾರೀ ಯಡವಟ್ಟಿಗೆ ಮಗುವೊಂದು ಪ್ರಾಣವನ್ನೇ ಕಳೆದುಕೊಂಡಿದೆ. ವೈದ್ಯನೊಬ್ಬ ಹೆರಿಗೆ ಮಾಡುವಾಗ ಹೊಟ್ಟೆಯಲ್ಲಿದ್ದ ಮಗುವಿನ ಮರ್ಮಾಂಗವನ್ನೇ ಕೊಯ್ದು ಹಾಕಿದ್ದಾನೆ ಎಂಬ ಆರೋಪ ವ್ಯಕ್ತವಾಗಿದೆ.

ದಾವಣಗೆರೆ ಕೊಂಡಜ್ಜಿ ರಸ್ತೆಯಲ್ಲಿರುವ ಅರ್ಜುನ್ ಎಂಬುವವರ ಪತ್ನಿ ಅಮೃತಾ ಹೆರಿಗೆಅಗಿ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದರು. ನಾರ್ಮಲ್‌ ಡೆಲಿವರಿ ಆಗದ ಹಿನ್ನೆಲೆಯಲ್ಲಿ ಸಿಸೇರಿಯನ್ ಮಾಡಲು ವೈದ್ಯರು ತೀರ್ಮಾನಿಸಿದ್ದರು. ಕಳೆದ ಜೂನ್ 27ರಂದು ಅಮೃತಾಗೆ ಸಿಸೇರಿಯನ್ ಮಾಡಿ ಮಗು ತೆಗೆಯಲಾಗಿತ್ತು. ಆದರೆ ವೈದ್ಯ ನಿಜಾಮುದ್ದೀನ್ ಮಗು ತೆಗೆಯುವಾಗ ಮರ್ಮಾಂಗವನ್ನೇ ಕೊಯ್ದಿದ್ದಾರೆ ಎಂದು ಆರೊಪಿಸಲಾಗಿದೆ. ಮಗುವಿನ ಸ್ಥಿತಿ ಚಿಂತಾಜನಕವಾಗಿದ್ದರಿಂದ ಕೂಡಲೇ ಜಿಲ್ಲಾಸ್ಪತ್ರೆಯಿಂದ ಬಾಪೂಜಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಮಗು ಇಂದು ಮೃತಪಟ್ಟಿದೆ.

ಮಗುವಿನ ಸಾವಿಗೆ ವೈದ್ಯರು ಕಾರಣ ಎಂದು ಪೋಷಕರು ಆಕ್ರೋಶ ಹೊರಹಾಕಿದ್ದಾರೆ. ಜಿಲ್ಲಾಸ್ಪತ್ರೆ ಮುಂದೆ ಪ್ರತಿಭಟಿಸಿ, ಮಗುವಿನ ಸಾವಿಗೆ ಕಾರಣನಾದ ವೈದ್ಯನನ್ನು ಅಮಾನತು ಮಾಡುವಂತೆ ಒತ್ತಾಯಿಸಿದ್ದಾರೆ.

Join Whatsapp
Exit mobile version