Home ಟಾಪ್ ಸುದ್ದಿಗಳು ರಾಷ್ಟ್ರಪತಿ ಚುನಾವಣೆಯಲ್ಲಿ ಇವಿಎಂ ಯಾಕೆ ಬಳಸಲ್ಲ ಗೊತ್ತಾ?

ರಾಷ್ಟ್ರಪತಿ ಚುನಾವಣೆಯಲ್ಲಿ ಇವಿಎಂ ಯಾಕೆ ಬಳಸಲ್ಲ ಗೊತ್ತಾ?

ಲೋಕಸಭಾ ಚುನಾವಣೆ ಹಾಗೂ ವಿಧಾನಸಭೆ ಚುನಾವಣೆಗಳಲ್ಲಿ ಎಲೆಕ್ಟ್ರಾನಿಕ್ ಮತಯಂತ್ರಗಳ ಮೂಲಕ ಮತದಾನ ನಡೆಯುತ್ತದೆ. ಆದರೆ ರಾಷ್ಟ್ರಪತಿ, ಉಪರಾಷ್ಟ್ರಪತಿ ಚುನಾವಣೆ ಹಾಗೂ ರಾಜ್ಯಸಭಾ ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಮತಪತ್ರ ಹಾಗೂ ಬ್ಯಾಲೆಟ್ ಬಾಕ್ಸ್ ವಿಧಾನದಲ್ಲಿಯೇ ಚುನಾವಣೆಗಳು ನಡೆಯುತ್ತವೆ.


ಇವಿಎಂಗಳು ಲೋಕಸಭೆ ಮತ್ತು ರಾಜ್ಯ ವಿಧಾನಸಭೆಗಳಂತಹ ನೇರ ಚುನಾವಣೆಗಳಲ್ಲಿ ಮತದಾರರು ತಮ್ಮ ಆಯ್ಕೆಯ ಅಭ್ಯರ್ಥಿಯ ಹೆಸರಿನ ಮುಂದಿನ ಗುಂಡಿಯನ್ನು ಒತ್ತಿ ಮತ ಚಲಾಯಿಸುತ್ತಾರೆ ಹಾಗೂ ಗರಿಷ್ಠ ಸಂಖ್ಯೆಯ ಮತ ಗಳಿಸಿದವರನ್ನು ಚುನಾಯಿತ ಎಂದು ಘೋಷಿಸಲಾಗುತ್ತದೆ.
ಆದರೆ ರಾಷ್ಟ್ರಪತಿಗಳ ಚುನಾವಣೆಯಲ್ಲಿ ಅನುಪಾತ ಪ್ರಾತಿನಿಧ್ಯ ಆಧರಿತ ಒಂದೇ ವರ್ಗಾವಣೆ ಮತದ ವ್ಯವಸ್ಥೆಯಡಿ ಚುನಾವಣೆ ನಡೆಸಲಾಗುತ್ತದೆ.


ಅಭ್ಯರ್ಥಿಗಳಿಗೆ ನೀಡುವ ಮತದ ಪ್ರಾಶಸ್ತ್ಯವನ್ನು ಗುರುತಿಸಲು ಮತದಾರನೋರ್ವ, ಆಯಾ ಅಭ್ಯರ್ಥಿಗಳ ಹೆಸರಿನ ಮುಂದೆ 1,2,3,4 ಹೀಗೆ ಅಂಕಿಗಳನ್ನು ಬರೆದು, ಆ ಮೂಲಕ ತಮ್ಮ ಮೊದಲ ಪ್ರಾಶಸ್ತ್ಯದ ಹಾಗೂ ಎರಡನೇ ಪ್ರಾಶಸ್ತ್ಯದ ಮತ ಚಲಾವಣೆ ಮಾಡಬಹುದು. ಮತಪತ್ರದಲ್ಲಿ ನೀಡಲಾಗಿರುವ ಕಾಲಂ ನಂಬರ್ 2 ರಲ್ಲಿ ಪ್ರಾಶಸ್ತ್ಯಗಳನ್ನು ಮಾರ್ಕ್ ಮಾಡಬಹುದು. ಹೀಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆ ಹಾಗೂ ವಿಧಾನ ಪರಿಷತ್ ಚುನಾವಣೆಗಳಲ್ಲಿ ಇವಿಎಂ ಬಳಸಲು ಸಾಧ್ಯವಿಲ್ಲ. ಹೀಗಾಗಿ ರಾಷ್ಟ್ರಪತಿ, ಉಪರಾಷ್ಟ್ರಪತಿ, ರಾಜ್ಯಸಭೆಗಳ ಸದಸ್ಯರು ಮತ್ತು ವಿಧಾನ ಪರಿಷತ್ ಚುನಾವಣೆಗಳಲ್ಲಿ ಮತಪತ್ರ ಹಾಗೂ ಬ್ಯಾಲೆಟ್ ಬಾಕ್ಸ್ ವಿಧಾನದಲ್ಲಿಯೇ ಚುನಾವಣೆಗಳು ನಡೆಯುತ್ತವೆ.

Join Whatsapp
Exit mobile version