Home Uncategorized DKSC ಸಂಸ್ಥಾಪನಾ ದಿನಾಚರಣೆ

DKSC ಸಂಸ್ಥಾಪನಾ ದಿನಾಚರಣೆ

 

ಮಂಗಳೂರು: ಡಿ. ಕೆ. ಎಸ್. ಸಿ ಯ 29ವರ್ಷದ ಸಂಸ್ಥಾಪನಾ ದಿನಾಚರಣೆಗೆ ಅಧ್ಯಕ್ಷರಾದ ಬಹು ಅಸ್ಸಯ್ಯಿದ್  ಕೆ. ಎಸ್. ಆಟಕೋಯ ತಂಙಳ್ ಕುಂಬೋಲ್ ರವರು ದ್ವಜಾರೋಹಣ ಮಾಡುವ ಮೂಲಕ ಅಧಿಕೃತವಾಗಿ ಚಾಲನೆ ನೀಡಿದರು.

ಜಿಲ್ಲಾ ಸಮಿತಿಯ ವಿವಿಧ ಘಟಕಗಳಲ್ಲಿಯೂ ದ್ವಜಾರೋಹಣ ನಡೆಯಿತು. ಘಟಕಗಳಿಂದ ಮಿಸ್ಕೀನ್ ಮತ್ತು ಯತೀಮ್ ಮಕ್ಕಳಿಗಾಗಿ ಆಹಾರ ಸಮಾಗ್ರಿಗಳು ಸಂಗ್ರಹಿಸಿ ತಲುಪಿಸಲಾಯಿತು.

ಮಧ್ಯಾಹ್ನ 1:00ಗಂಟೆಗೆ ಸರಿಯಾಗಿ ಜಿಲ್ಲಾಧ್ಯಕ್ಷರಾದ ಬಹು. ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ಅಲ್ ಹೈದ್ರೋಸಿ ತಂಙಳ್ ರವರ ನೇತೃತ್ವದಲ್ಲಿ ಡಿ. ಕೆ. ಎಸ್. ಸಿ. ಯ ಮರಣ ಹೊಂದಿದ ಕಾರ್ಯಕರ್ತರ ಹೆಸರಿನಲ್ಲಿ ಹಾಗೂ ಕಾರ್ಯಾಚರಿಸುತ್ತಿರುವ ಕಾರ್ಯಕರ್ತರ ಕುಟುಂಬದಲ್ಲಿ ಮರಣ ಹೊಂದಿದ, ಸಿಬ್ಬಂದಿಗಳಲ್ಲಿ ಮರಣ ಹೊಂದಿದ, ಹಿತೈಗಳಲ್ಲಿ ಹಾಗೂ ಹಿತೈಷಿಗಳ ಕುಟುಂಬ ದಲ್ಲಿ ಮರಣ ಹೊಂದಿದವರ ಹೆಸರಿನಲ್ಲಿ ಅನುಸ್ಮರಣೆ ನಡೆಯಿತು.

ಅಸರ್ ನಮಾಝಿನ ಬಳಿಕ ಉಚ್ಚಿಲ ಮಸೀದಿಯಿಂದ ಮರ್ಕಝ್ ಕ್ಯಾಂಪಸ್ ನವರೆಗೆ ದಫ್ ಪ್ರದರ್ಶನದೊಂದಿಗೆ ಕಾಲ್ನಡಿಗೆ ಮೆರವಣಿಗೆ ಬಹಳ ಯಶಸ್ವಿಯಾಗಿ ನಡೆಯಿತು. ಸಂಜೆ 5:30ಕ್ಕೆ ಸರಿಯಾಗಿ ದಫ್ ಕಾರ್ಯಕ್ರಮದ ಉದ್ಘಾಟನಾ ಸಮಾರಂಭ ಬಹಳ ಯಶಸ್ವಿಯಾಗಿ ನಡೆಯಿತು ಕಾರ್ಯಕ್ರಮಕ್ಕೆ ಬಹು ಅಸ್ಸಯ್ಯಿದ್ ಅಹ್ಮದ್ ಮುಕ್ತಾರ್ ತಂಙಳ್ ದುವಾದ ಮೂಲಕ ಚಾಲನೆ ನೀಡಿದರು. ಸಂಸ್ಥೆಯ ಎ. ಓ. ಆಗಿರುವ ಪ್ರೊಫೆಸರ್ ಜನಾಬ್ ಯೂಸುಫ್ ಉದ್ಘಾಟಿಸಿದರು. ಬಹು ಅಬ್ದುಲ್ ಅಝೀಝ್ ದಾರಿಮಿ ಉಸ್ತಾದ್, ಮತ್ತು ಶ್ರೀ ನಿಕೇತ್ ರಾಜ್ ಮೌರ್ಯ ಅಥಿತಿ ಭಾಷಣ ಮಾಡಿದರು. ಸಂಸ್ಥೆಯ ವ್ಯವಸ್ಥಾಪಕರಾದ ಯು. ಕೆ. ಮುಸ್ತಫಾ ಸಅದಿ ಸ್ವಾಗತಿಸಿದರು. ಇಹ್ಸಾನ್ ಕಾಲೇಜು ಪ್ರಾಂಶುಪಾಲರಾದ ಹಬೀಬುರ್ರಹ್ಮಾನ್ ಧನ್ಯವಾದಗೈದರು. ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶಂಸುದ್ದೀನ್ ಬಳ್ಕುಂಜೆ ನಿರೂಪಿಸಿದರು.

ಅದೇ ರೀತಿ ವಿದೇಶದಲ್ಲಿರುವ ಘಟಕ, ವಲಯ, ರಾಷ್ಟ್ರೀಯ ಸಮಿತಿಗಳಲ್ಲಿಯೂ ಮಗ್ರಿಬ್ ನಮಾಝಿನ ಬಳಿಕ ಬಿತ್ತಿ ಪತ್ರ ಹಿಡಿದು ಸಂಭ್ರಮ ಆಚರಿಸಲಾಯಿತು.

ಇಶಾ ನಮಾಝಿನ ಬಳಿಕ ಆಹ್ವಾನಿತ 10ತಂಡಗಳ ಅಂತರ್ ಜಿಲ್ಲಾ ಆಕರ್ಷಕ ದಫ್ ಸ್ಪರ್ಧಾ ಕಾರ್ಯಕ್ರಮ ನಡೆಯಿತು. ಸ್ಪರ್ಧೆಯಲ್ಲಿ ತಾಜುಲ್ ಹುದಾ ದಫ್ ಕಮಿಟಿ ರೆಂಜಾಡಿ ಪ್ರಥಮ, ಖಲಂದರ್ ಶಾ ದಫ್ ಕಮಿಟಿ ದ್ವಿತೀಯ, ಖುವ್ವತುಲ್ ಇಸ್ಲಾಂ ದಫ್ ಕಮಿಟಿ ಪೊಲಿಪು ಕಾಪು ತೃತೀಯ. ಡಿ. ಕೆ. ಎಸ್. ಸಿ. ಹಾಡುಗಾರಿಕೆಯಲ್ಲಿ ಪ್ರಥಮ ಅಲ್ ಆಮೀನ್  ಶಿರ್ವ ಮಂಚಕಲ್. ದ್ವಿತೀಯ ಖಲಂದರ್ ಶಾ ಮಣಿಪುರ, ತೃತೀಯ ತಾಜುಲ್ ಹುದಾ ರೆಂಜಾಡಿ. ಬಹುಮಾನವಾಗಿ ನಗದು, ಪ್ರಶಸ್ತಿ ಫಲಕ, ಹಾಗೂ ಪ್ರಶಸ್ತಿ ಪತ್ರಗಳನ್ನು ನೀಡಿ ಗೌರವಿಸಲಾಯಿತು. ಕಾರ್ಯಕ್ರಮದಲ್ಲಿ ರಜಾ ನಿಮಿತ್ತ ಊರಿಗೆ ಬಂದಿದ್ದ ಘಟಕ, ವಲಯ, ರಾಷ್ಟ್ರೀಯ ಸಮಿತಿಯ ಸದಸ್ಯರು, ಜಿಲ್ಲಾ ಸಮಿತಿಯ ನಾಯಕರು ಘಟಕಗಳ ಪದಾಧಿಕಾರಿಗಳು, ಹಿತೈಷಿಗಳು, ಅಲ್ ಇಹ್ಸಾನ್ ಸಿಬ್ಬಂದಿಗಳು ಭಾಗವಹಿಸಿದ್ದರು. ಇಸಾಕ್ ಬೊಳ್ಳಾಯಿ ಸ್ವಾಗತಿಸಿದರು. ಶರೀಫ್ ಬಜ್ಪೆ ವಂದಿಸಿದರು, ನೌಫಲ್ ವಿಟ್ಲ ನಿರೂಪಿಸಿದರು.

Join Whatsapp
Exit mobile version