Home ಟಾಪ್ ಸುದ್ದಿಗಳು ಡಿಕೆ ಶಿವಕುಮಾರ್‌ಗೆ ಅನಾರೋಗ್ಯ: ನಿವಾಸಕ್ಕೆ ದೌಡಾಯಿಸಿದ ವೈದ್ಯರ ತಂಡ

ಡಿಕೆ ಶಿವಕುಮಾರ್‌ಗೆ ಅನಾರೋಗ್ಯ: ನಿವಾಸಕ್ಕೆ ದೌಡಾಯಿಸಿದ ವೈದ್ಯರ ತಂಡ

ಬೆಂಗಳೂರು: ಉಪಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ಅವರು ದಿಢೀರ್ ಅನಾರೋಗ್ಯಕ್ಕೀಡಾಗಿದ್ದಾರೆ. ಅವರಿಗೆ ನಿನ್ನೆ ರಾತ್ರಿಯಿಂದ ವೈರಲ್ ಫೀವರ್ ಕಂಡು ಬಂದಿದೆ ಎಂದು ತಿಳಿದು ಬಂದಿದೆ.

ವೈರಲ್ ಫೀವರ್‌ನಿಂದ ಡಿಕೆ ಶಿವಕುಮಾರ್ ನಿನ್ನೆ ರಾತ್ರಿಯಿಂದ ಬಳಲುತ್ತಿದ್ದು, ಇಂದು ಸದಾಶಿವ ನಗರದ ನಿವಾಸಕ್ಕೆ ವೈದ್ಯರು ಬಂದು ತಪಾಸಣೆ ಮಾಡಿದ್ದಾರೆ.

ಶಾಸಕ ಹಾಗೂ ವೈದ್ಯರೂ ಆಗಿರುವ ಕುಣಿಗಲ್ ರಂಗನಾಥ್ ಜೊತೆಗೆ ಆಗಮಿಸಿದ ವೈದ್ಯರು ಡಿಕೆ ಶಿವಕುಮಾರ್ ಅವರನ್ನು ತಪಾಸಣೆ ನಡೆಸಿ ಸೂಕ್ತ ಚಿಕಿತ್ಸೆ ನೀಡಿದ್ದಾರೆ. ಸದ್ಯ ಮನೆಯಲ್ಲಿ ಡಿಕೆ ಶಿವಕುಮಾರ್ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದು ಬಂದಿದೆ.

Join Whatsapp
Exit mobile version