Home ಕರಾವಳಿ ಶಾಸಕರ ನಿಧಿಯಿಂದ ಲಸಿಕೆ ಖರೀದಿಸಲು ನಮಗೂ ಅವಕಾಶ ಕೊಡಿ: ಸರಕಾರಕ್ಕೆ ಕೆಪಿಸಿಸಿ ಅಧ್ಯಕ್ಷರ ದುಂಬಾಲು!

ಶಾಸಕರ ನಿಧಿಯಿಂದ ಲಸಿಕೆ ಖರೀದಿಸಲು ನಮಗೂ ಅವಕಾಶ ಕೊಡಿ: ಸರಕಾರಕ್ಕೆ ಕೆಪಿಸಿಸಿ ಅಧ್ಯಕ್ಷರ ದುಂಬಾಲು!

ಧರ್ಮಸ್ಥಳ: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಶ್ರೀ ಕ್ಷೇತ್ರ ಧರ್ಮಸ್ಥಳಕ್ಕೆ ಕುಟುಂಬ ಸಮೇತ ಭೇಟಿ ನೀಡಿ ದೇವರ ಆಶೀರ್ವಾದ ಪಡೆದಿದ್ದಾರೆ.  ಹೆಲಿಕಾಪ್ಟರ್ ಮೂಲಕ ಧರ್ಮಸ್ಥಳಕ್ಕೆ ಬಂದಿಳಿದ ಡಿಕೆಶಿ ಜೊತೆ ಪತ್ನಿ ಮತ್ತು ಮಗ ಇದ್ದರು.

ಮಾಜಿ ಶಾಸಕ ಕೆ. ವಸಂತ ಬಂಗೇರ, ವಿಧಾನ ಪರಿಷತ್ ಶಾಸಕ ಕೆ.ಹರೀಶ್ ಕುಮಾರ್, ಬೆಳ್ತಂಗಡಿ ಬ್ಲಾಕ್ ಕಾಂಗ್ರೆಸ್ ನಗರ ಅಧ್ಯಕ್ಷ ಶೈಲೇಶ್ ಕುಮಾರ್, ಬ್ಲಾಕ್ ಕಾಂಗ್ರೆಸ್ ಗ್ರಾಮೀಣ ಅಧ್ಯಕ್ಷ ರಂಜನ್ ಜಿ.ಗೌಡ, ಯುವ ಕಾಂಗ್ರೆಸ್ ಮಾಜಿ ಅಧ್ಯಕ್ಷ ಅಭಿನಂದನ್ ಹರೀಶ್ ಉಪಸ್ಥಿತರಿದ್ದು ಡಿಕೆಶಿ ಅವರನ್ನು ಸ್ವಾಗತಿಸಿದರು.

ಡಿಕೆಶಿ ಮತ್ತು ಕುಟುಂಬ ಧರ್ಮಸ್ಥಳದ ದೇವಸ್ಥಾನದ ಮುಂದೆ ದೇವರ ದರ್ಶನ ಪಡೆದರು. ನಂತರ ವಿರೇಂದ್ರ ಹೆಗ್ಡೆ ಅವರನ್ನ ಭೇಟಿಯಾಗಿ ಮಾತುಕತೆ ನಡೆಸಿದರು.

ಇದೇ ಸಂದರ್ಭ ಮಾಧ್ಯಮ ಪ್ರತಿನಿಧಿಗಳ ಜೊತೆ ಮಾತನಾಡಿದ ಡಿಕೆ ಶಿವಕುಮಾರ್, ಬ್ಲ್ಯಾಕ್ ಫಂಗಸ್ ವಿಚಾರದಲ್ಲಿ ಸರಕಾರ ಗೊಂದಲದ ಹೇಳಿಕೆಯಲ್ಲಿ ನಿರತವಾಗಿದೆ. ಔಷಧಿ ಕೊರತೆ ನೀಗಿಸಲು ಗುಜರಾತ್ ನಿಂದಾದರೂ ತರಿಸಿ ಔಷಧ ನೀಡುವಂತಾಗಿ ಎಂದು ಕೇಂದ್ರ ಸಚಿವ ಸದಾನಂದ ಗೌಡರನ್ನ ಒತ್ತಾಯಿಸಿದ್ದಾರೆ. ಇನ್ನು ಶಾಸಕರ ನಿಧಿಯಿಂದ 100 ಕೋಟಿ ರೂ. ವೆಚ್ಚದಲ್ಲಿ ಸರಕಾರಿ ಅಧಿಕಾರಿಗಳ ಜೊತೆ ಚರ್ಚಿಸಿಯೇ ಪಾರದರ್ಶಕವಾಗಿ ಲಸಿಕೆ ಖರೀದಿಸಿ ಪಕ್ಷ ಭೇದ ತೋರದೆ ಎಲ್ಲ  ಜನರಿಗೆ ಹಂಚಲು ಅವಕಾಶ ಕೊಡಿ ಅಂತಾ ಸರಕಾರಕ್ಕೆ ಮತ್ತೊಮ್ಮೆ ಒತ್ತಾಯಿಸಿದ್ದಾರೆ.‌

ಮೂಡಿಗೆರೆಯಲ್ಲಿ ದಲಿತ ಯುವಕನ ಮೇಲೆ ನಡೆದ ದೌರ್ಜನ್ಯ ಖಂಡಿಸಿದ ಡಿಕೆ ಶಿವಕುಮಾರ್, ಎಸ್ಸಿ, ಎಸ್ಟಿ ಆಯೋಗ ಇನ್ನೂ ಈ ವಿಚಾರದಲ್ಲಿ ಯಾಕಾಗಿ ಸುಮ್ಮನಿದೆ, ಸಮಾಜ ಕಲ್ಯಾಣ ಸಚಿವ ಶ್ರೀರಾಮುಲು ಯಾಕೆ ಇನ್ನೂ ಅಲ್ಲಿಗೆ ಭೇಟಿ ನೀಡಿಲ್ಲ ಎಂದು ಪ್ರಶ್ನಿಸಿದರು‌. 

MRPL ನಲ್ಲಿ ಉದ್ಯೋಗ ತಾರತಮ್ಯಕ್ಕೆ ಆಕ್ರೋಶ ವ್ಯಕ್ತಪಡಿಸಿದ ಡಿಕೆಶಿ, ಸರೋಜಿನಿ ಮಹಿಷಿ ವರದಿ ಜಾರಿ ಮಾಡಿ, ಸ್ಥಳೀಯರಿಗೆ ಉದ್ಯೋಗ ನೀಡುವಂತಾಗಬೇಕು. ಶೇಕಡಾ 75 ರಷ್ಟು ಕರಾವಳಿ ಜನರಿಗೆ ಉದ್ಯೋಗ ಸಿಗದೇ ಹೋದಲ್ಲಿ ಹೋರಾಟ ಮಾಡಬೇಕಾದೀತು ಎಂದು ಎಚ್ಚರಿಸಿದರು. 

ಕೋವಿಡ್ ನಂತೆ ಶಿಲೀಂಧ್ರ ರೋಗ ನಿಭಾಯಿಸುವಲ್ಲೂ ಸರಕಾರ ಬೇಜವಾಬ್ದಾರಿ ತೋರುತ್ತಿದೆ: ಡಿಕೆಶಿ ಆಕ್ರೋಶ
Join Whatsapp
Exit mobile version