ಬೆಂಗಳೂರು: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಕಾರ್ಯಾಧ್ಯಕ್ಷರಾಗಿ ಮಂಜುನಾಥ್ ಎಚ್.ಎಸ್. ಆಯ್ಕೆಯಾಗಿದ್ದಾರೆ. ವಿವಿಧ ರಾಜ್ಯಗಳ ಯುವ ಕಾಂಗ್ರೆಸ್ ಪದಾಧಿಕಾರಿಗಳ ಪಟ್ಟಿಯನ್ನು ಅಧ್ಯಕ್ಷ ಬಿ.ವಿ ಶ್ರೀನಿವಾಸ್ ಅವರು ಪ್ರಕಟಿಸಿದ್ದಾರೆ.
ಹೆಚ್ ಎಸ್ ಮಂಜುನಾಥ್ ಅವರು ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಆಪ್ತ ಬಳಗದಲ್ಲಿ ಗುರುತಿಸಿಕೊಂಡಿದ್ದಾರೆ. ಅಲ್ಲದೆ ಒಕ್ಕಲಿಗ ಸಮುದಾದಯವರಾದ ಹೆಚ್.ಎಸ್.ಮಂಜುನಾಥ್ ಅವರು ಈ ಹಿಂದೆ ಮಹಾಲಕ್ಷ್ಮೀ ಲೇಔಟ್ ನಿಂದ ವಿಧಾನಸಭೆ ಸ್ಪರ್ಧಿಸಿದ್ದರು. ಈಗ ಹೆಚ್.ಎಸ್.ಮಂಜುನಾಥ್ ಅವರಿಗೆ ಹೈಕಮಾಂಡ್ ಕಾರ್ಯಾಧ್ಯಕ್ಷ ಪಟ್ಟ ಕಟ್ಟಿದೆ. ಮೊಹಮ್ಮದ್ ನಲಪಾಡ್ ಯುವ ಕಾಂಗ್ರೆಸ್ನ ಹಾಲಿ ಅಧ್ಯಕ್ಷರಾಗಿ ಇದ್ದಾರೆ.