Home ಟಾಪ್ ಸುದ್ದಿಗಳು ಲೋಕಸಭಾ ಚುನಾವಣೆ ಹೇಗೆ ನಡೆಯುತ್ತೆ ಎಂಬುದಕ್ಕೆ ಚಂಡೀಗಢ ಮೇಯರ್ ಚುನಾವಣೆ ಸಾಕು: ಮಲ್ಲಿಕಾರ್ಜುನ ಖರ್ಗೆ

ಲೋಕಸಭಾ ಚುನಾವಣೆ ಹೇಗೆ ನಡೆಯುತ್ತೆ ಎಂಬುದಕ್ಕೆ ಚಂಡೀಗಢ ಮೇಯರ್ ಚುನಾವಣೆ ಸಾಕು: ಮಲ್ಲಿಕಾರ್ಜುನ ಖರ್ಗೆ

ಕಲಬುರಗಿ: ಚಂಡೀಗಢ ಮೇಯರ್ ಚುನಾವಣೆಯಲ್ಲಿ ಅಧಿಕಾರಿಯೊಬ್ಬ ತಾನೇ ಮತ ಚಲಾಯಿಸಿದ್ದಾನೆ ಎಂದರೇ ಲೋಕಸಭಾ ಚುನಾವಣೆ ಗೆಲ್ಲಲು ಮೋದಿ ಸರ್ಕಾರ ಗ್ರಾಮೀಣ ಭಾಗಗಳಲ್ಲಿ ಏನೇನು ಮಾಡುತ್ತಿರಬೇಕು ಎಂಬುದಕ್ಕೆ ಇದೇ ಅಂದಾಜು ಸಾಕು’ ಎಂದು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದರು.


ಬುಧವಾರ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ‘ಪ್ರಜಾಪ್ರಭುತ್ವ ಉಳಿಯಬೇಕಾದರೆ ಎಲ್ಲರಿಗೂ ಸಮತಟ್ಟಾದ ಆಟದ ಮೈದಾನ ಸಿಗಬೇಕು. ಆಗ, ಒಮ್ಮೆ ನೀವು ಗೆಲ್ಲಬಹುದು, ಮತ್ತೊಮ್ಮೆ ನಾವು ಗೆಲ್ಲಬಹುದು. ಆದರೆ, ಜನರನ್ನು ಹೆದರಿಸಿ, ಬೆದರಿಸಿ ಪಕ್ಷಕ್ಕೆ ಸೆಳೆದುಕೊಂಡರೆ ಪ್ರಜಾಪ್ರಭುತ್ವ ಉಳಿಯುವುದಿಲ್ಲ. ಇದು ಹೀಗೆ ಮುಂದುವರಿದರೆ ಸಂವಿಧಾನ ಮತ್ತು ಜನರಿಗೂ ತೊಂದರೆ ಆಗುತ್ತದೆ. ಸಹಜವಾಗಿ ವಯಸ್ಕರ ಮತದಾನವೂ ಉಳಿಯುವುದಿಲ್ಲ’ ಎಂದರು.

Join Whatsapp
Exit mobile version