Home ಟಾಪ್ ಸುದ್ದಿಗಳು ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ದ.ಕ ಜಿಲ್ಲೆಯ ಪೊಲೀಸ್ ತಂಡದ ಕಾರ್ಯಾಚರಣೆ ಶ್ಲಾಘನೀಯ:...

ಕೋಟೆಕಾರ್ ಬ್ಯಾಂಕ್ ದರೋಡೆ ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ದ.ಕ ಜಿಲ್ಲೆಯ ಪೊಲೀಸ್ ತಂಡದ ಕಾರ್ಯಾಚರಣೆ ಶ್ಲಾಘನೀಯ: SDPI

ಮಂಗಳೂರು: ಕೋಟೆಕಾರ್ ಬ್ಯಾಂಕ್ ದರೋಡೆಯ ಪ್ರಕರಣವನ್ನು ಕೇವಲ 36 ಗಂಟೆಗಳಲ್ಲಿ ಕ್ಷಿಪ್ರ ಕಾರ್ಯಚರಣೆಯ ಮೂಲಕ ಭೇದಿಸಿ ದರೋಡೆಕೋರರನ್ನು ಬಂಧಿಸಿದ ದಕ್ಷಿಣ ಕನ್ನಡ ಜಿಲ್ಲೆಯ ಪೊಲೀಸ್ ತಂಡದ ಕಾರ್ಯಾಚರಣೆಯನ್ನು ಎಸ್.ಡಿ.ಪಿ.ಐ ಮಂಗಳೂರು ನಗರ ಜಿಲ್ಲಾ ಉಪಾಧ್ಯಕರಾದ ಅಶ್ರಫ್ ಅಡ್ಡೂರು ರವರು ಅಭಿನಂದಿಸಿದ್ದಾರೆ.

ಅಲ್ಲದೆ ಹಾಡಹಗಲೇ ಇಂತಹ ದರೋಡೆಯಿಂದ ಅತಂಕಗೊಳಗಾಗಿದ್ದ ಜಿಲ್ಲೆಯ ಜನತೆಗೆ ಪೊಲೀಸ್ ಇಲಾಖೆಯ ಮೇಲೆ ಭರವಸೆ ಹೆಚ್ಚಾಗಿದೆ ಎಂದು ತಿಳಿಸಿದ್ದಾರೆ.

ಕಳೆದ ಶುಕ್ರವಾರ ಮಧ್ಯಾಹ್ನದ ಸಮಯದಲ್ಲಿ ದರೋಡೆಕೋರರು ಅತ್ಯಂತ ಪೂರ್ವ ಯೋಜಿತ ರೀತಿಯಲ್ಲಿ ಕರಾರುವಕ್ಕಾಗಿ ಪೂರ್ವ ತಯಾರಿ ಮಾಡಿಕೊಂಡು ಬ್ಯಾಂಕ್ ನ್ನು ದರೋಡೆ ಮಾಡಿದ ಕೃತ್ಯವೂ ಇಡೀ ರಾಜ್ಯವನ್ನೇ ಬೆಚ್ಚಿ ಬೀಳಿಸುವಂತಿತ್ತು, ಅದಲ್ಲದೇ ಕಲುಬುರ್ಗಿಯಲ್ಲೂ ಇಂತಹದೇ ದರೋಡೆ ಕೃತ್ಯ ನಡೆದಿತ್ತು,

ಹಾಗಾಗಿ ಕರ್ನಾಟಕವು ದರೋಡೆಕೋರರಿಗೆ ಸ್ವರ್ಗವಾಗಿದೆಯೇ ಎಂಬ ಆತಂಕವು ಮನೆ ಮಾಡಿತ್ತು, ಪೋಲಿಸರಿಗೂ ಸವಾಲಾಗಿದ್ದ ಈ ಪ್ರಕರಣವನ್ನು ದಕ್ಷಿಣ ಕನ್ನಡ ಪೋಲಿಸ್ ಇಲಾಖೆ ಕೇವಲ ಮೂರೇ ದಿನದಲ್ಲಿ ಭೇದಿಸಿರುವ ಕಾರ್ಯವು ಅತ್ಯಂತ ಶ್ಲಾಘನೀಯವಾಗಿದೆ ಹಾಗೂ ಪೋಲೀಸರ ಮೇಲಿನ ಭರವಸೆಯು ಜೀವಂತವಾಗಿರಿಸಿದೆ.

ಅದೆ ರೀತಿ ರಾಜಕೀಯ ಪ್ರಭಾವ ಇಲ್ಲದಿದ್ದರೆ ಪೋಲೀಸರು ಎಷ್ಟೇ ಕ್ಲಿಷ್ಟಕರವಾದ ಪ್ರಕರಣವನ್ನು ಸಹ ಅತೀ ಶೀಘ್ರದಲ್ಲಿ ಬೇದಿಸಲು ಸಹಕಾರಿಯಾಗುತ್ತದೆ ಎಂಬುದಕ್ಕೆ ಈ ಪ್ರಕರಣವು ಸಾಕ್ಷಿಯಾಗಿದೆ ಎಂದು ಅವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Join Whatsapp
Exit mobile version