Home ಕರಾವಳಿ ದಕ್ಷಿಣ ಕನ್ನಡ: ವಿದೇಶಿ ಪ್ರಯಾಣಿಕರ ಕೋವಿಡ್ ಲಸಿಕೆಗಾಗಿ ಜಿಲ್ಲಾಡಳಿತದಿಂದ ಇನ್ನಷ್ಟು ಸರಳ ಕ್ರಮ

ದಕ್ಷಿಣ ಕನ್ನಡ: ವಿದೇಶಿ ಪ್ರಯಾಣಿಕರ ಕೋವಿಡ್ ಲಸಿಕೆಗಾಗಿ ಜಿಲ್ಲಾಡಳಿತದಿಂದ ಇನ್ನಷ್ಟು ಸರಳ ಕ್ರಮ

ಮಂಗಳೂರು: ವಿದೇಶಕ್ಕೆ ಹೋಗಲಿರುವ 18 ರ‍್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಮೊದಲ ಕೋವಿಡ್ ಡೋಸ್ ಲಸಿಕೆ ಹಾಕಲು ದಕ್ಷಿಣ ಕನ್ನಡ ಜಿಲ್ಲಾಡಳಿತ ಆದೇಶಿಸಿದೆ.
ಜೂನ್ 14 ರ ಸೋಮವಾರದಿಂದ ದಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ಆರೋಗ್ಯ ಕೇಂದ್ರ, ಪ್ರಾಥಮಿಕ ಆರೋಗ್ಯ, ನಗರ ಆರೋಗ್ಯ ಕೇಂದ್ರ ಸೇರಿದಂತೆ ಎಲ್ಲಾ ಲಸಿಕಾ ಕೇಂದ್ರಗಳಲ್ಲಿ ಲಸಿಕೆ ಹಾಕಿಸಿಕೊಳ್ಳಲು ಜಿಲ್ಲಾಧಿಕಾರಿ‌ ಡಾ.ರಾಜೇಂದ್ರ ಕೆ.ವಿ ಆದೇಶಿಸಿದ್ದಾರೆ.
ವಿದೇಶಕ್ಕೆ ಹೋಗಲಿರುವವರು ಅವರ ಪಾಸ್ ಪೋರ್ಟ್, ವೀಸಾ ಅಥವಾ ಪ್ರಯಾಣದ ಟಿಕೇಟನ್ನು ದಾಖಲೆಯಾಗಿ ತೋರಿಸಿ ಅವರ ಗ್ರಾಮದ ಸ್ಥಳೀಯ ಲಸಿಕಾ ಕೇಂದ್ರದಲ್ಲೇ ಮೊದಲ ಆದ್ಯತೆಯ ಮೇರೆಗೆ ಲಸಿಕೆ ಪಡೆಯಲು ಸೂಚಿಸಲಾಗಿದೆ.

Join Whatsapp
Exit mobile version