Home ಗಲ್ಫ್ ಅಬುಧಾಬಿಯಲ್ಲಿ ಜೂನ್ 15 ರಿಂದ ಗ್ರೀನ್ ಪಾಸ್ ಪ್ರೊಟೋಕಾಲ್; ಸೂಪರ್ ಮಾರ್ಕೆಟ್, ರೆಸ್ಟೋರೆಂಟ್ ಗಳಿಗೂ ಅನ್ವಯ

ಅಬುಧಾಬಿಯಲ್ಲಿ ಜೂನ್ 15 ರಿಂದ ಗ್ರೀನ್ ಪಾಸ್ ಪ್ರೊಟೋಕಾಲ್; ಸೂಪರ್ ಮಾರ್ಕೆಟ್, ರೆಸ್ಟೋರೆಂಟ್ ಗಳಿಗೂ ಅನ್ವಯ

ಅಬುಧಾಬಿ : ಕೋವಿಡ್ ನಿಯಂತ್ರಣಕ್ಕಾಗಿ ಅಬುಧಾಬಿಯಲ್ಲಿ ಈ ತಿಂಗಳ 15ರಿಂದ ಗ್ರೀನ್ ಪಾಸ್ ಪ್ರೊಟೋಕಾಲ್ ಕಡ್ಡಾಯವಾಗಲಿದ್ದು, ಮೊಬೈಲ್ ಫೋನ್ ನಲ್ಲಿರುವ ಅಲ್ಹೋಸೆನ್ ಅಪ್ಲಿಕೇಶನ್ ರೆಸ್ಟೋರೆಂಟ್, ಸೂಪರ್ ಮಾರ್ಕೆಟ್ ಸೇರಿದಂತೆ ಕೆಲವು ಸಾರ್ವಜನಿಕ ಸ್ಥಳಗಳಿಗೆ ಪ್ರವೇಶಿಸುವ ಸಂದರ್ಭ ಹಸಿರು ಬಣ್ಣದಲ್ಲಿರಬೇಕು.

 ಗ್ರೀನ್ ಪಾಸ್ ಪ್ರೊಟೋಕಾಲ್ ಅಬುಧಾಬಿಯಲ್ಲಿ ಎಲ್ಲಾ 16 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಅನ್ವಯಿಸುತ್ತದೆ. ಶಾಪಿಂಗ್ ಮಾಲ್ ಗಳು ಮತ್ತು ಸೂಪರ್ ಮಾರ್ಕೆಟ್ ಗಳಿಗೆ ಹೋಗುವಾಗ ಅಲ್ಹೋಸೆನ್ ಅಪ್ಲಿಕೇಶನ್ ಹಸಿರು ಬಣ್ಣ ತೋರಿಸಬೇಕು. ಇದು ರೆಸ್ಟೋರೆಂಟ್ ಗಳು, ಕೆಫೆಗಳು, ಜಿಮ್, ಟಾಕೀಸುಗಳು, ಮ್ಯೂಸಿಯಂಗಳು ಮತ್ತು ಬೀಚ್ ಗಳಿಗೆ ಅನ್ವಯಿಸುತ್ತದೆ.

ಲಸಿಕೆ ಪಡೆದ ಮತ್ತು ಪಿಸಿಆರ್ ಪರೀಕ್ಷೆ ನಡೆಸಿದ ಪ್ರತಿಯೊಬ್ಬ ವ್ಯಕ್ತಿಯ ಮೊಬೈಲ್ ಅಪ್ಲಿಕೇಶನ್ ಹಸಿರು ಬಣ್ಣವನ್ನು ಪಡೆಯಲಿದೆ. ಈ ಪ್ರೋಟೋಕಾಲ್ ಅನ್ನು ಯುಎಇ ಆರೋಗ್ಯ ಸಚಿವಾಲಯವು ನಿನ್ನೆ ಅನುಮೋದಿಸಿದೆಯಾದರೂ ಇದನ್ನು ಮೊದಲು ಅಬುಧಾಬಿ ಎಮಿರೇಟ್ ಜಾರಿಗೆ ತಂದಿದೆ. ಎರಡು ಡೋಸ್ ಲಸಿಕೆಯನ್ನು ಪೂರ್ಣಗೊಳಿಸಿ 28 ದಿನಗಳ ನಂತರ ನಡೆಸಿದ ಪಿಸಿಆರ್ ಪರೀಕ್ಷೆಯಲ್ಲಿ ನೆಗೆಟಿವ್ ವರದಿ ಬಂದವರ ಅಪ್ಲಿಕೇಶನ್ ತಿಂಗಳಿಗೆ ನಿರಂತರವಾಗಿ 30 ದಿನಗಳ ವರೆಗೆ ಹಸಿರು ಬಣ್ಣದಲ್ಲಿರುತ್ತದೆ. ಲಸಿಕೆ ಪಡೆಯದೆ ಪಿಸಿಆರ್ ಪರೀಕ್ಷೆ ನಡೆಸದವರ ಅಪ್ಲಿಕೆಷನ್  ಈ ತಿಂಗಳ 15 ರಿಂದ ಮೂರು ದಿನ ಮಾತ್ರ ಹಸಿರು ಬಣ್ಣವನ್ನು ಪಡೆದಿರುತ್ತದೆ.

ಅಪ್ಲಿಕೇಶನ್ ನಲ್ಲಿ ಯಾರೆಲ್ಲಾ ಹಸಿರು ಬಣ್ಣವನ್ನು ಪಡೆಯುತ್ತಾರೆ? ಮಾಹಿತಿ ಈ ಕೆಳಗಿನಂತಿವೆ.

  1. ಎರಡು ಡೋಸ್ ಲಸಿಕೆ ತೆಗೆದುಕೊಂಡ 28 ದಿನಗಳ ನಂತರ, 30 ದಿನಗಳು ಅಪ್ಲಿಕೇಶನ್ ನಲ್ಲಿ ಹಸಿರು ಬಣ್ಣವನ್ನು ತೋರಿಸುತ್ತದೆ.(ಏಳು ದಿನಗಳು E ಇಂಗ್ಲಿಷ್ ಅಕ್ಷರ ತೋರಿಸುತ್ತದೆ)
  2. ಎರಡು ಡೋಸ್ ಪಡೆದು 28 ದಿನ ಪೂರ್ತಿಯಾಗದವರಿಗೆ ಅಪ್ಲಿಕೇಶನ್ ನಲ್ಲಿ 14 ದಿವಸ ಹಸಿರು ಬಣ್ಣವನ್ನು ತೋರಿಸುತ್ತದೆ.
  3. ಮೊದಲ ಡೋಸ್ ಪಡೆದು ಎರಡನೇ ಡೋಸ್ ಗಾಗಿ ಕಾಯುತ್ತಿರುವವರಿಗೆ 7 ದಿನ ಅಪ್ಲಿಕೇಶನ್ ನಲ್ಲಿ ಹಸಿರು ಬಣ್ಣವನ್ನು ತೋರಿಸುತ್ತದೆ.
  4. ಮೊದಲ ಡೋಸ್ ಪಡೆದು 48 ದಿನ ಕಳೆದವರಿಗೆ ಅಪ್ಲಿಕೇಶನ್ ನಲ್ಲಿ 3 ದಿನ ಹಸಿರು ಬಣ್ಣವನ್ನು ತೋರಿಸುತ್ತದೆ.
  5. ಲಸಿಕೆ ಪಡೆಯಲು ಸಾಧ್ಯವಾಗದವರು ವಿನಾಯಿತಿ ಪತ್ರವನ್ನು ಪಡೆದಿದ್ದರೆ 5 ದಿನಗಳವರೆಗೆ ಅಪ್ಲಿಕೆಶನ್ ನಲ್ಲಿ ಹಸಿರು ಬಣ್ಣವನ್ನು ತೋರಿಸುತ್ತದೆ.
  6. ಲಸಿಕೆ ಪಡೆಯದೆ ವಿನಾಯಿತಿ ಪತ್ರವನ್ನು ಪಡೆಯದವರಿಗೆ 3ದಿನ ಹಸಿರು ಬಣ್ಣ ತೋರಿಸಲಿದೆ.
  7. ಅವಧಿ ಮುಗಿದ ನಂತರ ಬೂದಿ ಬಣ್ಣಕ್ಕೆ ತಿರುಗುತ್ತದೆ.
  8. ಕೋವಿಡ್ ಪರೀಕ್ಷೆಯಲ್ಲಿ ಪಾಸಿಟಿವ್ ಆದವರ ಅಪ್ಲಿಕೇಶನ್ ಕೆಂಪು ಬಣ್ಣವನ್ನು ತೋರಿಸುತ್ತದೆ.
Join Whatsapp
Exit mobile version