ಮಂಗಳೂರು: ದಕ್ಷಿಣ ಕನ್ನಡ ಲೋಕಸಭೆ ಕ್ಷೇತ್ರದಿಂದ ಬಿಜೆಪಿ ಕ್ಯಾಪ್ಟನ್ ಬ್ರಿಜೇಶ್ ಚೌಟಾ ಅವರಿಗೆ ಈ ಬಾರಿ ಟಿಕೆಟ್ ನೀಡಿದೆ. ಆ ಮೂಲಕ ನಳಿನ್ ಕುಮಾರ್ ಕಟೀಲ್ಗೆ ಟಿಕೆಟ್ ಕೈತಪ್ಪಿ ಹೋಗಿದೆ. ಇದೀಗ ದಕ್ಷಿಣ ಕನ್ನಡ ಲೋಕಸಭಾ ಬಿಜೆಪಿ ಅಭ್ಯರ್ಥಿ ಬ್ರಿಜೇಶ್ ಚೌಟ ಸಾಂಕೇತಿಕವಾಗಿ ಇಂದು ನಾಮಪತ್ರ ಸಲ್ಲಿಕೆ ಮಾಡಿದ್ದಾರೆ. ಏಪ್ರಿಲ್ 4ರಂದು ಅಧಿಕೃತವಾಗಿ ನಾಮಪತ್ರ ಸಲ್ಲಿಸಲಿದ್ದಾರೆ. ಇಂದು ಸಲ್ಲಿಸಿರುವ ನಾಮಪತ್ರ ಅಫಿಡವಿಟ್ ನಲ್ಲಿ ಲಕ್ಷಾಧಿಪತಿ ಎಂದು ಘೋಷಿಸಿಕೊಂಡಿದ್ದಾರೆ.
ಬ್ರಿಜೇಶ್ ಚೌಟ ಆಸ್ತಿ ವಿವರ ಹೀಗಿದೆ
ಸ್ಥಿರ ಮತ್ತು ಚರಾಸ್ತಿ ಒಟ್ಟು ಮೊತ್ತ 70,81,365 ಲಕ್ಷ ರೂ.
ಸ್ಥಿರ ಆಸ್ತಿಯ ಒಟ್ಟು ಮೊತ್ತ 27,31,365 ಲಕ್ಷ ರೂ.
ಚರಾಸ್ತಿಯ ಒಟ್ಟು ಮೊತ್ತ 43,50,000 ಲಕ್ಷ ರೂ.
ಒಟ್ಟು 9,62,010 ರೂ. ಗಳ ಇನ್ನೋವಾ ಕಾರಿಗಾಗಿ ಸಾಲ ಮಾಡಿದ್ದಾರೆ.
ಬಿಎಸ್ಸಿ ಶಿಕ್ಷಣದ ಜೊತೆಗೆ ಐಐಎಂ ಅನ್ನು ಇಂದೋರ್ನಲ್ಲಿ ಬ್ಯುಸಿನೆಸ್ ಮ್ಯಾನೇಜ್ಮೆಂಟ್ ಡಿಫೆನ್ಸ್ ಆಫೀಸರ್ ಸರ್ಟಿಫಿಕೇಟ್ ಕೋರ್ಸ್ ಮಾಡಿದ್ದಾರೆ.
ಅವಿವಾಹಿತರಾಗಿದ್ದು 42 ವರ್ಷ ಪ್ರಾಯದವರಾಗಿದ್ದಾರೆ.