ಬಂಟ್ವಾಳ: ಈ ಬಾರಿಯ ಎಸ್ಸೆಸೆಲ್ಸಿ ಪಬ್ಲಿಕ್ ಪರೀಕ್ಷೆಯಲ್ಲಿ ಬಂಟ್ವಾಳದ ತುಂಬೆ ಆಂಗ್ಲ ಮಾದ್ಯಮ ಶಾಲೆಯ ವಿದ್ಯಾರ್ಥಿನಿ ಅಮೀನಾ ಶಬಾ 625 ರಲ್ಲಿ 607 ಅಂಕಗಳನ್ನು ಪಡೆಯುವ ಮೂಲಕ ಉನ್ನತ ಶ್ರೇಣಿ ದಾಖಲಿಸಿ ಶಾಲೆಗೆ ಕೀರ್ತಿ ತಂದಿದ್ದಾರೆ.
ಅಮೀನಾ ಶಬಾ ಕನ್ನಡದಲ್ಲಿ 120, ಹಿಂದಿಯಲ್ಲಿ 100, ಸಮಾಜ ವಿಜ್ಞಾನದಲ್ಲಿ 99, ಇಂಗ್ಲೀಷ್‌ನಲ್ಲಿ 198, ವಿಜ್ಞಾನದಲ್ಲಿ 96 ಮತ್ತು ಗಣಿತದಲ್ಲಿ 94 ಅಂಕಗಳನ್ನು ಪಡೆದಿದ್ದಾರೆ.
ಅಮೀನಾ ಶಬಾ ಬಂಟ್ವಾಳ ತಾಲೂಕಿನ ಪುದು ಅಂಚೆ ವ್ಯಾಪ್ತಿಯ ಪೇರಿಮಾರ್ ನಿವಾಸಿ ಬದ್ರುದ್ದೀನ್ ಹಾಜಿ ಮತ್ತು ಶಮೀಮ ದಂಪತಿಯ ಪುತ್ರಿಯಾಗಿದ್ದಾರೆ.