Home ಅಪರಾಧ ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಡಿ ಖಂಡನೀಯ ಮತ್ತು ಅಕ್ಷಮ್ಯ: ಯುನಿವೆಫ್  ಕರ್ನಾಟಕ

ಶೈಕ್ಷಣಿಕ ಕಾರ್ಯಾಗಾರಕ್ಕೆ ಅಡ್ಡಿ ಖಂಡನೀಯ ಮತ್ತು ಅಕ್ಷಮ್ಯ: ಯುನಿವೆಫ್  ಕರ್ನಾಟಕ

ಮಂಗಳೂರು: ಎಸ್ ಎಸ್ ಎಲ್ ಸಿ ಹಾಗೂ ಪದವಿಪೂರ್ವ ವಿದ್ಯಾರ್ಥಿಗಳಿಗಾಗಿ ಅಡ್ಯನಡ್ಕದಲ್ಲಿ ಆಯೋಜಿಸಲಾಗಿದ್ದ ಶೈಕ್ಷಣಿಕ ಕಾರ್ಯಾಗಾರದಲ್ಲಿ ಧಾರ್ಮಿಕ ಪ್ರವಚನ ಮಾಡಲಾಗಿದೆ ಎಂದು ಆರೋಪಿಸಿ ಸಂಘಪರಿವಾರ ಸಂಘಟನೆಯ ಕಾರ್ಯಕರ್ತರೆಂದೆನಿಸಿದವರು ದಾಳಿ ನಡೆಸಿ ಕಾರ್ಯಕ್ರಮಕ್ಕೆ ಅಡ್ಡಿಪಡಿಸಿರುವುದು ಖಂಡನೀಯ ಮತ್ತು ಅಕ್ಷಮ್ಯ. ಇದನ್ನು “ಯುನಿವೆಫ್ ಕರ್ನಾಟಕ” ತೀವ್ರವಾಗಿ ಖಂಡಿಸುತ್ತದೆ ಎಂದು ಸಂಘಟನೆಯ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ತಿಳಿಸಿದ್ದಾರೆ.

         ನುಸ್ರತುಲ್ ಮಸಾಕೀನ್ ಯಂಗ್’ಮೆನ್ಸ್ ಅಸೋಸಿಯೇಶನ್  ಎಂಬ ಸಮಾಜ ಸೇವಾ ಸಂಘಟನೆ  ವಿವಿಧ ಕಾರ್ಯಕ್ರಮಗಳ ಮೂಲಕ ಕಳೆದ 15 ವರ್ಷಗಳಿಂದ  ಸಮಾಜದಲ್ಲಿ ಜಾಗೃತಿಯನ್ನು ಮೂಡಿಸುವ ಹಾಗೂ ಸಮಾಜಸೇವೆ ಮಾಡುವ ಕಾರ್ಯದಲ್ಲಿ ತನ್ನನ್ನು ತೊಡಗಿಸಿ ಕೊಂಡಿದೆ.  ಅದರ ಭಾಗವಾಗಿ ನಿನ್ನೆ  ವಿದ್ಯಾರ್ಥಿಗಳಿಗೆ ಉಚಿತ ಶೈಕ್ಷಣಿಕ ಕಾರ್ಯಾಗಾರವನ್ನು ಹಮ್ಮಿಕೊಂಡಿತ್ತು. ಆದರೆ ಆ ಕಾರ್ಯಾಗಾರದಲ್ಲಿ ಇಸ್ಲಾಮ್  ಮತ ಪ್ರವಚನವನ್ನು ನೀಡಲಾಗುತ್ತಿದೆ ಎಂದು ಆರೋಪಿಸಿ ಕೆಲವು ವ್ಯಕ್ತಿಗಳು ಕೆಲವು ದಾಳಿ ನಡೆಸಿ ಅದನ್ನು ‌ತಡೆದಿರುವುದು ಅಸಾಂವಿಧಾನಿಕ ಹಾಗು ಕಿಡಿಗೇಡಿತನವಾಗಿದೆ ಎಂದು ಅವರು ಟೀಕಿಸಿದ್ದಾರೆ.

        ಕಲ್ಮಶ ರಹಿತ ವಿದ್ಯಾರ್ಥಿಗಳ ಮನದಲ್ಲಿ ಹಿಂದೂ – ಮುಸ್ಲಿಂ ಎಂಬ ಕೋಮು ಭಾವನೆಯನ್ನು ಬಿತ್ತರಿಸಿ ಅವರ ಮನದಲ್ಲಿ ಭಯ ಹುಟ್ಟಿಸುವ ಈ ತಂತ್ರವನ್ನು ಪ್ರತಿಯೊಬ್ಬರೂ ಖಂಡಿಸಲೇಬೇಕಾಗಿದೆ. ಕರ್ನಾಟಕದಲ್ಲಿ ಇಂತಹ ಘಟನೆಗಳು ಇಂದು ಸರ್ವೇಸಾಮಾನ್ಯವಾಗಿದೆ.‌ ಯಾರು ಏನು ಬೇಕಾದರೂ ಮಾಡಬಹುದು ಏನು ಬೇಕಾದರೂ ಹೇಳಬಹುದು ಎಂಬ ಹಂತಕ್ಕೆ ಪರಿಸ್ಥಿತಿ ಬಂದು ತಲುಪಿರುವುದು ಶೋಚನೀಯವಾಗಿದೆ. ಅಡ್ಯನಡ್ಕ ಘಟನೆಯನ್ನು ಅಧಿಕಾರಿಗಳು ಕೂಲಂಕಶವಾಗಿ ತನಿಖೆ ನಡೆಸಬೇಕಾಗಿದೆ ಮತ್ತು ಕಾರ್ಯಕ್ರಮ ಆಯೋಜಕರ ವಿರುದ್ಧ ಹಾಕಲಾಗಿರುವಂತಹ ಕೇಸನ್ನು ರದ್ದುಪಡಿಸಿ ದಾಂಧಲೆ ನಡೆಸಿರುವ ಜನರ ಮೇಲೆ ಉಗ್ರ ಕ್ರಮ ಕೈಗೊಳ್ಳಬೇಕೆಂದು ರಫೀಉದ್ದೀನ್ ಕುದ್ರೋಳಿ ಪತ್ರಿಕಾ ಹೇಳಿಕೆಯಲ್ಲಿ ಆಗ್ರಹಿಸಿದ್ದಾರೆ.

Join Whatsapp
Exit mobile version