ಸ್ಯಾನ್ ಫ್ರಾನ್ಸಿಸ್ಕೋ: ಮನರಂಜನೆ ವಲಯದ ದೈತ್ಯ ಕಂಪನಿ ಅಮೆರಿಕದ ಡಿಸ್ನಿ, ವೆಚ್ಚ ಕಡಿತ ಹಾಗೂ ನಿರ್ವಹಣೆ ಮತ್ತು ಸಂಸ್ಥೆಯ ಪುನರಾಚನೆಯ ಭಾಗವಾಗಿ 7,000 ಉದ್ಯೋಗ ಕಡಿತಗೊಳಿಸಲು ಯೋಜಿಸಿರುವುದಾಗಿ ತಿಳಿಸಿದೆ.
“ವೆಚ್ಚ ಕಡಿತ ಹಾಗೂ ನಿರ್ವಹಣೆ, ಸಂಸ್ಥೆಯ ಪುನರಾಚನೆ, ಸ್ಟ್ರೀಮಿಂಗ್ ಚಂದಾ ಸೇವೆಯಲ್ಲಿ ಇಳಿಕೆ ಕಾರಣದಿಂದ ಈ ಕಠಿಣ ನಿರ್ಣಯ ತೆಗೆದುಕೊಳ್ಳಲಾಗುತ್ತದೆ” ಎಂದು ಕಂಪನಿಯ ಸಿಇಒ ಬಾಬ್ ಇಗರ್ ಹೇಳಿದ್ದಾರೆ.
ಚಂದಾದಾರಿಕೆಯಲ್ಲಿ ಇಳಿಕೆ ಉಂಟಾಗಿದೆ ಎಂದು ಕಳೆದ ತ್ರೈಮಾಸಿಕ ವರದಿಯಲ್ಲಿ ವಾಲ್ಟ್ ಡಿಸ್ನಿ ಹೂಡಿಕೆಯ ಕಂಪನಿಯು ಹೇಳಿದೆ. ಡಿಸ್ನಿ ಪ್ಲಸ್, ಮೂರು ತಿಂಗಳ ಹಿಂದಿನದಕ್ಕೆ ಹೋಲಿಸಿದರೆ ಶೇ 1ರಷ್ಟು ಇಳಿಕೆ ಕಂಡು ಡಿಸೆಂಬರ್ 31ಕ್ಕೆ 161.8 ದಶಲಕ್ಷ ಗ್ರಾಹಕರನ್ನು ಹೊಂದಿದೆ. ಡಿಸ್ನಿ ಸಂಸ್ಥೆಯಲ್ಲಿ ಜಗತ್ತಿನಾದ್ಯಂತ 1,90,000 ಮಂದಿ ಕೆಲಸ ಮಾಡುತ್ತಿದ್ದು, ಶೇ 80ರಷ್ಟು ಮಂದಿ ಖಾಯಂ ಆಗಿದ್ದಾರೆ ಎಂದು 2021ರ ವಾರ್ಷಿಕ ವರದಿ ತಿಳಿಸಿದೆ.