– ಡಾ. ಸಿ.ಕೆ.ಅಬ್ದುಲ್ಲಾ (ಭಾಗ -1)
ಸಾಂಸ್ಕೃತಿಕ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವ ಭಾಗವಾಗಿ 2014ರಲ್ಲಿ ಐತಿಹಾಸಿಕ ಧಾರಾವಾಹಿ ಸರಣಿಯು ಆರಂಭವಾಯಿತು. ಹಾಲಿವುಡ್ ಚಲನಚಿತ್ರ ಧಾರಾವಾಹಿಗಳು, ಅದಕ್ಕೆ ಸಮನಾದ ಸ್ಥಳೀಯ ಧಾರಾವಾಹಿಗಳು/ಚಲನಚಿತ್ರಗಳು ಸಮಾಜದಲ್ಲಿ ಹೊಸ ಪೇಕ್ಷಕರನ್ನು ಮತ್ತು ಪಾರಂಪರಿಕ ಪ್ರಜ್ಞೆಯನ್ನು ಸೃಷ್ಟಿಸಿವೆ. ಇವು ಇಸ್ಲಾಮೀ ಸಂಸ್ಕೃತಿ ಮತ್ತು ಉಸ್ಮಾನಿಯಾ ಪರಂಪರೆಗೆ ಸಮುದಾಯವನ್ನು ಮರಳಿ ಕೊಂಡೊಯ್ಯುವ ಪ್ರಜ್ಞಾಪೂರ್ವಕ ಪ್ರಯತ್ನಗಳಂತೆ ಕಂಡು ಬರುತ್ತದೆ.
60 ವರ್ಷಗಳ ಕಠಿಣ ರಾಜಕೀಯ ಪರೀಕ್ಷೆಗಳ ಮೂಲಕ ಕೊನೆಗೂ 2002ರಲ್ಲಿ ತುರ್ಕಿಯಲ್ಲಿ ಜಸ್ಟೀಸ್ ಆ್ಯಂಡ್ ಡೆವೆಲಪ್‌ಮೆಂಟ್ ಪಾರ್ಟಿ ಅಧಿಕಾರವನ್ನು ಪಡೆಯಿತು. ಆರ್ಥಿಕ ಮತ್ತು ರಾಜಕೀಯ ವಿಕಸನದೊಂದಿಗೆ ಸಾಂಸ್ಕೃತಿಕ ಪುನರ್ ಪರಿಷ್ಕರಣೆಗಳೊಂದಿಗೆ ಅವರು ಮುಂದಕ್ಕೆ ಸಾಗಿದರು. ಅಧಿಕಾರಕ್ಕೇರಿದ 10 ವರ್ಷಗಳ ನಂತರ 2012ರಲ್ಲಿ ಪ್ರತಿನಿಧಿ ಸಭೆಯೊಂದರಲ್ಲಿ ಉರ್ದುಗಾನ್, ಮೂರು ರೀತಿಯ ದೀರ್ಘಕಾಲದ ರಾಜಕೀಯ ನೀತಿಯನ್ನು ಘೋಷಿಸಿದರು. ಒಂದು, ರಿಪಬ್ಲಿಕ್ ತುರ್ಕಿ ಅಧಿಕಾರ ವಹಿಸಿದ ಒಂದನೇ ಶತಮಾನದ ಅವಧಿ(2023)ಯ ವೇಳೆ ಜಗತ್ತಿನ ಹತ್ತು ಅಭಿವೃದ್ಧಿಶೀಲ ದೇಶಗಳ ಯಾದಿಯಲ್ಲಿ ತುರ್ಕಿ ಸ್ಥಾನವನ್ನು ಪಡೆದಿರಬೇಕು. ಎರಡನೇಯದಾಗಿ, ಕಾನ್‌ಸ್ಟಾಂಟಿನೋಪಲ್‌ನನ್ನು ಗೆದ್ದು ಇಸ್ತಾಂಬುಲ್ ಅನ್ನು ಸ್ಥಾಪಿಸಿದ 5ನೇ ಶತಮಾನದಲ್ಲಿ(2053) ತುರ್ಕಿ ಜಾಗತಿಕ ರಾಜಕೀಯ ಭೂಪಟದಲ್ಲಿ ಅದೇ ಸ್ಥಾನವನ್ನು ಪಡೆದುಕೊಳ್ಳಬೇಕು. ಅಂದಿನ ಕಾನ್‌ಸ್ಟಾಂಟಿನೋಪಲ್ ಇಂದಿನ ವಾಷಿಂಗ್ಟನ್ ಗೆ ಸಮಾನವಾಗಿತ್ತು. ಮೂರನೆಯದಾಗಿ, ಇಸ್ಲಾಮೀ ಜಗತ್ತಿನಲ್ಲಿ ಮತ್ತು ಪೂರ್ವದಲ್ಲಿ ನಮ್ಮ ಪೂರ್ವಿಕರು 1071ರಲ್ಲಿ ವಿಶಾಲವಾದ ರಾಜಕೀಯ ಭೂಪಟವನ್ನು ರಚಿಸಿದ್ದರು. ಅದರ 10ನೇ ಶತಮಾನ (2071) ಪೂರ್ಣಗೊಳ್ಳುವ ವೇಳೆ ಆ ಭೂ ಪ್ರದೇಶಗಳಲ್ಲಿರುವ ನಮ್ಮ ಸಹೋದರರನ್ನು ಭೇಟಿಯಾಗಬೇಕು.
ಸಲ್ಜೂಕಿ ರಾಜವಂಶದ ಪ್ರಬಲ ಆಡಳಿತಗಾರ ತುಗ್ರುಲ್ ಬೇಗ್ ಯಾನೆ ಮೂರನೇ ಆಲ್ಪ್‌ಅರ್ಸಲಾನ್ ಯಾನೆ ಮುಹಮ್ಮದ್ ದಾವೂದ್ ಷಾಗಿರಿ 1037ರಲ್ಲಿ ಇಂದಿನ ತುರ್ಕಿಯನ್ನು ಸ್ಥಾಪಿಸಿದ್ದರು. 1071, ಮಧ್ಯ ಏಷ್ಯಾದ ಬಾಲ್ಕನ್ ಪ್ರದೇಶಗಳು ಮತ್ತು ಕೆಲವು ಅರಬ್ ಪ್ರದೇಶಗಳನ್ನು ಒಳಗೊಂಡಿರುವ ವಿಶಾಲ ರಾಜ್ಯವನ್ನು ಸ್ಥಾಪಿಸಿದ ಗೆಲುವಿನ ನಿರ್ಣಾಯಕ ವರ್ಷವಾಗಿತ್ತು.
ಸಾಂಸ್ಕೃತಿಕ ಕ್ಷೇತ್ರಗಳನ್ನು ಪುನಶ್ಚೇತನಗೊಳಿಸುವ ಭಾಗವಾಗಿ 2014ರಲ್ಲಿ ಐತಿಹಾಸಿಕ ಧಾರಾವಾಹಿ ಸರಣಿಯು ಆರಂಭವಾಯಿತು. ಹಾಲಿವುಡ್ ಚಲನಚಿತ್ರ ಧಾರಾವಾಹಿಗಳು, ಅದಕ್ಕೆ ಸಮನಾದ ಸ್ಥಳೀಯ ಧಾರಾವಾಹಿಗಳು/ಚಲನಚಿತ್ರಗಳು ಸಮಾಜದಲ್ಲಿ ಹೊಸ ಪ್ರೇಕ್ಷಕರನ್ನು ಮತ್ತು ಪಾರಂಪರಿಕ ಪ್ರಜ್ಞೆಯನ್ನು ಸೃಷ್ಟಿಸಿವೆ. ಇವು ಇಸ್ಲಾಮೀ ಸಂಸ್ಕೃತಿ ಮತ್ತು ಉಸ್ಮಾನಿಯಾ ಪರಂಪರೆಗೆ ಸಮುದಾಯವನ್ನು ಮರಳಿ ಕೊಂಡೊಯ್ಯುವ ಪ್ರಜ್ಞಾಪೂರ್ವಕ ಪ್ರಯತ್ನಗಳಂತೆ ಕಂಡು ಬರುತ್ತದೆ.
ಮುಹಮ್ಮದ್ ಬುಸ್ದಾಗ್ ಬರೆದ ಎರಡು ಧಾರಾವಾಹಿಗಳು ಹೆಚ್ಚು ಜನಪ್ರಿಯವಾಗಿವೆ. 2014ರಿಂದ 2019ರ ವರೆಗೆ ಐದು ವರ್ಷಗಳಲ್ಲಿ 5 ಸೀಸನ್‌ಗಳಾಗಿ ‘ಡಿರಿಲೀಸ್ ಅರ್ತುರುಲ್’ 150 ಎಪಿಸೋಡ್‌ಗಳಲ್ಲಿ ಪ್ರದರ್ಶನ ಕಂಡಿದೆ. ಅದರ ಮುಂದುವರೆದ ಭಾಗವಾಗಿ ‘ಕುರ್ಲುಸ್ ಉಸ್ಮಾನ್’ ಪ್ರಾರಂಭಗೊಂಡಿದೆ.
ಅಬ್ದುಲ್ ಹಮೀದ್ ದ್ವಿತೀಯ ಕುರಿತಾದ ಪಾಯಿಥಾತ್ ಅಬ್ದುಲ್ ಹಮೀದ್ (2017), ಸುಲ್ತಾನ್ ಮುಹಮ್ಮದ್ ಫಾತಿಹ್ ರ ಕುರಿತಾದ ಫಾತಿಹ್ (2018) ಮೊದಲಾದ ಐತಿಹಾಸಿಕ ನಾಟಕ ಸರಣಿಗಳು ಅವುಗಳಲ್ಲಿ ಮುಖ್ಯವಾದುವುಗಳು. ಸಲ್ಜೂಕ್ ತುರ್ಕಿ ಆಡಳಿತಾಧಿಕಾರಿಗಳಲ್ಲಿ ಬಲಿಷ್ಠನಾದ ಎರಡನೇ ಸಲ್ಜೂಕ್ ಸುಲ್ತಾನ್ ಆಲ್ ಅರ್ಸಲಾನಿನ ಕುರಿತಾದ ‘ಮಲಾದ್ ಕಿರ್ದ್ 1017’ ಸೀರಿಯಲ್‌ಗಳು ಚಿತ್ರೀಕರಣದ ಹಂತದಲ್ಲಿವೆ.
ಡಿರಿಲೀಸ್ ಅರ್ತುರುಲ್
ತುರ್ಕಿ ಆಸ್ಥಾನವಾಗಿಟ್ಟಕೊಂಡು 1299ರಿಂದ 1923ರ ವರೆಗೆ ಆಡಳಿತದಲ್ಲಿದ್ದ ಉಸ್ಮಾನಿಯಾ ಸುಲ್ತ್ತಾನೇಟ್ ಗೆ ಬುನಾದಿ ಹಾಕಿದ ಎರ್ತುಗ್ರೂಲ್ ಬಿನ್ ಸುಲೈಮಾನ್ ಶಾನ (ಆಡುಭಾಷೆಯಲ್ಲಿ ಅರ್ತುರುಲ್ ಎಂದು ಕರೆಯುತ್ತಾರೆ) ಸಂಪೂರ್ಣ ಜೀವನಗಾಥೆಯಾಗಿ ಡಿರಿಲೀಸ್ ಅರ್ತುರುಲ್ ಧಾರಾವಾಹಿ ಮುಸ್ಲಿಮ್ ಜಗತ್ತಿನಲ್ಲಿ ಸೂಪರ್‌ಹಿಟ್ ಆಯಿತು. ಶೂನ್ಯದಿಂದ ಆರಂಭವಾದ ಅರ್ತುರುಲ್‌ನ ಪಯಣವು ತೀವ್ರ ಪ್ರತಿಕೂಲ ಸನ್ನಿವೇಶಗಳಿಂದ ಕೂಡಿತ್ತು. ಆತ ಸಮುದಾಯದ ಸಬಲೀಕರಣ ಮತ್ತು ಅಸ್ತಿತ್ವಕ್ಕಾಗಿ ದೃಢವಾಗಿ ನಿಂತ ನ್ಯಾಯವಂತ ನಾಯಕನಾಗಿದ್ದ ಎಂಬುದು ಗಮನಾರ್ಹ. ಈ ಧಾರಾವಾಹಿಗೆ ಜನರಿಂದ ದೊರೆತ ಸ್ವೀಕೃತಿ ಅರಬ್ ಜಗತ್ತಿನ ಕೆಲವು ಅಧಿಕಾರ ಕೇಂದ್ರಗಳಲ್ಲಿ ಭೀತಿಯನ್ನು ಸೃಷ್ಟಿಸಿದೆ. ಧಾರಾವಾಹಿಗಳ ಮೂಲಕ ಪ್ರಚಾರಪಡಿಸಲು ಹೊರಟ ಮೌಲ್ಯಗಳನ್ನು ಭಯ ಪಡುವ ಮಂದಿ, ‘ಅರ್ತುರುಲ್’ ಉಬ್ಬಿಸಿದ ಇತಿಹಾಸ ಮತ್ತು ಇಲ್ಲದ ಕಥಾ ಪಾತ್ರವೆಂದು ಪ್ರಚಾರಪಡಿಸುತ್ತಿದ್ದಾರೆ.
ಅಪಪ್ರಚಾರಗಳು ಹೆಚ್ಚಾದೊಡನೆ ಕೆಲವು ಇತಿಹಾಸಕಾರರು ಮತ್ತು ಸಂಶೋಧಕರು ಲೇಖನ ಮತ್ತು ವಿಡಿಯೋಗಳ ಮೂಲಕ ಅಧ್ಯಯನಗಳನ್ನು ಮಂಡಿಸ ತೊಡಗಿದರು. ತುರ್ಕಿ, ಪರ್ಷಿಯನ್, ಇಂಗ್ಲಿಷ್ ಮೊದಲಾದ 20ರಷ್ಟು ಮೂಲ ಭಾಷೆಗಳಲ್ಲಿ ಅರ್ತುರುಲ್ ನ ಜೀವನ ಚರಿತ್ರೆ ಲಭ್ಯವಿದೆ ಎಂದು ವಿವರಿಸುವ ಪ್ರೊಫೆಸರ್ ಮುಹಮ್ಮದ್ ಅಫ್ಫಾನಿಯನ್, ಇತಿಹಾಸದ ಮೂಲಗಳ ಒಂದು ಪಟ್ಟಿಯನ್ನೇ ಪ್ರಕಟಿಸಿದ್ದಾರೆ. ತುರ್ಕ್‌ಮಾನಿ ಬುಡಕಟ್ಟುಗಳು, ಸಲ್ಜೂಕಿಗಳು, ಬೈಝಾಂಟಿಯನ್, ಮಂಗೋಲಿಯನ್ ವಸಹಾತುಶಾಹಿಗಳು ಎಂಬಿತ್ಯಾದಿ ಇತಿಹಾಸಗಳಲ್ಲಿ ಅರ್ತುರುಲ್ ಜೀವನವನ್ನು ಆಖ್ಯಾನಿಸಲಾಗಿದೆ ಎಂದು ಹೇಳುವ ಪ್ರೊಫೆಸರ್ ಮುಹಮ್ಮದ್ ಅಫ್ಫಾನಿಯನ್, ಅರ್ತುರುಲ್ ವಿಚಾರದಲ್ಲಿ ‘ಕಿಯಾಮತ್ ಅರ್ತುಗ್ರೂಲ್: ಮಿನಲ್ ಖಬೀಲ ಇಲದ್ದೌಲ’ (resurrection ertugrul: from tribe to state) ಎಂಬ ಪುಸ್ತಕವನ್ನು ಹೊರತಂದಿದ್ದಾರೆ.
ಮಂಗೋಲಿಯನ್ ವಸಹಾತುಶಾಹಿಯ ಕಾಲದಲ್ಲಿ ಓಗುಸ್ ತುರ್ಕಿ ವಂಶಜರು ಮಧ್ಯ ಏಷ್ಯಾದ ತುರ್ಕಿಮೇನಿಸ್ತಾನ್ ಪ್ರದೇಶಗಳಿಂದ ಏಷ್ಯಾ ಮೈನರ್/ಅನಾತೂಲಿಯ ಪ್ರಾಂತ್ಯದೆಡೆಗೆ ಪಲಾಯನ ಮಾಡಿದರು. ಈ ಓಗುಸ್ ತುರ್ಕಿ ವಂಶಜನಾದ ಖಾಯಿ ಬುಡಕಟ್ಟು ನೇತಾರ ಸುಲೈಮಾನ್ ಶಾನ ಮಗನಾಗಿ ಅಖಿಲಾತ್ ಪ್ರದೇಶದಲ್ಲಿ 1190ರಲ್ಲಿ ಜನಿಸಿದ ಅರ್ತುರುಲ್, ತುರ್ಕಿಯ ಪಶ್ಚಿಮ ಗೋಸ್ತ್ ಪ್ರದೇಶದಲ್ಲಿ 1280ರಲ್ಲಿ ಮರಣ ಹೊಂದಿದರು.
90 ವರ್ಷಗಳ ಕಾಲ ಜೀವಿಸಿದ್ದ ಅರ್ತುರುಲ್ ಗಾಝಿ, ತಾರುಣ್ಯದಿಂದಲೇ ತುರ್ಕ್‌ಮೇನಿ ಮುಸ್ಲಿಮ್ ಬುಡಕಟ್ಟುಗಳನ್ನು ಒಗ್ಗೂಡಿಸಿ ಸ್ವತಂತ್ರ ರಾಷ್ಟ್ರವೊಂದರ ಕನಸುಗಳನ್ನು ಕಂಡಿದ್ದನು. ಅರ್ತುರುಲ್ ಗಾಝಿ, ಓಗುಸ್ ತುರ್ಕಿಗಳಲ್ಲಿ ಬಲಿಷ್ಠರಾದ ಸಲ್ಜೂಕಿ ಸುಲ್ತಾನ್ ಕುಟುಂಬದ ಹಲೀಮ ಸುಲ್ತಾನಳನ್ನು ವರಿಸುತ್ತಾನೆ. ಅರ್ತುರುಲ್ ಗೆ ಜನಿಸಿದ ಮೂರು ಮಕ್ಕಳಲ್ಲಿ ಕಿರಿಯವನಾದ ಉಸ್ಮಾನ್ ಗಾಝಿ (ಉಸ್ಮಾನ್ ಪ್ರಥಮ) ತಂದೆಯ ಕನಸನ್ನು ಸೋಗುತ್ ಕೇಂದ್ರವಾಗಿಟ್ಟುಕೊಂಡು 1299ರಲ್ಲಿ ನನಸಾಗಿಸಿದನು. ಅವರ ಹೆಸರಿನಿಂದ ಪ್ರಖ್ಯಾತಗೊಂಡ ಸಾಮ್ರಾಜ್ಯವು ವಿಸ್ತಾರಗೊಂಡು, 16ನೇ ಶತಮಾನದಿಂದ ಮುಂದೆ ಮುಸ್ಲಿಮ್ ಜಗತ್ತಿನ ಎಲ್ಲರನ್ನು ಪ್ರತಿನಿಧೀಕರಿಸುವ ಖಿಲಾಫತ್ ನಾಯಕತ್ವ ಮಟ್ಟಕ್ಕೆ ಏರಿ 1920ರ ವರೆಗೂ ವಿಸ್ತರಿಸಿ ನಿಂತಿತು.
ಅರ್ತುರುಲ್ ಜನಿಸಿದ 13ನೇ ಶತಮಾನದಲ್ಲಿ ಮುಸ್ಲಿಮ್ ಜಗತ್ತು ಅವನತಿಯ ಹಂತದಲ್ಲಿತ್ತು. ಮುಸ್ಲಿಮ್ ಜಗತ್ತಿನ ನಾಯಕತ್ವ ಹೊಂದಿದ್ದ ಬಾಗ್ದಾದಿನ ಅಬ್ಬಾಸಿಯ ಖಿಲಾಫತ್, ಆಂತರಿಕ ಕಲಹ ಮತ್ತು ಮಂಗೋಲಿಯನ್ನರ ಆಕ್ರಮಣದ ಭೀತಿಯಿಂದ ತತ್ತರಿಸಿತ್ತು. 11ನೇ ಶತಮಾನದಲ್ಲಿ ತುರ್ಕಿಮೇನಿ ಸಿಂಹ ನಾಮಾಂಕಿತನಾಗಿದ್ದ ಆಲ್ಪ್ ಅರ್ಸಲಾನ್‌ನ ಸುವರ್ಣ ಕಾಲಘಟ್ಟದ ನಂತರ ಸಲ್ಜೂಕಿ ರಾಜವಂಶವು ಸಣ್ಣ ಸಣ್ಣ ದೇಶಗಳಾಗಿ ಬೇರ್ಪಟ್ಟವು. ಅವುಗಳಲ್ಲಿ ಹೆಚ್ಚು ಕಡಿಮೆ ದೃಢವಾದ ಖೋನಿಯಾದ ರೋಮನ್ ಸಲ್ಜೂಕಿ ದೇಶವು ಇತರ ಮುಸ್ಲಿಮ್ ರಾಜವಂಶಗಳ ಮತ್ತು ಮಂಗೋಲಿಯನ್ನರ ಆಕ್ರಮಣದ ಭೀತಿಯಲ್ಲೇ ಕಾಲ ಕಳೆಯುತ್ತಿತ್ತು.
ಸಲಾಹುದ್ದೀನ್ ಅಯ್ಯೂಬಿಯ ಖುದ್ಸ್ ವಿಮೋಚನೆಯ ಒಂದು ಶತಮಾನ ಕಳೆದಾಗ ಆತನ ಪೌತ್ರರು ಪರಸ್ಪರ ಅಧಿಕಾರದ ಕಚ್ಚಾಟದಲ್ಲಿ ಶಿಲುಬೆ ಪಡೆಗಳ ಗೆಳೆತನ ಬೆಳೆಸಿ ಬೈತುಲ್ ಮುಖದ್ದಸ್ ನ ಬೀಗದ ಕೈಯನ್ನು ಅವರಿಗೆ ಸಮರ್ಪಿಸಿದರು. ಅದರೊಂದಿಗೆ ಶಾಮ್ ಪ್ರದೇಶಗಳ ಅಯ್ಯೂಬಿಗಳು ಮತ್ತು ಈಜಿಪ್ಟ್‌ನ ಮಮಾಲಿಕ್ ಗಳ ನಡುವಿನ ಅಧಿಕಾರದ ಹಗ್ಗಜಗ್ಗಾಟವು ತಾರಕಕ್ಕೇರಿತು. ಖುದ್ಸ್ ಗೆ ಕಣ್ಣುನೆಟ್ಟ ಬೈಝಾಂಟಿಕ್ ರಾಜ ಮತ್ತು ಸೈನ್ಯಗಳು ‘ಟೆಂಪ್ಲಾರ್’ ನಂತಹ ವಿವಿಧ ಶಿಲುಬೆ ಸೈನಿಕರು ಮುಸ್ಲಿಮ್ ಜಗತ್ತಿನ ಜಗಳದ ಫಾಯಿದೆ ಪಡೆದು ಅಬ್ಬಾಸಿ, ಸಲ್ಜೂಕಿ, ಮಮ್ಲೂಕಿ ರಾಜರುಗಳ ಆಸ್ಥಾನಗಳನ್ನು ತಮ್ಮ ಕೈವಶಪಡಿಸಿಕೊಂಡರು.