Home ಟಾಪ್ ಸುದ್ದಿಗಳು ಬೆಲೆಯೇರಿಕೆ ಬಗ್ಗೆ ಮಾತನಾಡಲು BJP ನಾಯಕರಿಗೆ ಈಗ ನಾಲಗೆ ಬಿದ್ದು ಹೋಗಿದೆ: ದಿನೇಶ್ ಗುಂಡೂರಾವ್ ಕಿಡಿ

ಬೆಲೆಯೇರಿಕೆ ಬಗ್ಗೆ ಮಾತನಾಡಲು BJP ನಾಯಕರಿಗೆ ಈಗ ನಾಲಗೆ ಬಿದ್ದು ಹೋಗಿದೆ: ದಿನೇಶ್ ಗುಂಡೂರಾವ್ ಕಿಡಿ

ಬೆಂಗಳೂರು: ಬಿಜೆಪಿ ರಾಜ್ಯ ಉಸ್ತುವಾರಿ ಅರುಣ್ ಸಿಂಗ್ ಬೆಲೆಯೇರಿಕೆ ಬಗ್ಗೆ ಪ್ರತಿಕ್ರಿಯಿಸಲು ನಾನೇನು RBI ಗೌರ್ನರ್ ಅಲ್ಲ ಎಂದಿದ್ದಾರೆ. ಇದು ಅರುಣ್ ಸಿಂಗ್ ಅವರ ಅಜ್ಞಾನ ಮತ್ತು ಭಂಡತನದ ಪರಮಾವಧಿ. ಬೆಲೆಯೇರಿಕೆ ಬಗ್ಗೆ RBI ಗೌರ್ನರ್ ಸಮಜಾಯಿಷಿ ಕೊಡುವುದಾದರೆ, ಬೆಲೆ ನಿಯಂತ್ರಣದಲ್ಲಿ ಕೇಂದ್ರ ಸರ್ಕಾರದ ಪಾತ್ರವೇನು? ಎಂದು ಕಾಂಗ್ರೆಸ್ ಶಾಸಕ ದಿನೇಶ್ ಗುಂಡೂರಾವ್ ಕಿಡಿಕಾರಿದ್ದಾರೆ.


ಈ ಬಗ್ಗೆ ಸರಣಿ ಟ್ವೀಟ್ ಮಾಡಿರುವ ಅವರು, ಬೆಲೆಯೇರಿಕೆ ಬಗ್ಗೆ ಮಾತನಾಡಲು BJP ನಾಯಕರಿಗೆ ಈಗ ನಾಲಗೆ ಬಿದ್ದು ಹೋಗಿದೆ. ಹಾಗಾಗಿ ಜನರ ಗಮನ ಬೇರೆಡೆ ಸೆಳೆಯಲು ಧರ್ಮ, ದೇವರು,ಹೆಸರು ಬದಲಾವಣೆ ಎಂಬ ಅಸ್ತ್ರ ಪ್ರಯೋಗ ಮಾಡುತ್ತಿರುತ್ತಾರೆ. ಬಿಜೆಪಿಯ ಕೆಲ ಜೋಕರ್ ಗಳು ಈ ಅಸ್ತ್ರ ಪ್ರಯೋಗಿಸುತ್ತಾ ಜನ ಎದುರಿಸುತ್ತಿರುವ ನೈಜ ಸಮಸ್ಯೆ ಮರೆ ಮಾಚಿ ದೇಶಕ್ಕೆ ದ್ರೋಹ ಎಸಗುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.


ಸಂಪನ್ಮೂಲ ಕ್ರೋಢೀಕರಣಕ್ಕೆ ಬೆಲೆಯೇರಿಕೆ ಅನಿವಾರ್ಯ ಎಂಬ ಬಿಜೆಪಿ ನಾಯಕರ ವಾದ ಶುದ್ಧ ಅವಿವೇಕತನದು. ಕೇವಲ ತೈಲದ ತೆರಿಗೆಯ ಮೂಲಕವೇ ಕೇಂದ್ರ ಇಲ್ಲಿಯವರೆಗೂ 23ಲಕ್ಷ ಕೋಟಿ ಸಂಗ್ರಹಿಸಿದೆ. ಆ ಹಣ ಯಾವ ಅಭಿವೃದ್ಧಿಗೆ ಬಳಕೆಯಾಗಿದೆಯೇ? ತಾನೇ ಜಾರಿಗೆ ತಂದ 10 ಯೋಜನೆಗಳಿಗೆ ಕೇಂದ್ರಕ್ಕೆ ಅನುದಾನ ಕೊಡುವ ಯೋಗ್ಯತೆಯಿಲ್ಲ. ಅಭಿವೃದ್ಧಿ ಎಲ್ಲಿದೆ? ಎಂದು ದಿನೇಶ್ ಪ್ರಶ್ನಿಸಿದ್ದಾರೆ.

Join Whatsapp
Exit mobile version