Home ಟಾಪ್ ಸುದ್ದಿಗಳು ಹುಟ್ಟುಹಬ್ಬದ ಕೇಕ್ ಅನ್ನು ಐಫೋನ್ ನಲ್ಲಿ ಕತ್ತರಿಸಿದ ಬಿಜೆಪಿ ಶಾಸಕನ ಪುತ್ರ: ದುರಹಂಕಾರದ ಪರಮಾವಧಿ ಎಂದ...

ಹುಟ್ಟುಹಬ್ಬದ ಕೇಕ್ ಅನ್ನು ಐಫೋನ್ ನಲ್ಲಿ ಕತ್ತರಿಸಿದ ಬಿಜೆಪಿ ಶಾಸಕನ ಪುತ್ರ: ದುರಹಂಕಾರದ ಪರಮಾವಧಿ ಎಂದ ನೆಟ್ಟಿಗರು

ಕೊಪ್ಪಳ: ಕನಕಗಿರಿ ಬಿಜೆಪಿ ಶಾಸಕರ ಪುತ್ರ ಹುಟ್ಟುಹಬ್ಬದ ಕೇಕ್ ಅನ್ನು ತನ್ನ ಐಫೋನ್ ಮೊಬೈಲ್ ನಲ್ಲಿ ಕತ್ತರಿಸುತ್ತಿರುವ ದೃಶ್ಯ ವೈರಲ್ ಆಗಿದ್ದು, ಈ ನಡೆಗೆ ನೆಟ್ಟಿಗರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

https://twitter.com/ImranTheJourno/status/1433637349678747668

ಬಿಜೆಪಿ ಶಾಸಕ ಬಸವರಾಜ್ ದಡೇಸೂಗೂರ್ ಅವರ ಪುತ್ರ ಸುರೇಶ್ ದಡೇಸುಗೂರ್ ಅವರ ಹುಟ್ಟುಹಬ್ಬ ಕಾರ್ಯಕ್ರಮದಲ್ಲಿ ಕೇಕನ್ನು ಹೊಸ ಐಫೋನ್ ಮೊಬೈಲ್ ನಲ್ಲಿ ಕತ್ತರಿಸುತ್ತಿರುವ ದೃಶ್ಯ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ. ಸಾರ್ವ ಜನಿಕರು ಶಾಸಕರ ಪುತ್ರನ ಈ ರೀತಿಯ ಮೋಜಿನಾಟಕ್ಕೆ ಆಕ್ರೋಶ ವ್ಯಕ್ತಪಡಿಸಿ ಇದು ದುರಹಂಕಾರದ ಪರಮಾವಧಿ ಎಂದು ಕಿಡಿಕಾರಿದ್ದಾರೆ. ಮಾತ್ರವಲ್ಲ ಆತನ ನಡೆಯನ್ನು ಅಸಹ್ಯದ ಪರಮಾವಧಿ ಎಂದು ಬಣ್ಣಿಸಿದ್ದಾರೆ.

ಘಟನೆಯ ಕುರಿತು ಪ್ರತಿಕ್ರಿಯಿಸಿರುವ ಶಾಸಕ ಬಸವರಾಜ್ ಆತನ ದುಡ್ಡಿನಲ್ಲಿ ತನ್ನ ಹುಟ್ಟುಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಿರುವುದರಲ್ಲಿ ತಪ್ಪೇನಿದೆ ಎಂದು ಪ್ರತಿಕ್ರಿಯಿಸಿ ಪುತ್ರನ ನಡೆಯನ್ನು ಸಮರ್ಥಿಸಿರುವುದು ಜನರ ಆಕ್ರೋಶವನ್ನು ಮತ್ತಷ್ಟು ಹೆಚ್ಚಿಸಿದೆ.

Join Whatsapp
Exit mobile version