Home ಟಾಪ್ ಸುದ್ದಿಗಳು ‘ದಿಲ್ಲಿ ಚಲೋ’ ಹೋರಾಟ: ಮೃತ ರೈತರ ಸಂಖ್ಯೆ 4ಕ್ಕೆ ಏರಿಕೆ

‘ದಿಲ್ಲಿ ಚಲೋ’ ಹೋರಾಟ: ಮೃತ ರೈತರ ಸಂಖ್ಯೆ 4ಕ್ಕೆ ಏರಿಕೆ

ಚಂಡೀಗಢ: ತಮ್ಮ ದಿಲ್ಲಿ ಚಲೋ ಮೆರವಣಿಗೆಯನ್ನು ಸ್ಥಗಿತಗೊಳಿಸಿದ ಎರಡು ದಿನಗಳ ನಂತರ, ಸಂಯುಕ್ತ ಕಿಸಾನ್ ಮೋರ್ಚಾ (ರಾಜಕೀಯೇತರ) ಮತ್ತು ಕಿಸಾನ್ ಮಜ್ದೂರ್ ಮೋರ್ಚಾ (KMM) ಶುಕ್ರವಾರ ತಮ್ಮ ಹೋರಾಟದ ಮುಂದಿನ ನಿರ್ಧಾರವನ್ನು ಫೆಬ್ರವರಿ 29 ರಂದು ಪ್ರಕಟಿಸಲಾಗುವುದು ಎಂದು ಹೇಳಿದ್ದಾರೆ.


ಶನಿವಾರ ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಅಂತಾರಾಜ್ಯ ಗಡಿಗಳಲ್ಲಿ ಮೋಂಬತ್ತಿ ಬೆಳಕು ಮೆರವಣಿಗೆ ನಡೆಸಲಿದ್ದಾರೆ.


ಪಂಜಾಬ್-ಹರಿಯಾಣ ಗಡಿಯಲ್ಲಿರುವ ಖಾನೌರಿಯಲ್ಲಿ ‘ದೆಹಲಿ ಚಲೋ’ ಆಂದೋಲನದ ಭಾಗವಾಗಿದ್ದ 62 ವರ್ಷದ ಮತ್ತೊಬ್ಬ ರೈತರು ನಿನ್ನೆ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಇದೇ ಆಂದೋಲನದ ಭಾಗವಾಗಿದ್ದ 72 ವರ್ಷದ ರೈತ ಈ ಹಿಂದೆ ಹೃದಯ ಸ್ತಂಭನದಿಂದ ಮೃತಪಟ್ಟಿದ್ದರು. ಶಂಭು ಗಡಿಯಲ್ಲಿ 63 ವರ್ಷದ ಮತ್ತೊಬ್ಬ ರೈತ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಮೊನ್ನೆ ಬುಧವಾರ, ಹರಿಯಾಣ ಪೊಲೀಸರು ಮತ್ತು ಪಂಜಾಬ್ ರೈತರ ನಡುವಿನ ಘರ್ಷಣೆಯಲ್ಲಿ ಬಟಿಂಡಾ ಮೂಲದ 21 ವರ್ಷದ ಶುಭಕರನ್ ಸಾವಿಗೀಡಾಗಿದ್ದರು. ಈ ಮೂಲಕ ಮೃತರ ಸಂಖ್ಯೆ 4ಕ್ಕೆ ಏರಿಕೆಯಾಗಿದೆ.

Join Whatsapp
Exit mobile version