Home ಟಾಪ್ ಸುದ್ದಿಗಳು ಬೆಳಗಾವಿ: ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು

ಬೆಳಗಾವಿ: ನಾಲ್ಕನೇ ಮಹಡಿಯಿಂದ ಬಿದ್ದು ಯುವತಿ ಸಾವು

ಬೆಳಗಾವಿ: ಯುವತಿಯೊಬ್ಬರು ರಾತ್ರಿ ಅಪಾರ್ಟ್ಮೆಂಟ್ ನ ನಾಲ್ಕನೇ ಮಹಡಿಯಿಂದ ಬಿದ್ದು ಸಾವನ್ನಪ್ಪಿರುವ ಘಟನೆ ಇಲ್ಲಿನ ಸದಾಶಿವ ನಗರದಲ್ಲಿ ನಡೆದಿದೆ.

ಸದಾಶಿವ ನಗರದ ನಿವಾಸಿ ಓಶಾನಾ ರೊನಾಲ್ದೊ ಪಚೆಕೊ (21) ಮೃತ ಯುವತಿ.

ಓಶಾನೋ ತಮ್ಮ ಸಾಕು ನಾಯಿಯನ್ನು ತೆಗೆದುಕೊಂಡು ಟೆರೆಸ್ ಮೇಲೆ ಹೋಗಿದ್ದಾಗ ಕೆಳಗೆ ಬಿದ್ದು ಗಂಭೀರವಾಗಿ ಗಾಯಗೊಂಡಿದ್ದರು. ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ, ಚಿಕಿತ್ಸೆಗೆ ಸ್ಪಂದಿಸದೇ ಕೊನೆಯುಸಿರೆಳೆದರು ಎಂದು ಪೊಲೀಸರು ತಿಳಿಸಿದ್ದಾರೆ. ಓಶಾನಾ ಪಾಲಕರು ಎಪಿಎಂಸಿ ಠಾಣೆ ಪೊಲೀಸರಿಗೆ ದೂರು ನೀಡಿದ್ದಾರೆ.

Join Whatsapp
Exit mobile version