ಶಿವಮೊಗ್ಗ: ನಾನು ಹಲಾಲ್ ಕಟ್ ಮಾಂಸ ತಿಂದಿಲ್ಲ, ಮುಂದೆಯೂ ತಿನ್ನುವುದಿಲ್ಲ ಎಂದು ಮಾಜಿ ಸಚಿವ ಕೆ.ಎಸ್. ಈಶ್ವರಪ್ಪ ತಿಳಿಸಿದ್ದಾರೆ.
ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹಲಾಲ್ ಕಟ್, ಜಟಕಾ ಕಟ್ ಎಂಬ ಚರ್ಚೆ ನಡೆಯುತ್ತಿದೆ. ಆದರೆ ನನಗೆ ಹಲಾಲ್ ಕಟ್ಟೋ, ಹಲ್ಕ ಕಟ್ಟೋ ಗೊತ್ತಿಲ್ಲ ಎಂದರು. ನಾವು ಏಕೆ ನಮ್ಮ ದೇವರಿಗೆ ಹಲಾಲ್ ಕಟ್ ಮಾಂಸ ಎಡೆ ಇಡಬೇಕು ಎಂದು ಕೇಳಿದರು.
ಈ ಹಿಂದಿನ ಸಿದ್ದರಾಮಯ್ಯ ಅವರ ಸರ್ಕಾರದ ಚುನಾವಣೆಯ ಪ್ರಣಾಳಿಕೆಯಲ್ಲಿ ಉಲ್ಲೇಖಿತವಾದ 150 ಪ್ರಮುಖ ಅಂಶಗಳಲ್ಲಿ ಶೇ.90ರಷ್ಟು ಕೆಲಸ ಮುಗಿಸಿದ್ದೇವೆ ಎಂದು ಹೇಳುತ್ತಾರೆ. ಆದರೆ ಶೇ.90 ರಷ್ಟು ಮುಗಿದಿರುವ ಕೆಲಸ ಯಾವುದು ಎಂದು ಕೇಳಿದರೆ ಯಾವುದಕ್ಕೂ ಅವರು ಉತ್ತರ ಕೊಡಲಿಲ್ಲ ಎಂದು ಕಾಂಗ್ರೆಸನ್ನು ಟೀಕಿಸಿದರು.