Home ಟಾಪ್ ಸುದ್ದಿಗಳು ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ: ಜಸ್ಟಿನ್ ಟ್ರುಡೊ

ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ: ಜಸ್ಟಿನ್ ಟ್ರುಡೊ

ನವದೆಹಲಿ: ಖಲಿಸ್ತಾನಿ ಪ್ರತ್ಯೇಕತಾವಾದಿಗಳು ಕೆನಡಾದಲ್ಲಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ ಎಂದು ಕೆನಡಾದ ಪ್ರಧಾನಿ ಜಸ್ಟಿನ್ ಟ್ರುಡೊ ಮೊದಲ ಬಾರಿಗೆ ಪ್ರತಿಕ್ರಿಯೆ ನೀಡಿದ್ದಾರೆ.

ದೀಪಾವಳಿ ಮತ್ತು ಬಂಡಿ ಛೋರ್ ದಿವಸ್ ಆಚರಿಸಲು ಒಟ್ಟಾವಾದ ಪಾರ್ಲಿಮೆಂಟ್ ಹಿಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಟ್ರುಡೊ ಈ ಹೇಳಿಕೆಯನ್ನು ನೀಡಿದ್ದಾರೆ. ಆ ದೀಪಾವಳಿ ಕಾರ್ಯಕ್ರಮವನ್ನು ಕ್ಯಾಬಿನೆಟ್ ಸಚಿವರಾದ ಅನಿತಾ ಆನಂದ್ ಮತ್ತು ಗ್ಯಾರಿ ಆನಂದಸಂಗರಿ ಆಯೋಜಿಸಿದ್ದರು.

“ಕೆನಡಾದಲ್ಲಿ ಖಲಿಸ್ತಾನ್‌ಗೆ ಅನೇಕ ಬೆಂಬಲಿಗರಿದ್ದಾರೆ. ಆದರೆ, ಅವರು ಒಟ್ಟಾರೆಯಾಗಿ ಸಿಖ್ ಸಮುದಾಯವನ್ನು ಪ್ರತಿನಿಧಿಸುವುದಿಲ್ಲ” ಎಂದು ಟ್ರುಡೊ ಹೇಳಿದ್ದಾರೆ. ಬ್ರಾಂಪ್ಟನ್‌ನಲ್ಲಿರುವ ಹಿಂದೂ ಸಭಾ ಮಂದಿರವು ಖಲಿಸ್ತಾನ್-ಪರ ಅಂಶಗಳ ಹಿಂಸಾತ್ಮಕ ದಾಳಿಗೆ ಸಾಕ್ಷಿಯಾದ ಒಂದು ದಿನದ ನಂತರ ಅವರ ಹೇಳಿಕೆ ಬಂದಿದೆ.

ಹಿಂಸಾಚಾರ, ಅಸಹಿಷ್ಣುತೆ, ಬೆದರಿಕೆ ಅಥವಾ ವಿಭಜನೆಗೆ ಅವಕಾಶವಿಲ್ಲ. ಜನರು ತಮ್ಮ ಸಂಸ್ಕೃತಿಗಳು ಮತ್ತು ಅವರ ಸಮುದಾಯಗಳನ್ನು ಹಿಡಿದಿಟ್ಟುಕೊಳ್ಳಲು ನಾವು ಪ್ರೋತ್ಸಾಹಿಸುತ್ತೇವೆ ಎಂದು ಟ್ರುಡೊ ಹೇಳಿದ್ದಾರೆ.

Join Whatsapp
Exit mobile version