Home ಜಾಲತಾಣದಿಂದ ಧರ್ಮ ದಂಗಲ್ ನಿಂದ ಮಂಕಾದ ಬುದ್ಧಿವಂತರ ಜಿಲ್ಲೆ | ಉಡುಪಿ ಫಲಿತಾಂಶವೂ ಉಡೀಸ್

ಧರ್ಮ ದಂಗಲ್ ನಿಂದ ಮಂಕಾದ ಬುದ್ಧಿವಂತರ ಜಿಲ್ಲೆ | ಉಡುಪಿ ಫಲಿತಾಂಶವೂ ಉಡೀಸ್

►ಹಿಜಾಬ್, ತ್ರಿಶೂಲ, ಕೇಸರಿ ವಿವಾದವೇ ಕಾರಣವೆಂದ ನೆಟ್ಟಿಗರು

ಮಂಗಳೂರು: ರಾಜಕೀಯ ಭದ್ರತೆಗಾಗಿ ಸಮಾಜದಲ್ಲಿ ಕಲಹ ಎಬ್ಬಿಸಲು ಸತತವಾಗಿ ಶಾಲಾ ವಿದ್ಯಾರ್ಥಿಗಳನ್ನು ಉಪಯೋಗಿಸಿದ ಪರಿಣಾಮ   ಈ ಬಾರಿಯ ಎಸ್ಎಸ್ಎಲ್ಸಿ ಫಲಿತಾಂಶದಲ್ಲಿ ದಕ್ಷಿಣ ಕನ್ನಡ 20 ನೇ ಸ್ಥಾನಕ್ಕೆ ಇಳಿದಿದ್ದು ನೆರೆಯ ಉಡುಪಿ ಜಿಲ್ಲೆಯ ಫಲಿತಾಂಶವೂ ಪಾತಾಳಕ್ಕಿಳಿದಿದೆ. ಈ ಫಲಿತಾಂಶಕ್ಕೆ ಹಿಜಾಬ್ ,ಕೇಸರಿ ಮತ್ತು ತ್ರಿಶೂಲ ವಿವಾದಗಳೇ ಕಾರಣ ಎಂದು ನೆಟ್ಟಿಗರು ಆಡಿಕೊಳ್ಳುತ್ತಿದ್ದಾರೆ

ಜಿಲ್ಲೆಯಲ್ಲಿ ನಿರಂತರವಾಗಿ ಉಂಟಾಗುತ್ತಿರುವ ಕೋಮು ಗಲಭೆ ಪ್ರಕ್ರಿಯೆಗಳಿಗೆ ಈ ಬಾರಿ ಶಾಲೆಯ ಆವರಣವನ್ನೂ ಉಪಯೋಗಿಸಿಕೊಳ್ಳಲಾಗಿತ್ತು. ವಿದ್ಯಾರ್ಥಿನಿಯರ ಶಿರವಸ್ತ್ರದ ವಿರೋಧಕ್ಕಾಗಿ ಸಹಪಾಠಿಗಳನ್ನೇ ತಿರುಗಿ ಬೀಳುವಂತೆ ಮಾಡಿ ಕೇಸರಿ ತ್ರಿಶೂಲ ಎಂದೆಲ್ಲಾ ಬೀದಿಗಿಳಿಯುವಂತೆ ಮಾಡಿತ್ತು. ವಿರೋಧ ,ಪ್ರತಿಭಟನೆ ಇದರಲ್ಲೇ ಮಗ್ನರಾದ ಜಿಲ್ಲೆಯ ಮಕ್ಕಳು ಕಲಿಕೆಯಲ್ಲಿ ಹಿಂದುಳಿದಿದ್ದು ಬುದ್ಧಿವಂತರ ಜಿಲ್ಲೆಯೇ ಮಂಕಾಗಿದೆ ಎಂದು ಸಾರ್ವಜನಿಕರು ಹೇಳಿಕೊಳ್ಳುತ್ತಿದ್ದಾರೆ.

13 ಮತ್ತು 20ನೇ ಸ್ಥಾನಕ್ಕೆ ಕುಸಿದು ಹೋದ ಈ ಬುದ್ಧಿವಂತರ ಜಿಲ್ಲೆಗಳು ಈ ವರೆಗೆ ಕಾಯ್ದುಕೊಂಡು ಬಂದ ಪ್ರಥಮ ಸ್ಥಾನವನ್ನು ಹಾಸನಕ್ಕೆ ಬಿಟ್ಟುಕೊಟ್ಟಿದ್ದು ಶಾಲೆಯಲ್ಲಿ ಕೋಮು ಪ್ರಹರಗಳನ್ನು ಪಸರಿಸಿ ರಾಜಕೀಯ ಭದ್ರ ಮಾಡುವ ಕೇಸರಿ ಪಡೆಯ ವಿರುದ್ಧ ಇದೀಗ ಇಡೀ ಜಿಲ್ಲೆಯೇ ಸೆಟೆದು ನಿಂತಿದೆ. ಕರಾವಳಿಗರು “ನಮ್ಮ ವಿದ್ಯಾರ್ಥಿಗಳನ್ನು ಅವರ ಪಾಡಿಗೆ ಬಿಟ್ಟುಬಿಡಿ” ಎಂದು ಸಾಮಾಜಿಕ ವಲಯಗಳಾದ್ಯಂತ ಕೋರಿಕೊಳ್ಳುತ್ತಿದ್ದಾರೆ

Join Whatsapp
Exit mobile version