Home ಟಾಪ್ ಸುದ್ದಿಗಳು ಮುಜುಗರ ತರುವ ಸಮಾರಂಭದಲ್ಲಿ ಪಾಲ್ಗೊಳ್ಳಬೇಡಿ: ಸಿಬ್ಬಂದಿಗೆ ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಮುಜುಗರ ತರುವ ಸಮಾರಂಭದಲ್ಲಿ ಪಾಲ್ಗೊಳ್ಳಬೇಡಿ: ಸಿಬ್ಬಂದಿಗೆ ಡಿಜಿಪಿ ಪ್ರವೀಣ್ ಸೂದ್ ಎಚ್ಚರಿಕೆ

ಕೊಪ್ಪಳ,ಆ.4: ಇಲಾಖೆಗೆ ಮುಜಗರ ತರುವ ಸಮಾರಂಭದಲ್ಲಿ ಪಾಲ್ಗೊಳ್ಳದಂತೆ ಅಧಿಕಾರಿಗಳು ಹಾಗೂ ಸಿಬ್ಬಂದಿಗೆ ಎಚ್ಚರಿಕೆ ನೀಡುವ ಮಾರ್ಗ ಸೂಚಿಗಳನ್ನು ರಾಜ್ಯ ಪೊಲೀಸ್ ಮಹಾನಿರ್ದೇಶಕ (ಡಿಜಿಪಿ) ಪ್ರವೀಣ ಸೂದ್ ಹೊರಡಿಸಿದ್ದಾರೆ. ಪೊಲೀಸರು ಶಿಸ್ತಿನ ಸಿಪಾಯಿಗಳಾಗಿದ್ದು ಕಾನೂನು ಸುವ್ಯವಸ್ಥೆ ಕಾಪಾಡಿ ಅಪರಾಧಗಳನ್ನು ತಡೆದು ಸಮಾಜದ ರಕ್ಷಕರಾಗಿ ಕೆಲಸ ಮಾಡಬೇಕು. ಆದರೆ ಕೆಲವು ಸಿಬ್ಬಂದಿಯು ಇತ್ತೀಚಿಗೆ ಇಲಾಖೆ ಮುಜಗರಕ್ಕೊಳಗಾಗುವಂತೆ ನಡೆದುಕೊಳ್ಳುತ್ತಿರುವ ಹಿನ್ನೆಲೆಯಲ್ಲಿ ಮಾರ್ಗ ಸೂಚಿಯನ್ನು ಬಿಡುಗಡೆ ಮಾಡಲಾಗಿದೆ.


ಪೊಲೀಸ್ ಅಧಿಕಾರಿಗಳಿಗೆ ವರ್ಗಾವಣೆ, ಮುಂಬಡ್ತಿ, ಸ್ವಾಗತ, ನಿವೃತ್ತಿ ಸಹಜ ಕ್ರಿಯೆಗಳು, ಇಂಥ ಸಂದರ್ಭದಲ್ಲಿ ಪೊಲೀಸರು ತಮ್ಮ ಠಾಣೆಗಳಲ್ಲಿ ಅಥವಾ ಸಾರ್ವಜನಿಕವಾಗಿ ಅಪರಾಧ ಹಿನ್ನೆಲೆಯುಳ್ಳವರು, ವಿಚಾರಣೆಯ ಹಂತದಲ್ಲಿರುವವರೊಂದಿಗೆ ಸಂಭ್ರಮ ಆಚರಿಸಿಕೊಳ್ಳವುದರಿಂದ ಇಲಾಖೆ ಮುಜಗರಕ್ಕೊಳಗಾಗುತ್ತಿದೆ.ಇದನ್ನು ತಪ್ಪಿಸುವ ಮಾರ್ಗಸೂಚಿ ಹೊರಡಿಸಲಾಗಿದೆ.
ಯಾವುದೇ ಅಧಿಕಾರಿಯು ಪೊಲೀಸ್ ಠಾಣೆಯಲ್ಲಿ ಅಪರಾಧ ಹಿನ್ನೆಲೆಯುಳ್ಳವರು, ರೌಡಿಶೀಟರ್ ಗಳೊಂದಿಗೆ ಯಾವುದೇ ರೀತಿ ಸಂಪರ್ಕ ಹೊಂದಿರಬಾರದು, ವರ್ಗಾವಣೆ ಮುಂಬಡ್ತಿ ಹೊಂದಿದವರು ಠಾಣೆಯಲ್ಲಿ ಸಂಭ್ರಮಾಚರಣೆ ಬೇಡ, ಪೊಲೀಸ್ ಕಚೇರಿಗಳು ಸಾರ್ವಜನಿಕ ಸ್ಥಳಗಳಾಗಿವೆ, ಇಲ್ಲಿ ಆಚರಣೆ ಬೇಡ, ಇಲಾಖೆಯ ಪೂರ್ವಾನುಮತಿ ಪಡೆಯದೇ ಯಾವುದೇ ಸಭೆ, ಸಮಾರಂಭ, ಸಮಾರಂಭಕ್ಕೆ ಹಣ ಎತ್ತಬಾರದು, ಅಪರಾಧ ಹಿನ್ನಲೆಯುಳ್ಳವರು, ವಿಚಾರಣೆ ನಡೆಯುವ ಹಂತದಲ್ಲಿರುವವರ ಸಭೆ, ಸಮಾರಂಭಗಳಲ್ಲಿ ಭಾಗಿಯಾಗಬಾರದು ಎಂದಿದ್ದಾರೆ.


ಇತ್ತೀಚಿಗೆ ಕೊಪ್ಪಳದಲ್ಲಿ ನಡೆದಿರುವ ಪೊಲೀಸರಿಗೆ ಮುಜಗರವಾಗುವಂಥ ಘಟನೆ ಕಾರಣವಾಗಿರಬಹುದು ಎನ್ನಲಾಗಿದೆ. 2015 ರಲ್ಲಿ ಕನಕಾಪುರದ ವಿದ್ಯಾರ್ಥಿ ಯಲ್ಲಾಲಿಂಗ ಎಂಬುವವರನ್ನು ಹುಲಿಹೈದರ ಹನುಮೇಶ ನಾಯಕ ಪುತ್ರ ಮಹಾಂತೇಶ ನಾಯಕ ಹಾಗು ಇತರ 8 ಜನ ಸೇರಿ ಕೊಲೆ ಮಾಡಿದ್ದಾರೆ ಎಂಬ ಆರೋಪ ಕೇಳಿ ಬಂದು ಈ ಪ್ರಕರಣದ ವಿಚಾರಣೆ ನ್ಯಾಯಲಯದಲ್ಲಿ ಈಗಲೂ ನಡೆಯುತ್ತಿದೆ, ಈ ಪ್ರಕರಣ ಆರೋಪಿಯಾಗಿರುವ ಮಹಾಂತೇಶ ಮದುವೆಯು ಕಳೆದ ಜು 18 ರಂದು ಹುಲಿಹೈದರಲ್ಲಿ ನಡೆಯಿತು.


ಆರೋಪಿಯ ಮದುವೆ ಸಮಾರಂಭದಲ್ಲಿ ಗಂಗಾವತಿ ಡಿವೈಎಸ್ಪಿ ರುದ್ರೇಶ ಉಜನಿಕೊಪ್ಪ, ಗಂಗಾವತಿ ಗ್ರಾಮೀಣ ಸಿ ಪಿಐ ಉದಯರವಿ ಹಾಗು ಕನಕಗಿರಿ ಪಿಎಸ್ಐ ತಾರಬಾಯಿ ಯಲ್ಲಾಲಿಂಗ ಕೊಲೆ ಆರೋಪಿ ಮಹಾಂತೇಶ ಮದುವೆಯಲ್ಲಿ ಪೊಲೀಸ್ ಸಮವಸ್ತ್ರದೊಂದಿಗೆ ಭಾಗಿಯಾಗಿ ಫೋಟೊಕ್ಕೆ ಫೋಸು ನೀಡಿದ್ದರು, ಇದು ಮುಜಗರಕ್ಕೊಗಾಗಿತ್ತು, ಈ ಸಂದರ್ಭದಲ್ಲಿ ಕೊಪ್ಪಳ ಪೊಲೀಸ್ ವರಿಷ್ಠಾಧಿಕಾರಿಗಳು ಈ ಮೂವರಿಗೆ ಕಡ್ಡಾಯ ರಜೆ ನೀಡಿದ್ದರು, ಈ ಪ್ರಕರಣದ ಬೆನ್ನಲ್ಲೆಯೇ ಮಹಾನಿರ್ದೇಶಕರು ಈ ಆದೇಶ ಹೊರಡಿಸಿದ್ದಾರೆ.

Join Whatsapp
Exit mobile version