Home ಟಾಪ್ ಸುದ್ದಿಗಳು 30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಮೋದಿ ಸರ್ಕಾರಕ್ಕೆ ಪರಿವೆಯೇ ಇಲ್ಲ: ಖರ್ಗೆ

30 ಲಕ್ಷ ಹುದ್ದೆಗಳು ಖಾಲಿ ಇದ್ದರೂ ಮೋದಿ ಸರ್ಕಾರಕ್ಕೆ ಪರಿವೆಯೇ ಇಲ್ಲ: ಖರ್ಗೆ

ನವದೆಹಲಿ: ಕೇಂದ್ರ ಸರ್ಕಾರದಲ್ಲಿ 30 ಲಕ್ಷ ಹುದ್ದೆಗಳು ಖಾಲಿ ಇವೆ. ಸರ್ಕಾರಕ್ಕೆ ಇದರ ಪರಿವೆಯೇ ಇಲ್ಲ. ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರವು ನಿರುದ್ಯೋಗವನ್ನು ಕಡೆಗಣಿಸಿದೆ. ಎಂದು ರಾಜ್ಯಸಭಾ ವಿರೋಧ ಪಕ್ಷದ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಹೇಳಿದ್ದಾರೆ

ರಾಷ್ಟ್ರಪತಿಗಳ ಭಾಷಣಕ್ಕೆ ವಂದನಾ ನಿರ್ಣಯ ಸಲ್ಲಿಸಿ ಮಾತನಾಡಿದ ಅವರು, ಆರ್ಥಿಕವಾಗಿ ದುರ್ಬಲರು, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಮತ್ತು ಹಿಂದುಳಿದ ವರ್ಗಗಳ ಅಭ್ಯರ್ಥಿಗಳಿಗೆ ಪ್ರಮುಖ ಆಧಾರವಾದ ಸರ್ಕಾರಿ ಸಂಸ್ಥೆಗಳನ್ನು ಮುಗಿಸುತ್ತಿದ್ದೀರಿ ಆಡಳಿತವನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಏಮ್ಸ್‌ನಲ್ಲಿ ಶೇ 41ರಷ್ಟು ಹುದ್ದೆಗಳು ಖಾಲಿ ಇವೆ ಎಂದ ಖರ್ಗೆ, ಆಸ್ಪತ್ರೆಗಳನ್ನು ಕಟ್ಟಿಸಿದ್ದೇವೆ ಎಂದೆನ್ನುವ ಸರ್ಕಾರಕ್ಕೆ, ಅಲ್ಲಿರುವ ಹುದ್ದೆಗಳನ್ನು ಭರ್ತಿ ಮಾಡಬೇಕು ಎನ್ನುವುದು ಏಕೆ ಮುಖ್ಯವಾಗುತ್ತಿಲ್ಲ ಎಂದು ಪ್ರಶ್ನಿಸಿದ್ದಾರೆ.

ವಾಯುಸೇನೆ ಮತ್ತು ನೌಕಾಪಡೆಯಲ್ಲಿ ಅಗ್ನಿಪಥ ಯೋಜನೆ ಕುರಿತು ಯಾರನ್ನೂ ಸಂಪರ್ಕಿಸದೇ ಪ್ರಧಾನಿ ಮೋದಿ ನಿರ್ಣಯ ಕೈಗೊಂಡರು. ಜನರಲ್ ಎಂ.ಎಂ.ನರವಣೆ ಅವರ ಪ್ರಕಾರ ಅಗ್ನಿಪಥ ಯೋಜನೆಗೆ ಶೇ 75ರಷ್ಟು ಜನರನ್ನು ತೆಗೆದುಕೊಂಡು ಶೇ 25ರಷ್ಟು ಜನರನ್ನು ಬಿಡುಗಡೆಗೊಳಿಸಲಾಗುವುದು ಎಂದಿದ್ದರು. ಆದರೆ ಅದು ಈಗ ತಲೆಕೆಳಗಾಗಿದೆ ಎಂದು ಖರ್ಗೆ ಕಿಡಿಗಾರಿದ್ದಾರೆ

ಈರುಳ್ಳಿ, ಹಾಲು, ಹಿಟ್ಟು, ಅಕ್ಕಿ, ಬೇಳೆಕಾಳುಗಳ ಬೆಲೆ ದ್ವಿಗುಣಗೊಂಡಿದೆ. ಆದರೆ ಮೋದಿ ಸರ್ಕಾರ ಎಂದೂ ಬೆಲೆ ಏರಿಕೆ ಬಗ್ಗೆ ಚಕಾರ ಎತ್ತುತ್ತಿಲ್ಲ. ಕನಿಷ್ಠ ಬೆಂಬಲ ಬೆಲೆ ಮೂಲಕ ರೈತರ ಆದಾಯ ದ್ವಿಗುಣಗೊಳಿಸುವ ಬಗ್ಗೆ ಮೋದಿ ಮಾತನಾಡುತ್ತಾರೆ. ಆದರೆ ಇಂದು ರೈತರ ವಾರ್ಷಿಕ ಆದಾಯ ಶೇ 1.5ರಷ್ಟು ಕುಸಿದಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

Join Whatsapp
Exit mobile version