Home ಟಾಪ್ ಸುದ್ದಿಗಳು ಬಿಜೆಪಿ ಅವಧಿಯಲ್ಲಿ 40% ಕಮೀಷನ್, ಈಗ ಅದಕ್ಕಿಂತಲೂ ಹೆಚ್ಚು: ಕಾಂಗ್ರೆಸ್ ಮಾಜಿ ಶಾಸಕ

ಬಿಜೆಪಿ ಅವಧಿಯಲ್ಲಿ 40% ಕಮೀಷನ್, ಈಗ ಅದಕ್ಕಿಂತಲೂ ಹೆಚ್ಚು: ಕಾಂಗ್ರೆಸ್ ಮಾಜಿ ಶಾಸಕ

ಬೆಂಗಳೂರು: ಬಿಜೆಪಿ ಸರ್ಕಾರದ ಅವಧಿಯಲ್ಲಿ ಶೇ.40% ಕಮೀಷನ್ ದಂಧೆ ನಡೆಯುತ್ತಿದೆ ಎಂಬುದಾಗಿ ಕಿಡಿಕಾರಿದ್ದೆವು. ಈಗ ನಮ್ಮದೇ ಸರ್ಕಾರದಲ್ಲಿ ಅದಕ್ಕಿಂತ ಹೆಚ್ಚು ಕಮೀಷನ್ ದಂಧೆ ನಡೆಯುತ್ತಿದೆ. ಮುಖ್ಯಮಂತ್ರಿ ಸಿದ್ಧರಾಮಯ್ಯ ಎದುರೇ ಇದನ್ನು ಹೇಳಿದ್ದೇನೆ ಎಂದು ಸ್ವ ಪಕ್ಷದ ವಿರುದ್ಧವೇ ಕಾಂಗ್ರೆಸ್ ಮಾಜಿ ಶಾಸಕ ಶಿವರಾಂ ಕಿಡಿಗಾರಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದಂತ ಅವರು, ನಮ್ಮ ಜಿಲ್ಲೆಗೆ ಕೆಟ್ಟ ಹೆಸರು ಬರ್ತಾ ಇದೆ. ಸರಿಯಾಗಿ ಬುದ್ಧಿ ಹೇಳಿ ಅಂತ ನೇರವಾಗೇ ಸಿಎಂಗೆ ಹೇಳಿದೆ. ನಾನೊಬ್ಬನೇ ಅಲ್ಲ ಎಲ್ಲರೂ ಹೇಳಿದ್ದೆವು ಎಂದಿದ್ದಾರೆ.

ಪಕ್ಷ ಉಳಿಯಬೇಕಾದರೆ ಇವುಗಳನ್ನೆಲ್ಲ ಕಾಪಾಡಿಕೊಳ್ಳಬೇಕು. ನಾನು ನೇರವಾಗಿ ಹೇಳಿದ್ದಕ್ಕೆ ನಿಷ್ಟೂರವಾದಿ ನಾನು. ಶೇ.40ರಷ್ಟು ಬಿಜೆಪಿ ಅವಧಿಯಲ್ಲಿ ಕಮೀಷನ್, ಭ್ರಷ್ಟಾಚಾರ ದಂಧೆ ನಡೆಯುತ್ತಿತ್ತು. ಈಗ ಅದಕ್ಕಿಂತ ಹೆಚ್ಚು ಎಂದು ಹೇಳುತ್ತಿದ್ದೇನೆ ಎಂದು ಕಾಂಗ್ರೆಸ್ ಮಾಜಿ ಶಾಸಕ ಆಕ್ರೋಶವನ್ನು ಹೊರ ಹಾಕಿದ್ದಾರೆ.

ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯೆ

ಕಾಂಗ್ರೆಸ್ ಮಾಜಿ ಶಾಸಕನ ಹೇಳಿಕೆಯು ಬಿಜೆಪಿಗೆ ವರದಾನವಾಗಿ ಪರಿಣಮಿಸಿದ್ದು, ಹಿಂದಿನ ಬಿಜೆಪಿ ಸರ್ಕಾರದ ಮೇಲೆ ಮಾಡಿದ್ದ 40% ಕಮಿಷನ್ ಆರೋಪ ಕೇವಲ ಅಪಪ್ರಚಾರ ಎಂದು ಸ್ವತಃ ಕಾಂಗ್ರೆಸ್ ಹಿರಿಯ ನಾಯಕ ಬಿ.ಶಿವರಾಂ ಅವರೇ ಒಪ್ಪಿಕೊಂಡಿದ್ದಾರೆ. ಕಾಂಗ್ರೆಸ್ ಸರ್ಕಾರದಲ್ಲಿ ಅಭಿವೃಧ್ಧಿ ಶೂನ್ಯವಾದರೂ ವರ್ಗಾವಣೆ ದಂಧೆ ಮಾತ್ರ ಜೋರು ಅಂತಲೂ ಪ್ರಾಮಾಣಿಕವಾಗಿ ಒಪ್ಪಿಕೊಂಡಿದ್ದಾರೆ ಎಂದು ವಿಪಕ್ಷ ನಾಯಕ ಆರ್. ಅಶೋಕ್ ಪ್ರತಿಕ್ರಿಯಿಸಿದ್ದಾರೆ.

Join Whatsapp
Exit mobile version