Home ಕರಾವಳಿ ಪ್ರವಾದಿಯನ್ನು ನಿಂದಿಸಿದ್ದ ದುಷ್ಕರ್ಮಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

ಪ್ರವಾದಿಯನ್ನು ನಿಂದಿಸಿದ್ದ ದುಷ್ಕರ್ಮಿಯ ವಿರುದ್ಧ ಬೆಳ್ಳಾರೆ ಠಾಣೆಯಲ್ಲಿ ಪ್ರಕರಣ ದಾಖಲು

►ಕಿಡಿಗೇಡಿಯ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದ SDPI


ಮಂಗಳೂರು: ಪ್ರವಾದಿ ಮುಹಮ್ಮದ್ (ಸ.ಅ)ರನ್ನು ಅಶ್ಲೀಲ ಪದಗಳಿಂದ ನಿಂದಿಸಿದ್ದ ಜಗದೀಶ ಐವರ್ನಾಡುವಿನ ವಿರುದ್ಧ ಬೆಳ್ಳಾರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಫೇಸ್ ಬುಕ್ ಪೋಸ್ಟೊಂದಕ್ಕೆ ಪ್ರತಿಕ್ರಿಯಿಸಿದ್ದ ಜಗದೀಶ ಎಂಬಾತ ಪ್ರವಾದಿಯನ್ನು ಅಶ್ಲೀಲವಾಗಿ ನಿಂದಿಸಿದ್ದ ಎಂದು ಬೆಳ್ಳಾರೆಯ SDPI ಪದಾಧಿಕಾರಿ ನೌಫಲ್ ಎಂಬವರು ಪೊಲೀಸರಿಗೆ ದೂರು ನೀಡಿದ್ದರು.

ಪ್ರವಾದಿಯನ್ನು ನಿಂದಿಸುವ ಮೂಲಕ ಕೋಟ್ಯಂತರ ಜನರ ಭಾವನೆಗಳಿಗೆ ಧಕ್ಕೆ ಉಂಟು ಮಾಡಿದ ಜಗದೀಶ ಐವರ್ನಾಡುವಿನ ಮೇಲೆ ಜಿಲ್ಲಾ ಪೊಲೀಸರು ಕ್ರಮಕೈಗೊಳ್ಳಬೇಕು. ಸಮಾಜದ ಶಾಂತಿಯನ್ನು ಕದಡಲು ಯತ್ನಿಸುವ ಕಿಡಿಗೇಡಿಗಳ ವಿರುದ್ಧ ಮೃದು ಧೋರಣೆ ತಾಳದೆ ಕಠಿಣ ಕಾನೂನು ಕ್ರಮ ಕೈಗೊಂಡು ಅಶಾಂತಿಯನ್ನು ತಡೆಯಬೇಕು ಎಂದು ಎಸ್ ಡಿಪಿಐ ಒತ್ತಾಯಿಸಿತ್ತು.

Join Whatsapp
Exit mobile version