ಹಾಸನದಲ್ಲಿ ಹೆಚ್ಚಾದ ಡೆಂಗ್ಯೂ ಕೇಸ್: ಮೂರು ಮಕ್ಕಳ ಸಾವು

Prasthutha|

ಹಾಸನ: ಜಿಲ್ಲೆಯಲ್ಲಿ ಡೆಂಗ್ಯೂ ಪ್ರಕರಣ ಹೆಚ್ಚಾಗಿ ಮಕ್ಕಳಲ್ಲೇ ಪತ್ತೆಯಾಗುತ್ತಿದೆ. ಒಂದೇ ವಾರದಲ್ಲಿ 15 ವರ್ಷದೊಳಗಿನ ಮೂರು ಹೆಣ್ಣು ಮಕ್ಕಳು ಡೆಂಗ್ಯೂಗೆ ಮೃತಪಟ್ಟಿದ್ದಾರೆ.

- Advertisement -


ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಸೋಂಕಿತರಲ್ಲೂ ಮಕ್ಕಳ ಸಂಖ್ಯೆಯೇ ಹೆಚ್ಚಿದೆ. ಹಿಮ್ಸ್ ನಲ್ಲಿ ಚಿಕಿತ್ಸೆಗೆ ದಾಖಲಾಗಿರುವ 48 ಮಂದಿಯಲ್ಲಿ 11 ಮಕ್ಕಳಿಗೆ ಐಸಿಯುನಲ್ಲಿ ಚಿಕಿತ್ಸೆ ಕೊಡಿಸಲಾಗುತ್ತಿದೆ.


ತಾಲೂಕು ಆಸ್ಪತ್ರೆಯಲ್ಲಿ ಸರಿಯಾಗಿ ಚಿಕಿತ್ಸೆ ಸಿಗದೆ ಜಿಲ್ಲಾಸ್ಪತ್ರೆಗೆ ರೋಗ ಪೀಡಿತರು ಬರುತ್ತಿದ್ದಾರೆ. ಕಳೆದ ಜನವರಿಯಿಂದ ಈವರೆಗೆ 628 ವಯಸ್ಕರು ಹಾಗು 602 ಡೆಂಗ್ಯೂ ಪೀಡಿತ ಮಕ್ಕಳಿಗೆ ಚಿಕಿತ್ಸೆ ಕೊಡಿಸಲಾಗಿದೆ. ಒಳರೋಗಿಗಳಾಗಿ ದಾಖಲಿಸಿ ಹಿಮ್ಸ್ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಜಿಲ್ಲೆಯಲ್ಲಿ ದಿನೇ ದಿನೇ ಡೆಂಗ್ಯೂ ಪೀಡಿತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಈವರೆಗೆ ಒಟ್ಟು ನಾಲ್ವರು ಡೆಂಗ್ಯೂಗೆ ಬಲಿಯಾಗಿದ್ದಾರೆ.

- Advertisement -

ರಾಜ್ಯ ಡೆಂಗ್ಯೂ ಡೆತ್ ಆಡಿಟ್ ಸಮಿತಿ ಎರಡು ಸಾವುಗಳನ್ನ ದೃಡಪಡಿಸಿದೆ. ಇದುವರೆಗೆ ಜಿಲ್ಲೆಯಲ್ಲಿ 6,400 ಜನರಿಗೆ ಡೆಂಗ್ಯೂ ಪರೀಕ್ಷೆ ನಡೆಸಲಾಗಿದೆ. ಡೆಂಗ್ಯೂ ನಿಯಂತ್ರಕ್ಕೆ ಹಲವು ಕ್ರಮ ಕೈಗೊಂಡ ಬಗ್ಗೆ ಹಿಮ್ಸ್ ನಿರ್ದೇಶಕ ಡಾ ಸಂತೋಷ್ ಹಾಗು ಹಿಮ್ಸ್ ಸ್ಥಾನಿಕ ವೈದ್ಯಾಧಿಕಾರಿ ಡಾ ಪ್ರವೀಣ್ ಮಾಹಿತಿ ನೀಡಿದ್ದಾರೆ.

Join Whatsapp
Exit mobile version