ಪ್ರಯಾಗ್ರಾಜ್: ಡೆಂಗ್ಯೂ ರೋಗಿಗೆ ರಕ್ತದ ಪ್ಲೇಟ್ ಲೆಟ್ ಗಳ ಬದಲು ಹಣ್ಣಿನ ರಸವನ್ನು ಡ್ರಿಪ್ ಮಾಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರಯಾಗ್ರಾಜ್ ಅಭಿವೃದ್ಧಿ ಪ್ರಾಧಿಕಾರವು ಅಕ್ಟೋಬರ್ 28ರೊಳಗೆ ಕಟ್ಟಡವನ್ನು ಖಾಲಿ ಮಾಡುವಂತೆ ಗ್ಲೋಬಲ್ ಆಸ್ಪತ್ರೆಗೆ ನೋಟಿಸ್ ನೀಡಿದೆ.
ನಾಗರಿಕ ಪ್ರಾಧಿಕಾರವು ಕಟ್ಟಡವನ್ನು ಕಾನೂನುಬಾಹಿರವಾಗಿ ನಿರ್ಮಿಸಲಾಗಿದೆ. ಗ್ಲೋಬಲ್ ಆಸ್ಪತ್ರೆಗೆ ನೋಟಿಸ್ ನೀಡಿದ್ದು, ಖಾಲಿ ಮಾಡದಿದ್ದರೆ ಆಸ್ಪತ್ರೆಯನ್ನು ಬುಲ್ಡೋಜ್ ಮಾಡುವ ಸಾಧ್ಯತೆಯಿದೆ ಎನ್ನಲಾಗಿದೆ.
ಅವರು ತಪ್ಪಿತಸ್ಥರೆಂದು ಸಾಬೀತಾದರೆ ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಉಪ ಮುಖ್ಯಮಂತ್ರಿ ಬ್ರಜೇಶ್ ಪಾಠಕ್ ಭರವಸೆ ನೀಡಿದ್ದು, ಪ್ಲೇಟ್ ಲೆಟ್ ಗಳ ಪ್ಯಾಕೆಟ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ಅವರು ಹೇಳಿದರು.
“ಪ್ರಯಾಗರಾಜ್ ಜಿಲ್ಲೆಯಲ್ಲಿ ಪ್ಲೇಟ್ ಲೆಟ್ ಗಳ ಬದಲಿಗೆ ಡೆಂಗ್ಯೂ ರೋಗಿಗೆ ‘ಮುಸುಂಬಿ’ ರಸವನ್ನು ನೀಡುವ ಝಲ್ವಾ ಮೂಲದ ಗ್ಲೋಬಲ್ ಆಸ್ಪತ್ರೆಯ ವೈರಲ್ ವೀಡಿಯೊವನ್ನು ಗಮನಿಸಿದ ತಕ್ಷಣ ಆಸ್ಪತ್ರೆಯನ್ನು ಸೀಲ್ ಡೌನ್ ಮಾಡಲಾಗಿದೆ. ಮತ್ತು ಪ್ಲೇಟ್ ಲೆಟ್ ಗಳ ಪ್ಯಾಕೆಟ್ ಅನ್ನು ಪರೀಕ್ಷೆಗೆ ಕಳುಹಿಸಲಾಗಿದೆ. ತಪ್ಪಿತಸ್ಥರೆಂದು ಸಾಬೀತಾದರೆ, ಆಸ್ಪತ್ರೆಯ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು” ಎಂದು ಪಾಠಕ್ ಟ್ವೀಟ್ ಮಾಡಿದ್ದಾರೆ.