Home ಟಾಪ್ ಸುದ್ದಿಗಳು ದೆಹಲಿಯ ಗಾಳಿ ಗುಣಮಟ್ಟ ಅಪಾಯಕಾರಿ ಹಂತ: ಶಾಲೆಗೆ ರಜೆ

ದೆಹಲಿಯ ಗಾಳಿ ಗುಣಮಟ್ಟ ಅಪಾಯಕಾರಿ ಹಂತ: ಶಾಲೆಗೆ ರಜೆ

ನವದೆಹಲಿ: ಚಳಿಗಾಲ ಆರಂಭವಾಗುತ್ತಿದ್ದಂತೆ ರಾಷ್ಟ್ರ ರಾಜಧಾನಿಯ ಹವಾಮಾನ ಅಪಾಯದ ಮಟ್ಟವನ್ನು ತಲುಪಿದೆ. ದೆಹಲಿಯಲ್ಲಿ ಜನ ಮನೆಯಿಂದ ಹೊರಬರಲು ಹಿಂದೇಟಾಕುವಂತಹ ಪರಿಸ್ಥಿತಿ ಎದುರಾಗಿದೆ. ಸಿಎಂ ಕೇಜ್ರಿವಾಲ್ ಶಾಲೆಗಳಿಗೆ ಎರಡು ದಿನಗಳವರೆಗೆ ರಜೆ ಘೋಷಿಸಿದ್ದಾರೆ.

ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಗ್ರೇಡೆಡ್ ಆಕ್ಷನ್ ರೆಸ್ಪಾನ್ಸ್ ಸಿಸ್ಟಂ (ಜಿಆರ್ ಎಪಿ)ಯ ಮೂರನೇ ಹಂತವನ್ನು ಜಾರಿಗೆ ತಂದಿದೆ.

ರಾಜ್ಯ ಸರ್ಕಾರ ದೆಹಲಿ ಮತ್ತು ಗುರುಗ್ರಾಮ್, ಫರಿದಾಬಾದ್, ಗಾಜಿಯಾಬಾದ್ ಮತ್ತು ಗೌತಮ್ ಬುದ್ಧ ನಗರ ಜಿಲ್ಲೆಗಳಲ್ಲಿ BS III ಪೆಟ್ರೋಲ್ ಮತ್ತು BS IV ಡೀಸೆಲ್ LMV ಗಳ 4 ಚಕ್ರದ ವಾಹನಗಳ ಸಂಚಾರವನ್ನು ಕಟ್ಟುನಿಟ್ಟಾಗಿ ನಿರ್ಬಂಧಿಸಿದೆ. ಜೊತೆಗೆ ಈ ಪ್ರದೇಶದಲ್ಲಿನ ಐದನೇ ತರಗತಿವರೆಗಿನ ಶಾಲೆಗಳಿಗೆ ರಾಜ್ಯ ಸರ್ಕಾರ ಎರಡು ದಿನ ರಜೆಯನ್ನು ಘೋಷಿಸಿದೆ. ಸಾಧ್ಯವಾದಷ್ಟು ಆನ್‌ಲೈನ್‌ನಲ್ಲಿ ತರಗತಿ ಮಾಡಲು ಶಾಲಾ ಆಡಳಿತಗಳಿಗೆ ಸೂಚನೆ ನೀಡಿದೆ.

Join Whatsapp
Exit mobile version