Home ಟಾಪ್ ಸುದ್ದಿಗಳು ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರ : ದೆಹಲಿ ಪೊಲೀಸರಿಂದ 25 ಎಫ್ಐಆರ್, ಆದರೆ ಚಾರ್ಜ್ ಶೀಟ್ ಕೇವಲ...

ಟ್ರ್ಯಾಕ್ಟರ್ ಪೆರೇಡ್ ಹಿಂಸಾಚಾರ : ದೆಹಲಿ ಪೊಲೀಸರಿಂದ 25 ಎಫ್ಐಆರ್, ಆದರೆ ಚಾರ್ಜ್ ಶೀಟ್ ಕೇವಲ ಒಂದು !

New Delhi: Tear gas used to disperse farmers attempting to break barricades for the 'Kisan Gantantra Parade' in protest against Centre's farm reform laws, on the occasion of 72nd Republic Day, near Akshardham in New Delhi, Tuesday, Jan. 26, 2021. (PTI Photo/Arun Sharma)(PTI01_26_2021_000078A)

ದೆಹಲಿ ಜುಲೈ 17 :  2021ರ ಜನವರಿ 26 ರಂದು ಗಣರಾಜ್ಯೋತ್ಸದ ಪ್ರಯುಕ್ತ ರಾಷ್ಟ್ರ ರಾಜಧಾನಿಯಲ್ಲಿ ರೈತರು ಆಯೋಜಿಸಿದ ಟ್ರಾಕ್ಟರ್ ರಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದಲ್ಲಿ ದೆಹಲಿ ಪೊಲೀಸರಿಂದ 25 ಎಫ್.ಐ.ಆರ್ ದಾಖಲಾಗಿದ್ದು, ಸರಿಸುಮಾರು 151 ಕ್ಕೂ ಮಿಕ್ಕಿದ ಜನರನ್ನು ಬಂಧಿಸಿದ್ದರು. ಆದರೆ ದೆಹಲಿ ಪೊಲೀಸರು ಸಾಕ್ಷಾಧಾರದ ಕೊರತೆಯ ಹಿನ್ನೆಲೆಯಲ್ಲಿ ನ್ಯಾಯಾಲಯಕ್ಕೆ ಕೇವಲ ಒಂದು ಚಾರ್ಜ್‌ಶೀಟ್ ಸಲ್ಲಿದ್ದಾರೆಂದು ಹೇಳಲಾಗುತ್ತಿದೆ.

ಕೇಂದ್ರ ಸರ್ಕಾರ ಜಾರಿಗೆ ತಂದಿರುವ ನೂತನ ಕೃಷಿ ಕಾನೂನುಗಳನ್ನು ರದ್ದುಗೊಳಿಸುವಂತೆ ಕೋರಿ ಕಳೆದ ಒಂಬತ್ತು ತಿಂಗಳಿಂದ ರಾಷ್ಟ್ರ ರಾಜಧಾನಿ ಗಡಿಯಲ್ಲಿ ರೈತರು ರಾತ್ರಿ ಹಗಲೆನ್ನದೆ ಪ್ರತಿಭಟನೆ ನಡೆಸುತ್ತಿದ್ದಾರೆ. ಸರ್ಕಾರದೊಂದಿಗಿನ ಹಲವಾರು ಸುತ್ತಿನ ಮಾತುಕತೆಗಳು ನಡೆದರೂ ಕೂಡ ಬಿಕ್ಕಟ್ಟನ್ನು ಕೊನೆಗೊಳಿಸಲು ನರೇಂದ್ರ ಮೋದಿ ಸರ್ಕಾರ ವಿಫಲವಾಗಿವೆ.

ಗಣರಾಜ್ಯೋತ್ಸದ ಪ್ರಯುಕ್ತ ರಾಷ್ಟ್ರ ರಾಜಧಾನಿಯಲ್ಲಿ ರೈತರು ಆಯೋಜಿಸಿದ ಟ್ರಾಕ್ಟರ್ ರ್ಯಾಲಿ ಸಂದರ್ಭದಲ್ಲಿ ನಡೆದ ಹಿಂಸಾಚಾರದ ವೇಳೆ ಪೊಲೀಸರ ಲಾಠಿಚಾರ್ಜ್ ನಿಂದ ಆಕ್ರೋಶಿತಗೊಂಡ ರೈತರ ಗುಂಪು ಕೆಂಪು ಕೋಟೆಯಲ್ಲಿ ಹಿಂಸಾಚಾರಕ್ಕೆ ಇಳಿದಿತ್ತು. ಈ ಕುರಿತು ಮೇ 17 ರಂದು ದೆಹಲಿ ಪೊಲೀಸರ ಅಪರಾಧ ವಿಭಾಗವು ನ್ಯಾಯಾಲಯಕ್ಕೆ ಚಾರ್ಜ್‌ಶೀಟ್‌ ಸಲ್ಲಿಸಿ, ಪಂಜಾಬಿ ನಟ ದೀಪ್ ಸಿದು ಮತ್ತು ಇಕ್ಬಾಲ್ ಸಿಂಗ್ ಸೇರಿದಂತೆ 16 ಜನರ ವಿರುದ್ದ ಫೇಸ್‌ಬುಕ್ ನಲ್ಲಿ ಲೈವ್ ನೀಡಿದ ಆರೋಪ ಹೊರಿಸಿತ್ತು ಮತ್ತು ಇವರು ಪ್ರತಿಭಟನಾಕಾರರನ್ನು ಪ್ರಚೋದಿಸುತ್ತಿದ್ದರು ಪೊಲೀಸರು ನ್ಯಾಯಾಲಯದಲ್ಲಿ ಅಫಿದವಿತ್ ಸಲ್ಲಿಸಿದ್ದಾರೆ.

Join Whatsapp
Exit mobile version