Home ಟಾಪ್ ಸುದ್ದಿಗಳು ಕೇಜ್ರಿವಾಲ್ ಮನೆಗೆ ದಾಳಿ ಪ್ರಕರಣ : ಸಂಸದ ತೇಜಸ್ವಿ ಸೂರ್ಯರನ್ನು ವಿಚಾರಣೆ ಮಾಡಿದ ದೆಹಲಿ ಪೊಲೀಸ್

ಕೇಜ್ರಿವಾಲ್ ಮನೆಗೆ ದಾಳಿ ಪ್ರಕರಣ : ಸಂಸದ ತೇಜಸ್ವಿ ಸೂರ್ಯರನ್ನು ವಿಚಾರಣೆ ಮಾಡಿದ ದೆಹಲಿ ಪೊಲೀಸ್

ನವದೆಹಲಿ: ದೆಹಲಿ‌ ಮುಖ್ಯಮಂತ್ರಿ ಕೇಜ್ರಿವಾಲ್ ವಿರುದ್ಧದ ಪ್ರತಿಭಟನೆ ಸಂದರ್ಭದಲ್ಲಿ ಬ್ಯಾರಿಕೇಡ್‌ಗಳನ್ನು ಭೇದಿಸಿ ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ಸಂಸದ ತೇಜಸ್ವಿ ಸೂರ್ಯ ಅವರನ್ನು ದೆಹಲಿ ಪೊಲೀಸರು ಎರಡು ಗಂಟೆಗಳ ಕಾಲ ತೀವ್ರ ವಿಚಾರಣೆಗೆ ಒಳಪಡಿಸಿದ್ದಾರೆ.

ಕಳೆದ ಎರಡು ತಿಂಗಳ ಹಿಂದೆ ಬಿಜೆಪಿ ಯುವ ಮೋರ್ಚಾವು ಕೇಜ್ರಿವಾಲ್ ಮನೆಗೆ ಮುತ್ತಿಗೆ ಹಾಕಿ ಮುಖ್ಯ ಗೇಟ್‌ನಲ್ಲಿ ಪ್ರತಿಭಟನೆ ನಡೆಸಿದ್ದು, ಈ ಸಂಬಂಧ ತೇಜಸ್ವಿ ಸೂರ್ಯ ಸಹಿತ ಎಂಟು ಮಂದಿ ಕಾರ್ಯಕರ್ತರನ್ನು ಬಂಧಿಸಲಾಗಿತ್ತು.

ಇದಾಗಿ ಎರಡು ತಿಂಗಳ ಬಳಿಕ ಪೊಲೀಸರು ವಿಚಾರಣೆಗೆ ಕರೆಯಲಾಗಿದ್ದು, ತೇಜಸ್ವಿ ಸೂರ್ಯ ಅವರಿಗೆ ಸಿಆರ್‌ಪಿಸಿ ಸೆಕ್ಷನ್ 41 ಎ ಅಡಿಯಲ್ಲಿ ನೊಟೀಸ್ ಜಾರಿ ಮಾಡಲಾಗಿ‍ದೆ.

Join Whatsapp
Exit mobile version