Home Uncategorized ದಿಲ್ಲಿ ಸಿಎಂ ಮನೆ ಧ್ವಂಸಗೊಳಿಸಿದ್ದ ಕಾರ್ಯಕರ್ತರನ್ನು ‘ಕ್ರಾಂತಿಕಾರಿ’ಗಳೆಂದು ಬಣ್ಣಿಸಿ ಸನ್ಮಾನಿಸಿದ ಬಿಜೆಪಿ

ದಿಲ್ಲಿ ಸಿಎಂ ಮನೆ ಧ್ವಂಸಗೊಳಿಸಿದ್ದ ಕಾರ್ಯಕರ್ತರನ್ನು ‘ಕ್ರಾಂತಿಕಾರಿ’ಗಳೆಂದು ಬಣ್ಣಿಸಿ ಸನ್ಮಾನಿಸಿದ ಬಿಜೆಪಿ

ನವದೆಹಲಿ: ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಮನೆ ಮೇಲೆ ದಾಳಿ ನಡೆಸಿ ಧ್ವಂಸಗೈದಿದ್ದ ಬಿಜೆಪಿ ಯುವ ಮೋರ್ಚಾದ ಕಾರ್ಯಕರ್ತರನ್ನು ಕ್ರಾಂತಿಕಾರಿಗಳೆಂದು ಬಣ್ಣಿಸಿರುವ ಬಿಜೆಪಿಯು ಅವರನ್ನು ಸನ್ಮಾನಿಸಿದೆ.


ಕೇಜ್ರಿವಾಲ್ ನಿವಾಸ ಧ್ವಂಸಗೊಳಿಸಿ ಬಂಧಿತರಾಗಿದ್ದ ಯುವ ಮೋರ್ಚಾ ಕಾರ್ಯಕರ್ತರಿಗೆ ಜಾಮೀನು ದೊರಕಿತ್ತು. ಬಿಜೆಪಿ ದೆಹಲಿ ಘಟಕವು ಶುಕ್ರವಾರ ಎಂಟು ಮಂದಿ ಕಾರ್ಯಕರ್ತರನ್ನು ಹೂಮಾಲೆಯೊಂದಿಗೆ ಸನ್ಮಾನಿಸಿ , ಕ್ರಾಂತಿಕಾರಿಗಳೆಂದು ಬಣ್ಣಿಸಿದೆ.


ಟ್ವೀಟ್ ನಲ್ಲಿ ಪೋಟೊ ಹಂಚಿರುವ ದೆಹಲಿ ಬಿಜೆಪಿ ಅಧ್ಯಕ್ಷ ಆದೇಶ್ ಗುಪ್ತಾ “ಹಿಂದೂ ವಿರೋಧಿ ಕೇಜ್ರಿವಾಲ್ ವಿರುದ್ಧ ಪ್ರತಿಭಟನೆ ನಡೆಸಿ ಜೈಲಿಗೆ ಹೋದ ಯುವಮೊರ್ಚಾದ ಎಂಟು ಕಾರ್ಯಕರ್ತರು 14 ದಿನಗಳ ನಂತರ ನ್ಯಾಯಾಲಯದಿಂದ ಜಾಮೀನು ಪಡೆದರು. ಈ ಯುವ ಕ್ರಾಂತಿಕಾರಿಗಳನ್ನು ಸ್ವಾಗತಿಸಲಾಯಿತು. ನಮ್ಮ ಪ್ರತಿಯೊಬ್ಬ ಕಾರ್ಯಕರ್ತರು ಹಿಂದೂ ವಿರೋಧಿ ಶಕ್ತಿಗಳ ವಿರುದ್ಧ ಹೋರಾಡುತ್ತಲೇ ಇರುತ್ತಾರೆ” ಎಂದು ಹೇಳಿದ್ದಾರೆ.

Join Whatsapp
Exit mobile version