Home ಟಾಪ್ ಸುದ್ದಿಗಳು ಈಶಾನ್ಯ, ಜಮ್ಮು ಕಾಶ್ಮೀರದಿಂದ AFSPA ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಚಿಂತನೆ: ರಾಜನಾಥ್ ಸಿಂಗ್

ಈಶಾನ್ಯ, ಜಮ್ಮು ಕಾಶ್ಮೀರದಿಂದ AFSPA ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ಚಿಂತನೆ: ರಾಜನಾಥ್ ಸಿಂಗ್

ನವದೆಹಲಿ: ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯುವ ಸೂಚನೆ ನೀಡಿದ ಕೇಂದ್ರ ರಕ್ಷಣಾ ಸಚಿವ ರಾಜನಾಥ್ ಸಿಂಗ್, ರಕ್ಷಣಾ ಪಡೆಗಳು ಈಶಾನ್ಯ ಮತ್ತು ಜಮ್ಮು ಕಾಶ್ಮೀರದಿಂದ ವಿವಾದಾತ್ಮಕ ಕಾಯ್ದೆಯನ್ನು ಹಿಂಪಡೆಯಲು ಬಯಸುತ್ತಿದೆ ಎಂದು ತಿಳಿಸಿದ್ದಾರೆ.

ವಿವಾದಾತ್ಮಕ ಕಾಯ್ದೆಯನ್ನು ಇತ್ತೀಚೆಗೆ ಮೂರು ಈಶಾನ್ಯ ರಾಜ್ಯಗಳಾದ ನಾಗಾಲ್ಯಾಂಡ್, ಅಸ್ಸಾಮ್ ಮತ್ತು ಅರುಣಾಚಲ ಪ್ರದೇಶದಿಂದ ಭಾಗಶಃ ಹಿಂಪಡೆಯಲಾಗಿತ್ತು.

ಸಶಸ್ತ್ರ ಪಡೆಗಳ ವಿಶೇಷ ಅಧಿಕಾರ (AFSPA) ಕಾಯ್ದೆ 1958 ಅಡಿಯಲ್ಲಿ ಸಶಸ್ತ್ರ ಪಡೆಗಳ ಕಾರ್ಯಾಚರಣೆಗೆ ಅನುಕೂಲವಾಗುವಂತೆ ಭೌಗೋಳಿಕ ಸ್ಥಳವನ್ನು ಸಂಘರ್ಷದ ಪ್ರದೇಶವೆಂದು ಘೋಷಿಸಲಾಗಿದೆ.

ಈ ಮಧ್ಯೆ ಈಶಾನ್ಯವನ್ನು ಹೊರತುಪಡಿಸಿ ಜಮ್ಮು ಮತ್ತು ಕಾಶ್ಮೀರದಿಂದ ಕರಾಳ ಕಾಯ್ದೆಯನ್ನು ಸಂಪೂರ್ಣವಾಗಿ ಹಿಂಪಡೆಯಲು ನಿರಂತರ ಬೇಡಿಕೆ ಮತ್ತು ಪ್ರತಿಭಟನೆ ನಡೆಯುತ್ತಾ ಬಂದಿದೆ.

Join Whatsapp
Exit mobile version